೨೫೦ ರಿಂದ ೩೦೦ ಭಯೋತ್ಪಾದಕರಿಂದ ಅತಿಕ್ರಮಿಸುವ ಪ್ರಯತ್ನ
ಇಂತಹ ಭಯೋತ್ಪಾದಕರು ಭಾರತದಲ್ಲಿ ನುಸುಳುವ ತನಕ ಕಾಯುವ ಬದಲು, ಭಾರತೀಯ ಸೇನೆಯು ನೇರ ಕಾರ್ಯಾಚರಣೆಯನ್ನೇ ನಡೆಸಿ ಅವರೆಲ್ಲರನ್ನು ಒಂದೇಸಲಕ್ಕೆ ಕೊಲ್ಲ್ಲಲು ಪ್ರಯತ್ನಿಸಬೇಕು ಮತ್ತು ಅದಕ್ಕಾಗಿ ಕೇಂದ್ರ ಸರಕಾರವು ಸೇನೆಗೆ ಅನುಮತಿ ನೀಡಬೇಕು !
ಶ್ರೀನಗರ (ಜಮ್ಮು – ಕಾಶ್ಮೀರ) – ಕೇರನ್ ಸೆಕ್ಟರ್‌ನಲ್ಲಿಯ ಪಾಕ್ ಪುರಸೃತ ಭಯೋತ್ಪಾದಕರು ಕಿಶನಗಂಗಾ ನದಿ ಮಾರ್ಗವಾಗಿ ಶಸ್ತ್ರಾಸ್ತ್ರ ಕಳ್ಳಸಾಗಣೆಗೆ ಪ್ರಯತ್ನಿಸಿದಾಗ ಭಾರತೀಯ ಸೈನ್ಯವು ಅದನ್ನು ವಿಫಲಗೊಳಿಸಿದೆ. ಭಯೋತ್ಪಾದಕರಿಂದ ೪ ಎಕೆ-೪೭, ೮ ಮ್ಯಾಗಝಿನ್ ಹಾಗೂ ೨೪೦ ಎಕೆ ರೈಫಲ್ ಮದ್ದುಗುಂಡುಗಳನ್ನು ವಶಪಡಿಸಿಕೊಂಡಿದೆ. ಲೆಫ್ಟಿನೆಂಟ್ ಜನರಲ್ ಬಿ.ಎಸ್. ರಾಜು ಅವರು, ಪಾಕಿಸ್ತಾನದ ‘ಲಾಂಚ್‌ಪ್ಯಾಡ್’ನಲ್ಲಿ (ಭಾರತಕ್ಕೆ ನುಸುಳಲು ಭಯೋತ್ಪಾದಕರನ್ನು ಒಟ್ಟು ಸೇರಿಸುವ ಸ್ಥಳ) ೨೫೦ ರಿಂದ ೩೦೦ ಭಯೋತ್ಪಾದಕರು ಇದ್ದಾರೆ, ಒಳನುಸುಳಲು ಪದೇ ಪದೇ ಪ್ರಯತ್ನಿಸಿದರೂ, ಅವುಗಳನ್ನು ತಡೆಯುವಲ್ಲಿ ನಾವು ಯಶಸ್ವಿಯಾಗಿದ್ದೇವೆ ಎಂದು ಹೇಳಿದ್ದಾರೆ.