ತಿರುಪತಿ – ತಿರುಪತಿ ಲಡ್ಡು ತಯಾರಿಸುವುದಕ್ಕಾಗಿ ಗೋಮಾಂಸದಿಂದ ತಯಾರಿಸಿದ ತುಪ್ಪವನ್ನು ಬಳಸಲಾಗುತ್ತಿತ್ತು. ಈ ಕಲಬೆರಕೆ ಅಂದರೆ ಸನಾತನ ಧರ್ಮದ ಮೇಲಿನ ದಾಳಿ ಎಂದು ಆಂಧ್ರಪ್ರದೇಶದ ಉಪಮುಖ್ಯಮಂತ್ರಿ ಹಾಗೂ ಜನಸೇನಾ ಪಕ್ಷದ ಮುಖ್ಯಸ್ಥ ಪವನ್ ಕಲ್ಯಾಣ್ ಇಲ್ಲಿ ತೀಕ್ಷ್ಮ ಮಾತುಗಳಿಂದ ವ್ಯಕ್ತಪಡಿಸಿದ್ದಾರೆ. ಹಿಂದಿನ ಸರಕಾರದ ಅವಧಿಯಲ್ಲಿ ಹಲವು ಪ್ರಕರಣಗಳು ಮತ್ತು ಹಗರಣಗಳು ಘಟಿಸಿವೆ. ಅದರಲ್ಲಿ ಈ ಪ್ರಕರಣವು ಒಂದು ಸಣ್ಣ ಭಾಗವಾಗಿದೆ. ಹಿಂದಿನ ಸರಕಾರದ ಇಂತಹ ಅನೇಕ ನಿರ್ಣಯಗಳ ತನಿಖೆಯಾಗುವುದು ಅವಶ್ಯಕ ಇದೆ ಎಂದು ಪವನ್ ಕಲ್ಯಾಣ್ ತಿರುಪತಿ ದೇವಸ್ಥಾನಕ್ಕೆ ಭೇಟಿ ನೀಡಿದ ನಂತರ ಒಂದು ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಿದ್ದರು.
ಹಿಂದೂದ್ವೇಷಿ ಉದಯನಿಧಿ ಸ್ಟಾಲಿನ್ ಇವರ ಮೇಲೆ ಗುರಿ !
ತಮಿಳುನಾಡು ಉಪಮುಖ್ಯಮಂತ್ರಿ ಉದಯನಿಧಿ ಸ್ಟಾಲಿನ್ ಅವರು ಸನಾತನ ಧರ್ಮದ ಬಗ್ಗೆ ಅವಹೇಳನಕಾರಿ ಭಾಷಣ ಮಾಡಿದ್ದಾರೆ ಎಂದು ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ ಟೀಕಿಸಿದ್ದಾರೆ. “ಯಾರಾದರೂ ಸನಾತನ ಧರ್ಮವನ್ನು ನಾಶ ಮಾಡಲು ಪ್ರಯತ್ನಿಸಿದರೆ, ನಾನು ಭಗವಾನ ಬಾಲಾಜಿಯ ಪಾದಗಳಿಗೆ ನಮಸ್ಕರಿಸಿ, ಈ ರೀತಿಯಲ್ಲಿ ಹೇಳುವವರು ನಾಶವಾಗುತ್ತಾರೆ ಎಂದು ಹೇಳುವೆ, ಎಂದು ಹೇಳಿದರು. ಸನಾತನ ಧರ್ಮದ ರಕ್ಷಣೆಗೆ ದೇಶದಲ್ಲಿ ಕಾನೂನು ರೂಪಿಸುವ ಅಗತ್ಯವಿದೆ. ಸನಾತನ ಧರ್ಮ ರಕ್ಷಕ ಮಂಡಳಿಯನ್ನು ಸ್ಥಾಪಿಸಬೇಕಾಗಿದೆ ಮತ್ತು ಅದಕ್ಕೆ ರಾಷ್ಟ್ರ ಮತ್ತು ರಾಜ್ಯ ಮಟ್ಟದಲ್ಲಿ ಸಮರ್ಪಕವಾಗಿ ಅನುದಾನ ನೀಡಬೇಕು. ನಾನು ಸನಾತನಿ ಹಿಂದೂ ಇದ್ದೇನೆ ಮತ್ತು ಹಿಂದೂ ಧರ್ಮಕ್ಕಾಗಿ ಎಲ್ಲವನ್ನೂ ತ್ಯಾಗ ಮಾಡಲು ನನ್ನ ಸಿದ್ದತೆ ಇದೆ. ನಿಮ್ಮಂತಹ (ಉದಯನಿಧಿ ಸ್ಟಾಲಿನ್ ಅವರಂತೆ) ಜನರು ಬರುತ್ತಾರೆ ಮತ್ತು ಹೋಗುತ್ತಾರೆ; ಆದರೆ ಸನಾತನ ಧರ್ಮ ಶಾಶ್ವತವಾಗಿ ಉಳಿಯುತ್ತದೆ.” ಎಂದು ತೀಕ್ಷ್ಣವಾಗಿ ಉತ್ತರಿಸಿದ್ದಾರೆ.
ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ ಅವರು ತಿರುಪತಿ ದೇವಸ್ಥಾನದ ಪ್ರಸಾದದಲ್ಲಿ (ಲಾಡುವಿನಲ್ಲಿ) ಗೋಮಾಂಸದಿಂದ ತಯಾರಿಸಿದ ತುಪ್ಪದ ಲಾಡು ಸೇವಿಸಿದ ನಂತರ 11 ದಿನಗಳ ಕಾಲ ಉಪವಾಸ ಮಾಡಿ ಪ್ರಾಯಶ್ಚಿತ್ತ ತೆಗೆದುಕೊಂಡರು. ಆ ನಂತರ ಅವರು ತಿರುಪತಿ ದೇವಸ್ಥಾನಕ್ಕೆ ಭೇಟಿ ನೀಡಿದರು.