|
ಮಂಗಳೂರು – ‘ಧಮ್ ಇದ್ದರೆ ಈದ್ ಮೆರವಣಿಗೆ ನಿಲ್ಲಿಸಿ’ ಎಂದು ಇಲ್ಲಿನ ಮುಸ್ಲಿಂ ಮುಖಂಡರೊಬ್ಬರು ಸವಾಲು ಹಾಕಿರುವ ಆಡಿಯೋ ಹರಿದಾಡಿದ್ದು, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಿ.ಸಿ. ರೋಡ್‌ನಲ್ಲಿ ಹಿಂದೂ ಸಂಘಟನೆಗಳಿಂದ ‘ಬಿ.ಸಿ. ರೋಡ್ ಚಲೋ (ಬಂಟ್ವಾಳ ಕ್ರಾಸ್ ರಸ್ತೆ)’ ಎಂದು ಕರೆ ನೀಡಿದ್ದರು. ಅನೇಕ ಹಿಂದುತ್ವನಿಷ್ಠರು ಅಲ್ಲಿ ನೆರೆದಿದ್ದರು. ಈ ವೇಳೆ ಹಿಂದೂಗಳು ಅಲ್ಲಿ ಪ್ರತಿಭಟನೆ ನಡೆಸಿದರು. ಪೊಲೀಸರು ಪ್ರತಿಭಟನಾಕಾರರನ್ನು ಸಮಾಧಾನಪಡಿಸಿದರು. ಈ ಮಧ್ಯೆ, ಕೆಲವು ಮತಾಂಧ ಮುಸ್ಲಿಮರು ಕೈಯಲ್ಲಿ ಹಸಿರು ಧ್ವಜಗಳೊಂದಿಗೆ ಮೋಟಾರ್ ಸೈಕಲ್‌ಗಳಲ್ಲಿ ರ್ಯಾಲಿ ನಡೆಸಿದರು. ಒಂದು ರೀತಿಯಲ್ಲಿ ಅಲ್ಲಿದ್ದ ಹಿಂದೂಗಳನ್ನು ಕೆರಳಿಸಿದರು.
ಈ ವೇಳೆ ಹಿಂದುತ್ವನಿಷ್ಠ ಸಂಘಟನೆಯ ಕಾರ್ಯಕರ್ತರು ‘ನಮಗೆ ಮೆರವಣಿಗೆ ನಡೆಸಲು ಬಿಡದಿದ್ದರೆ ಮುಸ್ಲಿಮರಿಗೆ ಹೇಗೆ ಕೊಡುತ್ತೀರಿ’ ಎಂದು ಬೀದಿಗಿಳಿದು ಪ್ರತಿಭಟನೆ ಆರಂಭಿಸಿದರು. ಪೊಲೀಸರ ವಿರುದ್ಧವೂ ಘೋಷಣೆಗಳನ್ನು ಕೂಗಲಾಯಿತು.
ಏನಿದು ಪ್ರಕರಣ ?
ಕೆಲ ದಿನಗಳ ಹಿಂದೆ ಮಂಡ್ಯದ ನಾಗಮಂಗಲದಲ್ಲಿ ಗಣೇಶೋತ್ಸವ ಮೆರವಣಿಗೆ ಮೇಲೆ ದಾಳಿ ನಡೆಸಲಾಗಿತ್ತು. ಈ ಹಿನ್ನೆಲೆಯಲ್ಲಿ ಮಂಗಳೂರಿನಲ್ಲಿ ಹಿಂದೂ ಮುಖಂಡ ಶರಣ್ ಪಂಪ್‌ವೆಲ್ ಮಾತನಾಡಿ, ಈದ್ ಮೆರವಣಿಗೆ ಮೇಲೆ ದಾಳಿ ನಡೆದರೆ ಏನಾಗುತ್ತದೆ ? ಇದಕ್ಕೆ ಪ್ರತ್ಯುತ್ತರವೆಂದು ಮತಾಂಧ ಮುಸ್ಲಿಂ ನಾಯಕ ಮೊಹಮ್ಮದ್ ಷರೀಫ್ ನು ‘ಈದ್ ಮಿಲಾದ್ ಮೆರವಣಿಗೆ ನಿಲ್ಲಿಸಿ ತೋರಿಸಿ’ ಎಂಬ ಪ್ರಚೋದನಕಾರಿ ಹೇಳಿಕೆಯ ಆಡಿಯೋವನ್ನು ಪ್ರಸಾರ ಮಾಡಿದ್ದ.