ನವದೆಹಲಿ – ದೀಪಾವಳಿಯಲ್ಲಿ ಪಟಾಕಿಯನ್ನು ದೊಡ್ಡ ಪ್ರಮಾಣದಲ್ಲಿ ಸಿಡಿಸಲಾಗುತ್ತದೆ. ಈ ವರ್ಷ ಕೊರೋನಾ ವಿಪತ್ತಿನ ಸಮಯದಲ್ಲಿ ಪಟಾಕಿಗಳಿಂದಾಗುವ ಮಾಲಿನ್ಯವು ರೋಗಿಗಳಿಗೆ ಅಪಾಯಕಾರಿಯಾಗಬಹುದು. ಇದರಿಂದ ಕೊರೋನಾ ಪೀಡಿತರಿಗೆ, ಅದೇರೀತಿ ವಿವಿಧ ಕಾಯಿಲೆಗಳನ್ನು ಎದುರಿಸುತ್ತಿರುವ ರೋಗಿಗಳಿಗೆ ತೊಂದರೆಗಳಾಗುವ ಸಾಧ್ಯತೆಯಿದೆ. ಪಟಾಕಿಯಿಂದ ಉಂಟಾಗುವ ಹೊಗೆ ಮತ್ತು ಮಾಲಿನ್ಯವು ಸಾಮಾನ್ಯ ವ್ಯಕಿಗೆ ಮಾತ್ರವಲ್ಲ, ಕೊರೋನಾದಿಂದ ಬಳಲುತ್ತಿರುವವರಿಗೆ ಅಥವಾ ಕರೋನಾದಿಂದ ಮುಕ್ತರಾದ ವ್ಯಕ್ತಿಗಳಿಗೂ ಅಪಾಯಕಾರಿಯಾಗಬಲ್ಲದು, ಎಂದೂ ತಜ್ಞರು ಹೇಳಿದ್ದಾರೆ.
೧. ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರು ತಜ್ಞ ವೈದ್ಯರ ಸಲಹೆಯ ಮೇರೆಗೆ ಕರೋನಾ ಅವಧಿಯಲ್ಲಿ ದೀಪಾವಳಿಯನ್ನು ಸ್ವಯಂ ಶಿಸ್ತನ್ನು ಪಾಲಿಸಿ ಹಾಗೂ ಪಟಾಕಿ ಸಿಡಿಸದೆ ಆಚರಿಸಿ ಎಂದು ನಾಗರಿಕರಿಗೆ ಮನವಿ ಮಾಡಿದ್ದಾರೆ. ಪಟಾಕಿಗಳ ಬಳಕೆಯನ್ನು ನಿಷೇಧಿಸಲು ರಾಜಸ್ಥಾನ ರಾಜ್ಯ ಮಾನವ ಹಕ್ಕುಗಳ ಆಯೋಗವು ಮಾರ್ಗಸೂಚಿಗಳನ್ನು ಹೊರಡಿಸಿದೆ.
೨. ಕರೋನಾದ ಸೋಂಕು ಹೆಚ್ಚಾಗದಿರಲಿ, ಅದಕ್ಕಾಗಿ ಮುಂದಿನ ಕೆಲವು ತಿಂಗಳುಗಳಲ್ಲಿ ಮಾಸ್ಕ ಸಹಿತ ಪೂಜೆ, ಮಾಸ್ಕ ಸಹಿತ ಛಟ್‌ಪುಜಾ, ಮಾಸ್ಕ ಸಹಿತ ದೀಪಾವಳಿ, ಮಾಸ್ಕ ಸಹಿತ ದಸರಾ, ಮಾಸ್ಕ ಸಹಿತ ಈದ್ ಆಚರಿಸಬೇಕಾಗುತ್ತದೆ, ಎಂದು ನೀತಿ ಆಯೋಗದ ಸದಸ್ಯ ಹಾಗೂ ಭಾರತದ ‘ಕೊವಿಡ್ ಟಾಸ್ಕ ಫೋರ್ಸ್’ನ ಮುಖ್ಯಸ್ಥ ಡಾ. ವಿ.ಕೆ. ಪಾಲ್‌ರವರು ಹೇಳಿದ್ದಾರೆ.