ಅಲ್ವರ್ (ರಾಜಸ್ಥಾನ) – ದೇಶದಲ್ಲಿ ಏನಾದರೂ ಒಳ್ಳೆಯದಾದರೆ, ಹಿಂದೂ ಸಮುದಾಯದ ಕೀರ್ತಿ ಹೆಚ್ಚಾಗುತ್ತದೆ. ಏನಾದರೂ ತಪ್ಪಾದರೆ ಅದರ ಹೊಣೆಗಾರಿಕೆಯೂ ಹಿಂದೂ ಸಮಾಜದ ಮೇಲಿರುತ್ತದೆ; ಏಕೆಂದರೆ ಅವರು ಈ ದೇಶದ ನಾಯಕರು ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸರಸಂಗಚಾಲಕ್ ಡಾ. ಮೋಹನ್‌ಜಿ ಭಾಗವತ್ ಹೇಳಿದರು. ಇಲ್ಲಿನ ಇಂದಿರಾಗಾಂಧಿ ಕ್ರೀಡಾಂಗಣದಲ್ಲಿ ಸ್ವಯಂಸೇವಕರನ್ನುದ್ದೇಶಿಸಿ ಅವರು ಮಾತನಾಡುತ್ತಿದ್ದರು.
ಸರಸಂಗಚಾಲಕ್ ಮಂಡಿಸಿದ ಸೂತ್ರಗಳು
1. ಯಾವುದಕ್ಕೆ ಹಿಂದೂ ಧರ್ಮ ಎಂದು ಹೇಳುತ್ತೇವೆ ಅದು ನಿಜವಾದ ಅರ್ಥದಲ್ಲಿ ಮಾನವೀಯತೆಯ ಧರ್ಮವಾಗಿದೆ. ಇದು ವಿಶ್ವ ಧರ್ಮವಾಗಿದೆ ಮತ್ತು ಎಲ್ಲರ ಕಲ್ಯಾಣವನ್ನು ಬಯಸುತ್ತದೆ. ಹಿಂದೂಗಳು ವಿಶ್ವದ ಅತ್ಯಂತ ಉದಾರ ಜನರು. ಹಿಂದೂ ಎಂದರೆ ಎಲ್ಲವನ್ನೂ ಸ್ವೀಕರಿಸುವವನು ಎಂದರ್ಥ. ಎಲ್ಲರೊಂದಿಗೆ ಸದ್ಭಾವನೆ ಹೊಂದಿರುವವರು. ಜ್ಞಾನವನ್ನು ವಿವಾದ ಸೃಷ್ಟಿಸಲು ಬಳಸದೆ, ಜ್ಞಾನವನ್ನು ನೀಡಲು ಬಳಸುವವನು ಹಿಂದೂಗಳು.
2. ದೇಶದಲ್ಲಿ ಕೌಟುಂಬಿಕ ಮೌಲ್ಯಗಳು ಅಪಾಯದಲ್ಲಿದೆ. ಮಾಧ್ಯಮಗಳ ದುರುಪಯೋಗದಿಂದಾಗಿ ಹೊಸ ಪೀಳಿಗೆ ತನ್ನ ಮೌಲ್ಯಗಳನ್ನು ಮರೆಯುತ್ತಿದೆ. ಇದು ಕಳವಳಕಾರಿ ವಿಷಯವಾಗಿದೆ ಎಂದು ಹೇಳಿದರು.