|
ಸಿಲ್ಹೆಟ್ (ಬಾಂಗ್ಲಾದೇಶ) – ನಾವು ಬಾಂಗ್ಲಾದೇಶಿ ಹಿಂದೂಗಳು ನಮ್ಮ ಪಾಡನ್ನು ಶಬ್ದಗಳಲ್ಲಿ ಹೇಳಲು ಸಾಧ್ಯವಿಲ್ಲ. ನಮ್ಮ ಮೇಲೆ ವಿವಿಧ ರೀತಿಯ ಸಂಕಟಗಳಿವೆ. ಕಳೆದ ಒಂದು ತಿಂಗಳಲ್ಲಿ 50 ಸಾವಿರಕ್ಕೂ ಹೆಚ್ಚು ಬಾಂಗ್ಲಾದೇಶಿಗಳು ಕಟ್ಟರವಾದಿ ಮುಸ್ಲಿಮರ ದಾಳಿಗೆ ಹೆದರಿ ಭಾರತಕ್ಕೆ ಪಲಾಯನ ಮಾಡಿದ್ದಾರೆ. ಇವರಲ್ಲಿ ಅನೇಕ ಹಿಂದುತ್ವನಿಷ್ಠ ನಾಯಕರು, ಅವಾಮಿ ಲೀಗ್ ಪಕ್ಷದ ಕಾರ್ಯಕರ್ತರು ಮತ್ತು ಭಯೋತ್ಪಾದಕ ಸಂಘಟನೆ ‘ಅನ್ಸಾರುಲ್ಲಾ ಬಾಂಗ್ಲಾ ಟೀಮ್’ ಸದಸ್ಯರು ಸೇರಿದ್ದಾರೆ. ಭಾರತ-ಬಾಂಗ್ಲಾದೇಶ ಗಡಿಯು ಅತ್ಯಂತ ಅಸಮರ್ಥವಾಗಿದೆ ಎಂದು ಬಾಂಗ್ಲಾದೇಶದ ಯುವ ಹಿಂದೂ ಮುಖಂಡರೊಬ್ಬರು ಅಭಿಪ್ರಾಯಪಟ್ಟಿದ್ದಾರೆ. ಅವರು ‘ಸನಾತನ ಪ್ರಭಾತ’ದ ಪ್ರತಿನಿಧಿಯೊಂದಿಗೆ ಅಲ್ಲಿನ ಹಿಂದೂಗಳ ಸಂಕಷ್ಟದ ಕುರಿತು ಮಾತನಾಡುತ್ತಿದ್ದರು. (ಬಾಂಗ್ಲಾದೇಶದಲ್ಲಿ ಹಿಂದುತ್ವಕ್ಕಾಗಿ ಹೋರಾಡುವ ಹಿಂದೂ ನಾಯಕರ ನೈಸರ್ಗಿಕ ಸ್ಥಳ ಭಾರತವೇ ಆಗಿದೆ; ಆದರೆ ಅಲ್ಲಿನ ಹಿಂದೂ ದ್ವೇಷಿ ಮುಸ್ಲಿಂ ನಾಯಕರು ಮತ್ತು ಭಯೋತ್ಪಾದಕರಿಗೆ ಭಾರತದಲ್ಲಿ ಆಶ್ರಯ ಸಿಗುವುದು ಅಕ್ಷಮ್ಯವಾಗಿದೆ ! ಇದಕ್ಕೆ ಯಾರನ್ನು ಹೊಣೆಗಾರರನ್ನಾಗಿ ಮಾಡಬೇಕು ? – ಸಂಪಾದಕರು)
ಈ ನಾಯಕರು ಮಂಡಿಸಿದ ಪ್ರಮುಖ ಅಂಶಗಳು !
1. ನನ್ನ ಹಿರಿಯ ಅಣ್ಣ ಹಿಂದುತ್ವನಿಷ್ಠ ಪತ್ರಕರ್ತರಾಗಿದ್ದು, ಜೀವಭಯದಿಂದ ಅವರು ಕೆಲ ವರ್ಷಗಳಿಂದ ಅಸ್ಸಾಂನ ಗೌಹತ್ತಿಯಲ್ಲಿ ವಾಸವಾಗಿದ್ದಾರೆ. ನಾವು ಅವನನ್ನು ಭೇಟಿಯಾಗಲೂ ಸಾಧ್ಯವಿಲ್ಲ.
2. ಉತ್ತರ ಸುನಮ್‌ಗಂಜ್‌ನ ಅವಾಮಿ ಲೀಗ್‌ನ ಹಿಂದೂ ಸಂಸದ ರಂಜಿತ್ ಚಂದ್ರ ಸರಕಾರ ಅವರಿಗೆ ಜೀವ ಬೆದರಿಕೆ ಬರುತ್ತಿದ್ದರಿಂದ ಅವರು ಬಾಂಗ್ಲಾದೇಶದಿಂದ ಪಲಾಯನ ಮಾಡಿದ್ದಾರೆ.
3. ಕೊಮಿಲಾದ ಅವಾಮಿ ಲೀಗ್ ಸಂಸದ, ಬಹಾವುದ್ದೀನ್ ಬಹಾರ್ ಅವರು ಕೋಲಕಾತಾದಲ್ಲಿ ವಾಸಿಸುತ್ತಿದ್ದು ಕಳೆದ ವರ್ಷ ದುರ್ಗಾದೇವಿ ಉತ್ಸವವನ್ನು ಟೀಕಿಸಿದ್ದರು. ದುರ್ಗಾ ಹಬ್ಬ ಎಂದರೆ ಮದ್ಯದ ಹಬ್ಬ ಎಂದು ಹೇಳಿದ್ದ.
4. ಇಂದು ಜಮಾತ್-ಎ-ಇಸ್ಲಾಮಿ ಮತ್ತು ‘ಅನ್ಸಾರುಲ್ಲಾ ಬಾಂಗ್ಲಾ ಟೀಮ್’ ನ ಭಯೋತ್ಪಾದಕರು ಭಾರತದ ಗೌಹಾಟಿ, ಕೋಲಕಾತಾ ಮತ್ತು ಮೇಘಾಲಯದಲ್ಲಿ ಅಡಗಿಕೊಂಡಿದ್ದಾರೆ.
5. ಬಾಂಗ್ಲಾದೇಶದ ಪೊಲೀಸ್ ಇಲಾಖೆಯು ಹಿಂದೂ ಸಮುದಾಯದ ಹಿರಿಯ ಅಧಿಕಾರಿಗಳನ್ನು ವಜಾಗೊಳಿಸಲು ಕಾರಣ ಹುಡುಕಲಾಗುತ್ತಿದೆ. ಈ ಮೂಲಕ ಬಾಂಗ್ಲಾದೇಶದ ಹಿಂದೂಗಳಿಗೆ ಅಸಹಾಯಕರನ್ನಾಗಿ ಮಾಡುವ ಪ್ರಯತ್ನ ನಡೆಯುತ್ತಿದೆ.
ಬಾಂಗ್ಲಾದೇಶದಲ್ಲಿರುವ ಹಿಂದೂಗಳೇ ಭಾರತದ ಪ್ರತಿನಿಧಿಗಳು !
ಈ ಸಂದರ್ಭದಲ್ಲಿ ಈ ನಾಯಕರು, ನಾವು ಬಾಂಗ್ಲಾದೇಶಿ ಹಿಂದೂಗಳಾಗಿದ್ದರೂ ನಾವು ಭಾರತವನ್ನು ಪ್ರತಿನಿಧಿಸುತ್ತೇವೆ ಎಂದು ಹೇಳಿದರು. ನಾವು ಭಾರತದೊಂದಿಗೆ ಇದ್ದೇವೆ. ನಮ್ಮ ವಿರುದ್ಧ ಷಡ್ಯಂತ್ರಗಳು ನಡೆಯುತ್ತಿವೆ. ನಮಗಾಗಿ ಧ್ವನಿ ಎತ್ತಿರಿ ಇಲ್ಲದಿದ್ದರೆ ಭಾರತಕ್ಕೆ ದೊಡ್ಡ ತಲೆನೋವಾಗುತ್ತದೆ ಎಂದು ಈ ಹಿಂದೂ ನಾಯಕರು ಈ ಸಂದರ್ಭದಲ್ಲಿ ವಿನಂತಿಸಿದರು.
ಸಂಪಾದಕೀಯ ನಿಲುವು
|