|
ಟೆಹರಾನ್ (ಇರಾನ್) – ಇಸ್ಲಾಂನ ಶತ್ರುಗಳು ಅನೇಕ ಸಲ ನಮ್ಮನ್ನು ಇಸ್ಲಾಮಿಕ್ ರಾಷ್ಟ್ರವೆಂದು ಮಾನ್ಯತೆ ನೀಡಲು ಉದಾಸೀನತೆ ತೋರಿಸಿದ್ದಾರೆ. ಒಂದು ವೇಳೆ ನಾವು ಮ್ಯಾನಮಾರ, ಗಾಜಾ, ಭಾರತ ಅಥವಾ ವಿಶ್ವದ ಇತರ ದೇಶಗಳಲ್ಲಿ ಮುಸ್ಲಿಮರ ಮೇಲೆ ನಡೆದ ದೌರ್ಜನ್ಯಗಳ ಬಗ್ಗೆ ನಮಗೆ ಅರಿವಿಲ್ಲದಿದ್ದರೆ, ನಮ್ಮನ್ನು ನಾವು ಮುಸ್ಲಿಮರು ಎಂದು ಕರೆಯಲು ಸಾಧ್ಯವಿಲ್ಲ ಎಂದು ಇರಾನ್‌ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಾಮೇನಿ ಹುರುಳಿಲ್ಲದ ಆರೋಪ ಮಾಡಿದ್ದಾರೆ. ಖಾಮೇನಿ ಅವರ ಈ ಆರೋಪಕ್ಕೆ ಭಾರತವು ಪ್ರತ್ಯುತ್ತರ ನೀಡಿದೆ. “ಇರಾನ್‌ನ ಸರ್ವೋಚ್ಚ ನಾಯಕ ನೀಡಿದ ಹೇಳಿಕೆ ಸ್ವೀಕಾರಾರ್ಹವಲ್ಲ ಮತ್ತು ಅವರ ಹೇಳಿಕೆಯನ್ನು ನಾವು ಖಂಡಿಸುತ್ತೇವೆ”, ಎಂದು ಭಾರತದ ವಿದೇಶಾಂಗ ಸಚಿವಾಲಯ ಪ್ರತಿಕ್ರಿಯೆ ನೀಡಿದೆ.
ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಇವರು ‘ಎಕ್ಸ್’ ನಲ್ಲಿ ಪೋಸ್ಟ್ ಮಾಡಿ, “ಇರಾನ್‌ನ ಸರ್ವೋಚ್ಚ ನಾಯಕ ಭಾರತದಲ್ಲಿನ ಅಲ್ಪಸಂಖ್ಯಾತರ ಬಗ್ಗೆ ನೀಡಿದ ಹೇಳಿಕೆಯನ್ನು ನಾವು ಖಂಡಿಸುತ್ತೇವೆ. ಅವರ ಹೇಳಿಕೆ ತಪ್ಪು ಮಾಹಿತಿ ಆಧರಿಸಿದೆ. ಅವರ ಹೇಳಿಕೆಯನ್ನು ನಾವು ಒಪ್ಪುವುದಿಲ್ಲ. ಭಾರತದಲ್ಲಿ ಅಲ್ಪಸಂಖ್ಯಾತರ ಬಗ್ಗೆ ಟೀಕಿಸುವ ದೇಶಗಳು ಮೊದಲು ತಮ್ಮನ್ನು ತಾವು ನೋಡಬೇಕು, ನಂತರ ಇತರರ ಬಗ್ಗೆ ಪ್ರತಿಕ್ರಿಯಿಸಬೇಕು.” ಎಂದು ಹೇಳಿದರು.
ಖಾಮೇನಿ, ನೀವು ನಿಮ್ಮದೇ ಜನರ ಕೊಲೆಗಾರರು ಮತ್ತು ಅತ್ಯಾಚಾರಿಗಳಾಗಿದ್ದೀರಿ ! – ಇಸ್ರೇಲ್
ಭಾರತದಲ್ಲಿ ಇಸ್ರೇಲ್‌ನ ಹೊಸ ರಾಯಭಾರಿ, ರುವೆನ್ ಅಝರ್ ಇವರು, ಖಾಮೇನಿಯವರನ್ನು ‘X’ ನಲ್ಲಿ ಟ್ಯಾಗ್ ಮಾಡಿ, ‘ಖಾಮೇನಿ, ನೀವು ನಿಮ್ಮ ಸ್ವಂತ ಜನರ ಕೊಲೆಗಾರ ಮತ್ತು ಅತ್ಯಾಚಾರಿಗಳಾಗಿದ್ದೀರಿ. ಇಸ್ರೇಲ್, ಭಾರತ ಮತ್ತು ಇತರ ಪ್ರಜಾಪ್ರಭುತ್ವ ಇರುವ ರಾಷ್ಟ್ರಗಳಲ್ಲಿ ಮುಸ್ಲಿಮರಿಗೆ ಸಿಗುವಷ್ಟು ಸ್ವಾತಂತ್ರ್ಯ ಇರಾನ್‌ನಲ್ಲಿ ಸಿಗುವುದಿಲ್ಲ. ಇರಾನ್‌ನ ಜನರು ಕೂಡ ಶೀಘ್ರದಲ್ಲೇ ಮುಕ್ತರಾಗುತ್ತಾರೆ ಎಂದು ನಾನು ಭಾವಿಸುತ್ತೇನೆ.” ಎಂದು ಹೇಳಿದ್ದಾರೆ.
ಅಯತೊಲ್ಲಾ ಅಲಿ ಖಾಮೇನಿ ಇವರು ಈ ಹಿಂದೆ ಭಾರತದ ವಿರುದ್ಧ ನೀಡಿದ್ದ ಹೇಳಿಕೆಗಳು
1. ಮಾರ್ಚ್ 2020 ರಲ್ಲಿ ದೆಹಲಿಯಲ್ಲಿ ನಡೆದ ಗಲಭೆಯ ಸಮಯದಲ್ಲಿ, ‘ಭಾರತದಲ್ಲಿ ಮುಸ್ಲಿಮರ ಕಗ್ಗೊಲೆಯಾಗುತ್ತಿದೆ. ಈ ಸಮಯದಲ್ಲಿ ಜಗತ್ತಿನಾದ್ಯಂತ ಮುಸ್ಲಿಮರು ದುಃಖದಲ್ಲಿ ಮುಳುಗಿದ್ದಾರೆ. ಭಾರತ ಸರಕಾರ ಮತಾಂಧ ಹಿಂದೂಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಸರಕಾರ ಮುಸ್ಲಿಮರ ಹತ್ಯಾಕಾಂಡವನ್ನು ತಡೆಯಬೇಕು, ಇಲ್ಲದಿದ್ದರೆ ಇಸ್ಲಾಮಿಕ್ ಜಗತ್ತು ಭಾರತದ ಕೈ ಬಿಡುತ್ತವೆ’, ಎಂದು ಖಾಮೇನಿ ಹೇಳಿದ್ದರು.
2. 2017 ರಲ್ಲಿ, ಖಾಮೇನಿ ಕಾಶ್ಮೀರವನ್ನು ಗಾಜಾ ಮತ್ತು ಯೆಮೆನ್‌ಗೆ ಹೋಲಿಸಿದ್ದರು.
3. 370 ನೇ ಕಲಂಅನ್ನು ರದ್ದುಗೊಳಿಸಿದ ನಂತರ, ‘ಕಾಶ್ಮೀರದಲ್ಲಿನ ಮುಸ್ಲಿಮರ ಪರಿಸ್ಥಿತಿಯ ಬಗ್ಗೆ ನಾವು ಆತಂಕಗೊಂಡಿದ್ದೇವೆ. ನಾವು ಭಾರತದೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದೇವೆ. ಇಂತಹ ಪರಿಸ್ಥಿತಿಯಲ್ಲಿ ಭಾರತವು ಕಾಶ್ಮೀರದಲ್ಲಿ ಮುಸ್ಲಿಮರ ಮೇಲಿನ ದೌರ್ಜನ್ಯವನ್ನು ತಡೆಯಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುತ್ತದೆ ಎಂದು ನಾವು ಭಾವಿಸುತ್ತೇವೆ,” ಎಂದು ಅವರು ಹೇಳಿದ್ದರು.
ಸಂಪಾದಕೀಯ ನಿಲುವು
|