ಪಾಕಿಸ್ತಾನದಲ್ಲಿ ಭಾರತೀಯ ರಾಯಭಾರಿ ಕಚೇರಿಯ ಇಬ್ಬರು ಅಧಿಕಾರಿಗಳು ನಾಪತ್ತೆ

  • ತಡ ರಾತ್ರಿಯ ನಂತರ ಬಿಡುಗಡೆ

  • ಇಂತಹ ಘಟನೆಯಿಂದಲೇ ಪಾಕ್‌ನ ಭಾರತದ್ವೇಷ ಹಾಗೂ ವಿಕೃತ ಮಾನಸಿಕತೆಯು ಮತ್ತೊಮ್ಮೆ ಸಾಬೀತಾಯಿತು. ಈಗಲಾದರೂ ಭಾರತ ಸರಕಾರವು ಪಾಕ್‌ನ ಹುಟ್ಟಡಗಿಸುವುದು ಅಗತ್ಯವಿದೆ.

ಇಸ್ಲಾಮಾಬಾದ (ಪಾಕಿಸ್ತಾನ) – ಇಲ್ಲಿ ಜೂನ್ ೧೫ ರಂದು ಭಾರತೀಯ ರಾಯಭಾರಿ ಕಛೇರಿಯ ಇಬ್ಬರು ಸಿಬ್ಬಂದಿಗಳನ್ನು ಪಾಕ್‌ನ ಪೊಲೀಸರು ಒಂದು ಸುಳ್ಳು ಆರೋಪದಡಿಯಲ್ಲಿ ಬಂಧಿಸಿದ್ದರು. ಭಾರತೀಯ ವಿದೇಶಾಂಗ ಸಚಿವಾಲಯದಿಂದ ಬಂದ ಒತ್ತಡದಿಂದಾಗಿ ಈ ಸಿಬ್ಬಂದಿಗಳನ್ನು ತಡರಾತ್ರಿ ಪುನಃ ರಾಯಭಾರಿ ಕಛೇರಿಗೆ ಕರೆತಂದರು; ಆದರೆ ಇಡೀ ದಿನ ಈ ಸಿಬ್ಬಂದಿಯನ್ನು ವಿಚಾರಣೆಯ ನೆಪದಲ್ಲಿ ತೀವ್ರವಾಗಿ ಚಿತ್ರಹಿಂಸೆಯನ್ನು ನೀಡಿದರು. ಆ ಸಿಬ್ಬಂದಿಗಳಿಗೆ ಕಬ್ಬಿಣದ ಸಲಾಖೆಯಿಂದ ಹೊಡೆದರು.

ಈ ಸಿಬ್ಬಂದಿಗಳನ್ನು ೧೫ ಕ್ಕೂ ಹೆಚ್ಚು ಸಶಸ್ತ್ರ ರಕ್ಷಣಾಪಡೆಗಳು ಹಿಡಿದುಕೊಂಡು ಕೊಂಡೊಯ್ದಿದ್ದರು. ಅವರ ಕಣ್ಣುಗಳನ್ನು ಬಟ್ಟೆಯಿಂದ ಕಟ್ಟಲಾಗಿತ್ತು ಹಾಗೂ ಕೈಗೆ ಸಂಕೋಲೆಯಿಂದ ಹಾಕಲಾಗಿತ್ತು. ಅವರನ್ನು ಅಜ್ಞಾತ ಸ್ಥಳಕ್ಕೆ ಕರೆದುಕೊಂಡು ಹೋಗಿ ಚಿತ್ರಹಿಂಸೆಯನ್ನು ನೀಡಿದ್ದರು. ಅದೇರೀತಿ ಕೊಳಕು ನೀರನ್ನು ಕುಡಿಸಲಾಗಿತ್ತು. ವಿಚಾರಣೆಯಲ್ಲಿ ಸಿಬ್ಬಂದಿಗಳಿಂದ ಭಾರತೀಯ ರಾಯಭಾರಿ ಕಛೇರಿಯ ಪ್ರತಿಯೊಬ್ಬ ಅಧಿಕಾರಿಗಳ ಕೆಲಸದ ಬಗ್ಗೆ ಮಾಹಿತಿಯನ್ನು ಕೇಳಲಾಯಿತು.