ಆತನ ಭಾಷಣದ ಕಾರ್ಯಕ್ರಮದಲ್ಲಿ ಹಾಜರಿಲ್ಲದ ಪೊಲೀಸರು !
ದೇಶದ ಆಂತರಿಕ ಭದ್ರತೆಗೆ ಅಪಾಯ ತಂದೊಡ್ಡುವ ಮತಾಂಧರು ! ಇಂತಹ ನೂರಾರು ‘ಸಲಮಾನ್’ಗಳು ಭಾರತದಾದ್ಯಂತ ಹಸಿರು ವಿಷಕಾರುತ್ತಿದ್ದಾರೆ ಅಥವಾ ರಾಷ್ಟ್ರ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿದ್ದಾರೆ. ಸಮಾಜಕ್ಕೆ ಅಪಾಯಕಾರಿಯಾದ ಇಂತಹ ಮತಾಂಧರ ವಿರುದ್ಧ ಸರಕಾರ ಯಾವ ಕ್ರಮ ಕೈಗೊಳ್ಳಲಿದೆ ?
ಬಾಗಪತ್ (ಉತ್ತರ ಪ್ರದೇಶ) – ಪ್ರಧಾನಿ ನರೇಂದ್ರ ಮೋದಿ ಮತ್ತು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥರ ವಿರುದ್ಧ ಆಕ್ಷೇಪಾರ್ಹ ಭಾಷಣ ಮಾಡಿದ ಪ್ರಕರಣದಲ್ಲಿ ಸಲಮಾನ್ ಎಂಬ ಯುವಕನನ್ನು ಬಾಗಪತ್ ಪೊಲೀಸರು ಬಂಧಿಸಿದ್ದಾರೆ. ಇಲ್ಲಿಯ ರಾಷ್ಟ್ರೀಯ ಲೋಕದಳದ ಮಹಾಪಂಚಾಯತ್‌ನಲ್ಲಿ ಭಾಷಣ ಮಾಡುತ್ತಿರುವಾಗ ಆತ ‘ಮೋದಿ ಮತ್ತು ಯೋಗಿ ಆದಿತ್ಯನಾಥರ ಶಿರಚ್ಛೇದಗೊಳಿಸದಿದ್ದರೆ ನನ್ನ ಹೆಸರನ್ನು ಬದಲಾಯಿಸಿ’ ಎಂದು ಘೋಷಣೆಯನ್ನು ನೀಡಿದ್ದನು. ಅವರ ಈ ಘೋಷಣೆಗೆ ಪ್ರೇಕ್ಷಕರು ಚಪ್ಪಾಳೆ ತಟ್ಟುವ ವೀಡಿಯೊ ಒಂದು ಎಲ್ಲೆಡೆ ಪ್ರಸಾರವಾಗುತ್ತಿದೆ. (ಇವರೆಲ್ಲರ ವಿರುದ್ಧ ಪ್ರಕರಣ ದಾಖಲಿಸಿ ಸೆರೆಮನೆಗೆ ಅಟ್ಟಬೇಕು ! – ಸಂಪಾದಕ) ಈ ವಿಡಿಯೋ ಪ್ರಸಾರವಾದ ನಂತರವೇ ಪೊಲೀಸರು ಆತನನ್ನು ಬಂಧಿಸಿದ್ದಾರೆ. (ಇದರರ್ಥ ಮಹಾಪಂಚಾಯತ್‌ನಲ್ಲಿ ಸಲಮಾನ್ ಇಂತಹ ಭಾಷಣ ಮಾಡಿದ್ದಾರೆ ಎಂದು ಪೊಲೀಸರಿಗೆ ತಿಳಿದಿರಲಿಲ್ಲ ಎಂದು ತಿಳಿದುಕೊಳ್ಳಬೇಕೇನು?) ತಮ್ಮ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ನಡೆಯುತ್ತಿರುವಂತಹ ಕಾರ್ಯಕ್ರಮಗಳಲ್ಲಿ ಏನಾಗುತ್ತಿದೆ, ಇದರತ್ತ ಗಮನ ಇಡುವುದು ಪೊಲೀಸರ ಕರ್ತವ್ಯವಾಗಿದೆ. ಹೀಗಿರುವಾಗ ಅವರೇ ಇಂತಹ ನಿಷ್ಕ್ರೀಯತೆ ತೋರಿಸಿದ್ದಾರೆ. ಇದರ ಬಗ್ಗೆ ಸಹ ಸಂಬಂಧಿತ ಪೊಲೀಸರ ಮೇಲೆ ಕ್ರಮ ಕೈಗೊಳ್ಳಬೇಕು ಹಾಗೂ ಇಂತಹ ನಿಷ್ಕ್ರಿಯತೆಯು ಇನ್ನು ಯಾವ್ಯಾವ ಪೊಲೀಸ್ ಠಾಣೆಗಳಿಂದ ಆಗುತ್ತಿದೆ ಎಂಬುದನ್ನು ಸಹ ಪರಿಶೀಲಿಸಬೇಕು ! – ಸಂಪಾದಕ)