ನೇಪಾಳದ ರುಯಿ ಗ್ರಾಮದ ಮೇಲೆ ಚೀನಾದಿಂದ ಅಕ್ರಮ ನಿಯಂತ್ರಣ

ನೇಪಾಳವು ಭಾರತದ ೩ ಪ್ರದೇಶಗಳನ್ನು ತನ್ನದೆಂದು ಹೇಳಿಕೊಳ್ಳುತ್ತ ಸ್ವಂತದ ನಕ್ಷೆಯಲ್ಲಿ ಬದಲಾವಣೆ ಮಾಡಿದೆ; ಆದರೆ ಇನ್ನೊಂದೆಡೆ ಚೀನಾವು ನೇಪಾಳಕ್ಕೂ ವಿಶ್ವಾಸಘಾತ ಮಾಡುತ್ತ ಅದರ ಉತ್ತರ ಗೊರಖಾದಲ್ಲಿಯ ರುಯಿ ಗ್ರಾಮದ ಮೇಲೆ ನಿಯಂತ್ರಣ ಸಾಧಿಸಿದೆ. ನೇಪಾಳದ ಕಮ್ಯುನಿಸ್ಟ್ ಪಕ್ಷದ ಸರಕಾರವು ಚೀನಾದ ಈ ಕುಕೃತ್ಯವನ್ನು ಮುಚ್ಚಿಡಲು ಭಾರತದ ೩ ಪ್ರದೇಶಗಳನ್ನು ತನ್ನದೆಂದು ಹೇಳಿಕೊಂಡಿದೆ,

ಜಗತ್ತಿನ ೮೧ ದೇಶಗಳಲ್ಲಿ ಕೊರೋನಾದ ೨ ನೇ ಅಲೆ ಬರಲಿದೆ ! – ಜಾಗತಿಕ ಆರೋಗ್ಯ ಸಂಸ್ಥೆ

ಜಗತ್ತಿನ ೨೦೦ ಕ್ಕೂ ಹೆಚ್ಚು ದೇಶಗಳಲ್ಲಿ ಕೊರೋನಾದ ಸಂಕ್ರಮಣವಾಗಿದೆ. ಇದರಲ್ಲಿ ಹೆಚ್ಚಿನ ದೇಶದಲ್ಲಿ ಕೊರೋನಾದ ಮೊದಲನೇ ಅಲೆ ಬಂದಿರುವಗಲೇ ಈಗ ೮೧ ದೇಶದಲ್ಲಿ ಎರಡನೇಯ ಅಲೆ ಬರುವಂತಹ ಸ್ಥಿತಿ ನಿರ್ಮಾಣವಾಗಿದೆ, ಎಂದು ಜಾಗತಿಕ ಆರೋಗ್ಯ ಸಂಸ್ಥೆಯು ಎಚ್ಚರಿಕೆ ನೀಡಿದೆ.

ಪಾಕಿಸ್ತಾನದಲ್ಲಿ ಭಾರತೀಯ ರಾಯಭಾರಿ ಕಚೇರಿಯ ಇಬ್ಬರು ಅಧಿಕಾರಿಗಳು ನಾಪತ್ತೆ

ಇಲ್ಲಿ ಜೂನ್ ೧೫ ರಂದು ಭಾರತೀಯ ರಾಯಭಾರಿ ಕಛೇರಿಯ ಇಬ್ಬರು ಸಿಬ್ಬಂದಿಗಳನ್ನು ಪಾಕ್‌ನ ಪೊಲೀಸರು ಒಂದು ಸುಳ್ಳು ಆರೋಪದಡಿಯಲ್ಲಿ ಬಂಧಿಸಿದ್ದರು. ಭಾರತೀಯ ವಿದೇಶಾಂಗ ಸಚಿವಾಲಯದಿಂದ ಬಂದ ಒತ್ತಡದಿಂದಾಗಿ ಈ ಸಿಬ್ಬಂದಿಗಳನ್ನು ತಡರಾತ್ರಿ ಪುನಃ ರಾಯಭಾರಿ ಕಛೇರಿಗೆ ಕರೆತಂದರು; ಆದರೆ ಇಡೀ ದಿನ ಈ ಸಿಬ್ಬಂದಿಯನ್ನು ವಿಚಾರಣೆಯ ನೆಪದಲ್ಲಿ ತೀವ್ರವಾಗಿ ಚಿತ್ರಹಿಂಸೆಯನ್ನು ನೀಡಿದರು.

ಜಿಹಾದಿ ಭಯೋತ್ಪಾದಕರು ಕಾಶ್ಮೀರಿ ಹಿಂದೂ ಅಜಯ ಪಂಡಿತಾ ಅವರ ಹತ್ಯೆ ಮಾಡಿದ್ದರ ವಿರುದ್ಧ ವಿಶ್ವದಾದ್ಯಂತ ಪ್ರತಿಭಟನೆ

ಕಾಶ್ಮೀರಿ ಹಿಂದೂ ಆಗಿದ್ದ ಅಜಯ ಪಂಡಿತಾ ಅವರನ್ನು ಜಿಹಾದಿ ಉಗ್ರರು ಕ್ರೂರವಾಗಿ ಗುಂಡಿಕ್ಕಿ ಕೊಂದಿದ್ದಾರೆ. ಈ ಹತ್ಯೆಯ ವಿರುದ್ಧ ಜಗತ್ತಿನಾದ್ಯಂತ ಹಿಂದೂಗಳು ಪ್ರತಿಭಟನೆಯನ್ನು ನಡೆಸಿದರು ಮತ್ತು ಅಜಯ ಪಂಡಿತಾಗೆ ನ್ಯಾಯ ಸಿಗಬೇಕೆಂದು ಒತ್ತಾಯಿಸಿದರು. ಜಗತ್ತಿನ ೧೦೦ ನಗರಗಳಲ್ಲಿ ಪ್ರತಿಭಟನೆ ಆಯೋಜಿಸಲಾಗಿತ್ತು.

ಬಾಂಗ್ಲಾದೇಶದಲ್ಲಿ ಹಿಂದೂಗಳ ವಂಶವಿಚ್ಛೇದಕ್ಕೆ ಸಂಚು ! – ವಿಶ್ವ ಹಿಂದೂ ಮಹಾಸಂಘ

ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲಿನ ದೌರ್ಜನ್ಯ ಸತತವಾಗಿ ಹೆಚ್ಚಾಗುತ್ತಿದೆ. ಬಾಂಗ್ಲಾದೇಶದಲ್ಲಿ ಮಾನವಹಕ್ಕುಗಳ ಸ್ಥಿತಿ ದಿನದಿಂದ ದಿನಕ್ಕೆ ಹದಗೆಡುತ್ತಿದೆ. ಅಲ್ಲಿನ ಅಲ್ಪಸಂಖ್ಯಾತ ಹಿಂದೂಗಳಿಗೆ ನ್ಯಾಯ ಸಿಗುವುದು ಅಸಾಧ್ಯವಾಗಿದೆ. ಹಿಂದೂಗಳ ಮೇಲೆ ಹಲ್ಲೆ ಮಾಡುವ ಮತಾಂಧ ಅಪರಾಧಿಗಳನ್ನು ಸಹ ಬಂಧಿಸಲಾಗುತ್ತಿಲ್ಲ.

ದೇವರ ಕೃಪೆಯಿಂದ ಟಾಂಜಾನಿಯಾ ದೇಶ ಕೊರೋನಾಮುಕ್ತವಾಯಿತು ! – ಟಾಂಜಾನಿಯಾ ರಾಷ್ಟ್ರಾಧ್ಯಕ್ಷರ ಘೋಷಣೆ

ದೇವರ ಕೃಪೆಯಿಂದ ಕರೋನಾ ವಿಷಾಣುವನ್ನು ಮುಗಿಸುವಲ್ಲಿ ದೇಶಕ್ಕೆ ಯಶಸ್ಸು ಸಿಕ್ಕಿದೆ, ಎಂದು ಆಫ್ರಿಕಾ ಖಂಡದ ದೇಶವಾದ ಟಾಂಜಾನಿಯಾದ ರಾಷ್ಟ್ರಾಧ್ಯಕ್ಷ ಜಾನ್ ಮಾಗುಫುಲಿ ಘೋಷಿಸಿದರು. ‘ಹಾಗಿದ್ದರೂ, ಜನರು ಜಾಗರೂಕರಾಗಿರಬೇಕು’, ಎಂದೂ ಅವರು ಸ್ಪಷ್ಟ ಪಡಿಸಿದರು.

ಕುವೈತ್ ಮತ್ತು ಸೌದಿ ಅರೇಬಿಯಾದಲ್ಲಿ ಮುಸಲ್ಮಾನರ ವಿರೋಧದಿಂದ ‘ಪಬ್‌ಜಿ’ಯು ಮೂರ್ತಿಪೂಜೆಯ ಪ್ರಸಂಗ ತೆಗೆಯಿತು !

ಕುವೈತ್ ಮತ್ತು ಸೌದಿ ಅರೇಬಿಯಾ ಈ ದೇಶಗಳಲ್ಲಿನ ಮುಸಲ್ಮಾನರು ಮತ್ತು ಅವರ ಧರ್ಮಗುರುಗಳ ವಿರೋಧದ ಹಿನ್ನೆಲೆಯಲ್ಲಿ, ‘ಆನ್‌ಲೈನ್ ಗೇಮಿಂಗ್ ಆಪ್’ ಆಗಿರುವ ಪಬ್‌ಜಿ ತನ್ನ ಹೊಸ ಆವೃತ್ತಿಯಲ್ಲಿದ್ದ ಮೂರ್ತಿಪೂಜೆಯ ಪ್ರಸಂಗವನ್ನು ತೆಗೆದುಹಾಕಿದೆ. ಮೂರ್ತಿಪೂಜೆಯು ಇಸ್ಲಾಂನ ವಿರುದ್ಧವಾಗಿದ್ದರಿಂದ ಅದಕ್ಕೆ ವಿರೋಧವಾಗಿತ್ತು.

ಪಂಗೊಂಗ್ ಸರೋವರ ಪ್ರದೇಶದಲ್ಲಿನ ಪರಿಸ್ಥಿತಿ: ‘ಇದ್ದಂತೆಯೇ’ ಎದುರುಬದುರು ನಿಂತ ಎರಡೂ ದೇಶಗಳ ಸೈನಿಕರು

ಚೀನಾವು ಪೂರ್ವ ಲಡಾಕ್‌ನ ನಿಯಂತ್ರಣ ರೇಖೆ ಬಳಿ, ‘ಗಾಲವಾನ್ ವ್ಯಾಲಿ’, ‘ಪಿಪಿ -೧೫’ ಮತ್ತು ‘ಹಾಟ್ ಸ್ಪ್ರಿಂಗ್ಸ್’ ಹಾಗೂ ‘ಪಾಂಗೊಂಗ್ ಸರೋವರ’ ಈ ನಾಲ್ಕು ಪ್ರದೇಶಗಳಲ್ಲಿ ತನ್ನ ಸೈನ್ಯವನ್ನು ನಿಲ್ಲಿಸಿ ಉದ್ವಿಗ್ನತೆಯನ್ನು ಸೃಷ್ಟಿಸಿದೆ. ಭಾರತ ಕೂಡ ಅದಕ್ಕೆ ತಕ್ಕಂತೆ ತನ್ನ ಸೈನ್ಯವನ್ನು ನೇಮಿಸಿತು. ಈ ೪ ಸ್ಥಳಗಳ ಪೈಕಿ ೩ ಪ್ರದೇಶಗಳಿಂದ ಎರಡೂ ದೇಶಗಳು ತಮ್ಮತಮ್ಮ ಸೇನಾಪಡೆಗಳು ಸ್ವಲ್ಪ ಅಂತರದಲ್ಲಿ ಹಿಂದೆ ಸರಿದಿದೆ.

‘ಚೀನಾದ ಸರಕುಗಳನ್ನು ಬಹಿಷ್ಕರಿಸುವ ಕರೆ ಸಂಪೂರ್ಣ ವಿಫಲ(ವಂತೆ) !’ – ಚೀನಾ ಹೇಳಿಕೆ

ಸಾಮಾನ್ಯ ಭಾರತೀಯರನ್ನು ಚೀನಾ ವಿರುದ್ಧ ಪ್ರಚೋದಿಸುವ ಮತ್ತು ಚೀನಾಕ್ಕೆ ಕಳಂಕ ತರುವ ಉದ್ದೇಶಪೂರ್ವಕ ಪ್ರಯತ್ನ ನಡೆಯುತ್ತಿದೆ. ಚೀನಾ ಉತ್ಪನ್ನಗಳು ಸಾಮಾನ್ಯ ಭಾರತೀಯರ ಜೀವನದ ಅವಿಭಾಜ್ಯ ಅಂಗವಾಗಿ ಮಾರ್ಪಟ್ಟಿವೆ ಮತ್ತು ಅದನ್ನು ತೆಗೆದುಹಾಕಲು ಕಷ್ಟವಿದೆ. ಚೀನಾದ ಸರಕುಗಳನ್ನು ಬಹಿಷ್ಕರಿಸುವ ಕರೆ ಸಂಪೂರ್ಣ ವಿಫಲವಾಗಲಿದೆ, ಎಂದು ಚೀನಾದ ಸರಕಾರಿ ದಿನಪತ್ರಿಕೆ ‘ಗ್ಲೋಬಲ್ ಟೈಮ್ಸ್’ನ ಲೇಖನವೊಂದರಲ್ಲಿ ಹೇಳಿದೆ.

ಬಾಂಗ್ಲಾದೇಶದಲ್ಲಿ ಮತಾಂಧ ಪೊಲೀಸರ ಹಲ್ಲೆಯಿಂದ ಮೃತಪಟ್ಟ ಹಿಂದೂ ರೈತ

ಗೋಪಾಲಗಂಜ್‌ನ ಕೋಟಲಿಪಾರಾದಲ್ಲಿ ನಿಖಿಲ್ ಕರ್ಮಾಕರ್ ಎಂಬ ಓರ್ವ ರೈತನನ್ನು ಪೊಲೀಸರು ಥಳಿಸಿದ ಪರಿಣಾಮ ಆತನ ಬೆನ್ನುಮೂಳೆಯು ೩ ಸ್ಥಳಗಳಲ್ಲಿ ಮುರಿಯಿತು. ಸರ್ಕಾರಿ ಆಸ್ಪತ್ರೆಯಲ್ಲಿ ಆತನ ಮೇಲೆ ಚಿಕಿತ್ಸೆ ನಡೆಯುತ್ತಿರುವಾಗ ಮೃತಪಟ್ಟಿದ್ದಾನೆ. ಈ ಘಟನೆ ಜೂನ್ ೨ ರಂದು ನಡೆದಿದೆ.