ಕುವೈತ್ ಮತ್ತು ಸೌದಿ ಅರೇಬಿಯಾದಲ್ಲಿ ಮುಸಲ್ಮಾನರ ವಿರೋಧದಿಂದ ‘ಪಬ್‌ಜಿ’ಯು ಮೂರ್ತಿಪೂಜೆಯ ಪ್ರಸಂಗ ತೆಗೆಯಿತು !

ಹಿಂದೂ ಧರ್ಮದ ವಿರುದ್ಧ ಈ ‘ಆಪ್’ನಲ್ಲಿ ಏನಾದರೂ ಇರುತ್ತಿದ್ದರೆ ಹಾಗೂ ಹಿಂದೂಗಳು ಅದಕ್ಕೆ ವಿರೋಧಿಸುತ್ತಿದ್ದರೆ ಆ ಪ್ರಸಂಗವನ್ನು ಇಷ್ಟು ತತ್ಪರತೆಯಿಂದ ತೆಗೆಯುತ್ತಿದ್ದರೇ ?


ರಿಯಾಧ (ಸೌದಿ ಅರೇಬಿಯಾ) – ಕುವೈತ್ ಮತ್ತು ಸೌದಿ ಅರೇಬಿಯಾ ಈ ದೇಶಗಳಲ್ಲಿನ ಮುಸಲ್ಮಾನರು ಮತ್ತು ಅವರ ಧರ್ಮಗುರುಗಳ ವಿರೋಧದ ಹಿನ್ನೆಲೆಯಲ್ಲಿ, ‘ಆನ್‌ಲೈನ್ ಗೇಮಿಂಗ್ ಆಪ್’ ಆಗಿರುವ ಪಬ್‌ಜಿ ತನ್ನ ಹೊಸ ಆವೃತ್ತಿಯಲ್ಲಿದ್ದ ಮೂರ್ತಿಪೂಜೆಯ ಪ್ರಸಂಗವನ್ನು ತೆಗೆದುಹಾಕಿದೆ. ಮೂರ್ತಿಪೂಜೆಯು ಇಸ್ಲಾಂನ ವಿರುದ್ಧವಾಗಿದ್ದರಿಂದ ಅದಕ್ಕೆ ವಿರೋಧವಾಗಿತ್ತು. ‘ಪಬ್ ಜಿ’ ಈ ‘ಆಪ್’ ದಕ್ಷಿಣ ಕೊರಿಯಾದ ‘ಬ್ಲೂಹೋಲ್ ಇಂಕ್’ ಈ ಸಂಸ್ಥೆಯು ಅಭಿವೃದ್ಧಿಪಡಿಸಿದೆ.