ಇಂತಹವರನ್ನು ಪೋಷಿಸುವ ಬದಲು, ಅವರ ಮೇಲೆ ಶೀಘ್ರಗತಿ ನ್ಯಾಯಾಲಯದಲ್ಲಿ ಖಟ್ಲೆ ನಡೆಸಿ ಗಲ್ಲುಶಿಕ್ಷೆಯಾಗುವಂತೆ ಸರಕಾರವು ಪ್ರಯತ್ನಿಸಬೇಕು !
ನವ ದೆಹಲಿ – ತಮಿಳುನಾಡು ಮತ್ತು ಕರ್ನಾಟಕದಿಂದ ಇಸ್ಲಾಮಿಕ್ ಸ್ಟೇಟ್‌ನಲ್ಲಿ ಭಯೋತ್ಪಾದಕರಾಗಿ ಭರ್ತಿಯಾಗಲು ಹಾಗೂ ಅವರಿಗೆ ಸಿರಿಯಾ ತನಕ ತಲುಪಲು ಹಣ ವ್ಯವಸ್ಥೆ ಮಾಡಿದ್ದ ಆರೋಪದ ಮೇಲೆ ರಾಷ್ಟ್ರೀಯ ತನಿಖಾ ದಳ (ಎನ್.ಐ.ಎ.ಯು) ಅಹಮದ್ ಅಬ್ದುಲ್ ಕಾದಿರ್ (ವಯಸ್ಸು ೪೦) ಮತ್ತು ಇರಫಾನ್ ನಾಸೀರ್ (ವಯಸ್ಸು ೩೩) ಈ ಇಬ್ಬರನ್ನು ಬಂಧಿಸಿದೆ. ಅಹಮದ್ ಅಬ್ದುಲ್ ಕಾದಿರ್ ತಮಿಳುನಾಡು ಮೂಲದವನಾಗಿದ್ದು ಇರಫಾನ್ ನಾಸಿರ್ ಬೆಂಗಳೂರಿನಲ್ಲಿ ವಾಸಿಸುತ್ತಾನೆ. ಅಹಮದ್ ಅಬ್ದುಲ್ ಕಾದಿರ್ ಬ್ಯಾಂಕಿನಲ್ಲಿ ಬಿಝನೆಸ್ ಆನಲಿಸ್ಟ ಆಗಿದ್ದು, ನಾಸಿರ್‌ನಿಗೆ ವ್ಯವಸಾಯವಿದೆ. (‘ಬಡತನವಿರುವುದರಿಂದ ಮುಸಲ್ಮಾನರು ಭಯೋತ್ಪಾದನೆಯತ್ತ ಹೊರಳುತ್ತಾರೆ’, ಎಂದು ಹೇಳುವವರಿಗೆ ಇದರ ಬಗ್ಗೆ ಏನು ಹೇಳುವುದಿದೆ ? – ಸಂಪಾದಕ)
NIA Arrests Two Accused in ISIS Case of Bengaluru pic.twitter.com/Q2KdjWIlv7
— NIA India (@NIA_India) October 8, 2020
೧. ದೆಹಲಿಯ ಜಾಮಿಯಾನಗರದಿಂದ ಕಾಶ್ಮೀರದ ನಿವಾಸಿಯಾಗಿದ್ದ ಹಿನಾ ಬಶೀರ್ ಬೇಗ್ (ವಯಸ್ಸು ೩೯) ಮತ್ತು ಆಕೆಯ ಪತಿಯನ್ನು ಇಸ್ಲಾಮಿಕ್ ಸ್ಟೇಟ್‌ನೊಂದಿಗೆ ಸಂಬಂಧ ಹಾಗೂ ಪೌರತ್ವ ತಿದ್ದುಪಡಿ ಕಾಯ್ದೆಯ ವಿರುದ್ಧದ ಆಂದೋಲನವನ್ನು ಆಯೋಜಿಸಿದ ಸಂದೇಹದಲ್ಲಿ ಬಂಧಿಸಲಾಗಿತ್ತು. ಮಾರ್ಚ್ ೨೦೨೦ ರಲ್ಲಿ ಅವರ ವಿಚಾರಣೆಯಲ್ಲಿ ಈ ಇಬ್ಬರ ಹೆಸರುಗಳು ಬೆಳಕಿಗೆ ಬಂದಿದ್ದವು.
— NIA India (@NIA_India) October 8, 2020
೨. ೨೦೧೩-೧೪ ರಲ್ಲಿ ಬೆಂಗಳೂರಿನಿಂದ ೧೩-೧೪ ಜನರು ಇರಾಕ್ ಮತ್ತು ಸಿರಿಯಾಕ್ಕೆ ಹೋಗಿದ್ದರು. ಅವರಲ್ಲಿ ಐ.ಎಸ್.ಗಾಗಿ ಹೋರಾಡುವಾಗ ಇಬ್ಬರು ಸಾವನ್ನಪ್ಪಿದ್ದರೆ, ಕೆಲವರು ೨೦೧೪ ರಲ್ಲಿ ರಹಸ್ಯವಾಗಿ ಮರಳಿದ್ದರು.