ಬಂಗಾಳದಲ್ಲಿ 9 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಮತ್ತು ಕೊಲೆ: ಆಕ್ರೋಶಿತ ಗ್ರಾಮಸ್ಥರಿಂದ ಪೊಲೀಸ್ ಠಾಣೆಗೆ ಬೆಂಕಿ !

ಪೊಲೀಸರು ದೂರನ್ನು ಗಂಭೀರವಾಗಿ ಪರಿಗಣಿಸಿದ್ದರಿಂದ ಗ್ರಾಮಸ್ಥರ ತೀವ್ರ ನಡೆ!

ದಕ್ಷಿಣ ೨೪ ಪರಗಣ (ಬಂಗಾಳ) – ದಕ್ಷಿಣ ೨೪ ಪರಗಣ ಜಿಲ್ಲೆಯಲ್ಲಿನ ಕೃಪಾಖಾಲಿ ಗ್ರಾಮದಲ್ಲಿ ಓರ್ವ ೯ ವರ್ಷದ ಹುಡುಗಿಯ ಮೇಲೆ ಬಲಾತ್ಕಾರ ನಡೆಸಿ ಹತ್ಯೆ ಮಾಡಿರುವ ಘಟನೆಯ ನಂತರ ಆಕ್ರೋಶಗೊಂಡಿರುವ ಗ್ರಾಮಸ್ಥರು ಪೊಲೀಸ ಠಾಣೆಗೆ ಬೆಂಕಿ ಹಚ್ಚಿದರು.

ಅಕ್ಟೋಬರ್ ೪ ರಂದು ಹುಡುಗಿ ಮಧ್ಯಾಹ್ನ ಟ್ಯೂಶನ್‌ಗೆ ಹೋಗಿದ್ದಳು. ಆಕೆ ಮನೆಗೆ ಹಿಂತಿರುಗದೆ ಇರುವುದರಿಂದ ಕುಟುಂಬದವರು ಆಕೆಯನ್ನು ಹುಡುಕಾಡಲು ಆರಂಭಿಸಿದರು; ಆದರೆ ಆಕೆ ಸಿಗದೇ ಇರುವುದರಿಂದ ಅವರು ಪೊಲೀಸರ ಬಳಿ ಕಾಣೆಯಾಗಿರುವ ಬಗ್ಗೆ ದೂರು ನೀಡಲು ಹೋದಾಗ ಸ್ಥಳೀಯ ಪೊಲೀಸರು ಅವರಿಗೆ ಬೇರೆ ಪೊಲೀಸ ಠಾಣೆಗೆ ಹೋಗಿ ದೂರು ನೀಡಲು ಹೇಳಿದರು. ಅದೇ ರಾತ್ರಿ ಗ್ರಾಮದ ಹತ್ತಿರದ ಕೆರೆಯಲ್ಲಿ ಹುಡುಗಿಯ ಶವ ಪತ್ತೆಯಾಗಿದ್ದರಿಂದ ಪರಿಸರದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಯಿತು.
ಅಕ್ಟೋಬರ್ ೫ ರಂದು ಬೆಳಿಗ್ಗೆ ಗ್ರಾಮಸ್ಥರು ಸ್ಥಳೀಯ ಪೊಲೀಸ ಠಾಣೆಗೆ ಮುತ್ತಿಗೆ ಹಾಕಿದರು. ಈ ಸಮಯದಲ್ಲಿ ಅಲ್ಲಿ ಉಪ ವಿಭಾಗೀಯ ಪೊಲೀಸ ಅಧಿಕಾರಿ ಆತೀಶ್ ಬಿಶ್ವಾಸ್ ಉಪಸ್ಥಿತರಿದ್ದರು. ಆ ಸಮಯದಲ್ಲಿ ಗ್ರಾಮಸ್ಥರು ಪೊಲೀಸ ಠಾಣೆಯಲ್ಲಿ ಧ್ವಂಸ ನಡೆಸಿ ಬೆಂಕಿ ಹಚ್ಚಿದರು. ಗುಂಪನ್ನು ಚದರಿಸುವುದಕ್ಕಾಗಿ ಪೊಲೀಸರು ಲಾಠಿಚಾರ್ಜ್ ಮಾಡಿದರು.

ಪೊಲೀಸರು ಬಲಾತ್ಕಾರದ ಘಟನೆ ಬಗ್ಗೆ ಹೇಳಿರುವುದು, ನಾವು ಆರೋಪಿಯನ್ನು ಗುರುತಿಸಿದ್ದೆವೆ ಮತ್ತು ಅವನನ್ನು ಬಂಧಿಸಿದ್ದೇವೆ. ಅವನು ಅಪರಾಧ ಮಾಡಿದ್ದಾನೆಂದು ಒಪ್ಪಿಕೊಂಡಿದ್ದಾನೆ. ಅಪರಾಧದ ಮಾಹಿತಿ ದೊರೆಯುತ್ತಲೇ ನಾವು ತತ್ಬರತೆಯಿಂದ ಕ್ರಮ ಕೈಗೊಂಡಿದ್ದೇವೆ. ಆದರೂ ಕೂಡ ಜನರು ಆರೋಪಿಸುತ್ತಿದ್ದರೆ, ನಾವು ಅದರ ಕಡೆ ಖಂಡಿತವಾಗಿಯೂ ಗಮನ ನೀಡುತ್ತೇವೆ ಎಂದು ಹೇಳಿದರು.

ಭಾಜಪದ ನಾಯಕ ಮತ್ತು ಕೇಂದ್ರ ಸಚಿವ ಸುಕಾಂತೋ ಮುಜುಮುದಾರ್ ಇವರು ವಾಗ್ದಾಳಿ ನಡೆಸುತ್ತಾ, ಮನೆಯಲ್ಲಿನ ದುರ್ಗೆ ಸುರಕ್ಷಿತವಾಗಿಲ್ಲದಿದ್ದರೆ, ಯಾವ ದುರ್ಗೆಯ ಪೂಜೆ ಮಾಡಬೇಕು? ಇದೆಲ್ಲಾ ಮಮತಾ ಬ್ಯಾನರ್ಜಿ ಇವರಿಂದಲೇ ನಡೆಯುತ್ತಿದೆ. ಬ್ಯಾನರ್ಜಿ ಇವರು, ಪೊಲೀಸರು ಸುಲಭವಾಗಿ ದೂರುಗಳನ್ನು ದಾಖಲಿಸಿ ಕೊಳ್ಳಬಾರದು !’ ಎಂದು ಸಂದೇಶ ನೀಡಿದ್ದಾರೆ.

೨. ಅಕ್ಟೋಬರ್ ೫ ರಂದು ಬೆಳಿಗ್ಗೆ ಗ್ರಾಮಸ್ಥರು ಸ್ಥಳೀಯ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿದರು. ಆ ಸಮಯದಲ್ಲಿ ಅಲ್ಲಿ ಉಪ ವಿಭಾಗೀಯ ಪೊಲೀಸ ಅಧಿಕಾರಿ ಆತೀಶ ಬಿಸ್ವಾಸ್ ಉಪಸ್ಥಿತರಿದ್ದರು. ಗ್ರಾಮಸ್ಥರು ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿದರು. ಅವರು ಪೊಲೀಸ ಅಧಿಕಾರಿಯನ್ನು ಒತ್ತೆಯಾಗಿ ಇಟ್ಟುಕೊಳ್ಳಲು ಪ್ರಯತ್ನಿಸಿದರು. ಓರ್ವ ಪೊಲೀಸ್ ಅಧಿಕಾರಿಯು, ಜನರು ಪೊಲೀಸ ಠಾಣೆಯ ಹೊರಗೆ ನಿಂತಿದ್ದ ಅನೇಕ ವಾಹನಗಳನ್ನು ಧ್ವಂಸಗೊಳಿಸಿದ್ದಾರೆ. ಪೊಲೀಸರು ಜನರ ಆಕ್ರೋಶ ನೋಡಿ ಪೊಲೀಸ ಠಾಣೆ ಬಿಟ್ಟು ಓಡಿ ಹೋದರು. ಅದರ ನಂತರ ಪರಿಸರದಲ್ಲಿ ಪೊಲೀಸ್ ಪಡೆಗಳನ್ನು ಕಳುಹಿಸಲಾಯಿತು. ಅದರ ನಂತರ ಪೊಲೀಸರು ಗ್ರಾಮಸ್ಥರ ಮೇಲೆ ಅಶ್ರುವಾಯು ಪ್ರಯೋಗ ಮಾಡಿದರು. ಆ ಸಮಯದಲ್ಲಿ ಗ್ರಾಮಸ್ಥರು ಪೊಲೀಸ ಠಾಣೆಯನ್ನು ಧ್ವಂಸಗೊಳಿಸಿ ಬೆಂಕಿ ಹಚ್ಚಿದರು. ಗುಂಪನ್ನು ಚದರಿಸಲು ಪೊಲೀಸರು ಲಾಠಿಚಾರ್ಜ್ ಮಾಡಿದರು.

೩. ನಮ್ಮ ಹುಡುಗಿಯ ಮೇಲೆ ಬರಲಾತ್ಕಾರ ಮತ್ತು ಹತ್ಯೆಯ ಪ್ರಕರಣದಲ್ಲಿನ ಎಲ್ಲಾ ಆರೋಪಿಗಳಿಗೆ ಎಲ್ಲಿಯವರೆಗೆ ಶಿಕ್ಷೆ ಆಗುವುದಿಲ್ಲವೋ, ಅಲ್ಲಿಯವರೆಗೆ ನಾವು ನಮ್ಮ ಪ್ರತಿಭಟನೆ ಮುಂದುವರೆಸುತ್ತೇವೆ ಎಂದು ಜನರು ಹೇಳಿದ್ದಾರೆ. ಕ್ರಮ ಕೈಗೊಳ್ಳುವುದಕ್ಕಾಗಿ ಹಿಂದೆ ಮುಂದೆ ನೋಡುವ ಪೊಲೀಸ ಅಧಿಕಾರಿಗಳ ಮೇಲೆ ಕೂಡ ಕ್ರಮ ಕೈಗೊಳ್ಳಬೇಕು. ಪೊಲೀಸರು ತಕ್ಷಣ ಕ್ರಮ ಕೈಗೊಂಡಿದ್ದರೆ ಹುಡುಗಿಯನ್ನು ರಕ್ಷಿಸಬಹುದಾಗಿತ್ತೆಂದು ಜನರ ಅಭಿಪ್ರಾಯವಾಗಿದೆ.

೪. ಸ್ಥಳೀಯ ಶಾಸಕ ಗಣೇಶ ಮಂಡಲ್ ಇವರು ಗ್ರಾಮಸ್ಥರನ್ನು ಸಮಾಧಾನ ಗೊಳಿಸುವ ಪ್ರಯತ್ನ ಮಾಡುತ್ತಿರುವಾಗ ಗ್ರಾಮಸ್ಥರು ಅವರನ್ನೇ ಓಡಿಸಿದರು. ಮಂಡಲ್ ಇವರು ನಂತರ ಪ್ರಸಾರ ಮಾಧ್ಯಮಗಳಿಗೆ, ಅವರಿಗೆ ಜನರ ಆಕ್ರೋಶ ಅರ್ಥ ಆಗುತ್ತದೆ; ಆದರೆ ಅವರು ಕಾನೂನನ್ನು ಕೈಗೆತ್ತಿಕೊಳ್ಳಬಾರದು ಎಂದು ಹೇಳಿದರು.

ಸಂಪಾದಕೀಯ ನಿಲುವು

ಬಂಗಾಳದಲ್ಲಿ ಹದಗೆಟ್ಟಿದ ಕಾನೂನು ಮತ್ತು ಸುವ್ಯವಸ್ಥೆ ! ಈ ವಿಷಯವಾಗಿ ತಥಾಕಥಿತ ಸಂವಿಧಾನ ಪ್ರೇಮಿ ರಾಜಕೀಯ ಪಕ್ಷ ಬಾಯಿ ತೆರೆಯುವುದಿಲ್ಲ, ಇದನ್ನು ತಿಳಿಯಿರಿ !