ಅಲಿಗಢ (ಉತ್ತರ ಪ್ರದೇಶ) – ನನ್ನ ಕುಟುಂಬದವರು ನನಗೆ ಹೊಡೆದು ಸಾಯಿಸಬಹುದು, ನನಗೆ ಸಹಾಯ ಮಾಡಿ ಎಂದು ಅಲಿಘಢನಲ್ಲಿರುವ ಹಿಂದೂ ಯುವಕನನ್ನು ಪ್ರಿತಿಸಿದ ಮುಸ್ಲಿಂ ಯುವತಿಯಿಂದ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ಗೆ ಮನವಿ ಮಾಡಿದ್ದಾರೆ. ಈ ಸಂದರ್ಭದಲ್ಲಿ ವಿಡಿಯೋವೊಂದು ಪ್ರಸಾರವಾಗಿದೆ. ಇದರಲ್ಲಿ ಯುವತಿಯು, “ನನ್ನ ಪ್ರಿಯಕರನ ಹೆಸರು ಶೌರ್ಯ ವರ್ಮಾ ಎಂದು ಇದ್ದು ಅವನು ಹಿಂದೂ ಇದ್ದಾನೆ, ನನಗೂ ಹಿಂದೂ ಧರ್ಮದಲ್ಲಿ ನಂಬಿಕೆ ಇದೆ. ನಾನು ಶೌರ್ಯನನ್ನು ಮದುವೆಯಾಗಲು ಬಯಸುತ್ತೇನೆ. ಇದು ನನ್ನ ದೃಢ ನಿರ್ಧಾರ ಇದೆ. ನಾನು ಅದನ್ನು ಎಂದಿಗೂ ಬದಲಾಯಿಸುವುದಿಲ್ಲ; ಆದರೆ ನಮ್ಮ ಮದುವೆಗೆ ನನ್ನ ಕುಟುಂಬದವರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ನನ್ನ ಕುಟುಂಬದವರು ನನ್ನನ್ನು ಮನೆಯಲ್ಲಿ ಕೂಡಿ ಹಾಕಿದ್ದು ಅವರು ನನ್ನನ್ನು ಸಾಯಿಸಬಹುದು ಎಂದು ಹೇಳಿದ್ದಾಳೆ.
ಈ ಬಗ್ಗೆ ಪೊಲಿಸರು, ಇಬ್ಬರೂ ಪ್ರಜ್ಞಾಪೂರ್ವಕರಾಗಿದ್ದು, ಅವರು ಪರಸ್ಪರ ಮದುವೆಯಾಗಲು ನಿರ್ಧರಿಸಿದ್ದಾರೆ. ಹಾಗಾಗಿ ಪೊಲೀಸರು ಅವರಿಗೆ ರಕ್ಷಣೆ ಹಾಗೂ ಸಂಪೂರ್ಣ ನೆರವು ನೀಡಲಿದ್ದಾರೆ ಎಂದು ಹೇಳಿದರು.
ಸಂಪಾದಕೀಯ ನಿಲುವುಯಾವಾಗಲೂ ‘ಪ್ರೀತಿಗೆ ಧರ್ಮದ ಬಂಧನ ಇರುವುದಿಲ್ಲ’ ಎಂದು ಹಿಂದೂಗಳಿಗೆ ಪುಕ್ಕಟೆ ಸಲಹೆ ನೀಡುವವರು ಈಗ ಯಾಕೆ ಸುಮ್ಮನಿದ್ದಾರೆ ? |