ದೇವರ ಕೃಪೆಯಿಂದ ಟಾಂಜಾನಿಯಾ ದೇಶ ಕೊರೋನಾಮುಕ್ತವಾಯಿತು ! – ಟಾಂಜಾನಿಯಾ ರಾಷ್ಟ್ರಾಧ್ಯಕ್ಷರ ಘೋಷಣೆ

ವಿಪತ್ತು ನಿವಾರಣೆಯಾದಾಗ ಅಥವಾ ಯಶಸ್ಸನ್ನು ಸಿಕ್ಕಾಗ, ಭಾರತದಲ್ಲಿ ಎಷ್ಟು ಹಿಂದೂ ನಾಯಕರು ದೇವರ ಚರಣಗಳಲ್ಲಿ ಈ ರೀತಿ ಕೃತಜ್ಞತೆಯನ್ನು ವ್ಯಕ್ತಪಡಿಸುತ್ತಾರೆ ?

ಡೋಡೋಮಾ (ಟಾಂಜಾನಿಯಾ) – ದೇವರ ಕೃಪೆಯಿಂದ ಕರೋನಾ ವಿಷಾಣುವನ್ನು ಮುಗಿಸುವಲ್ಲಿ ದೇಶಕ್ಕೆ ಯಶಸ್ಸು ಸಿಕ್ಕಿದೆ, ಎಂದು ಆಫ್ರಿಕಾ ಖಂಡದ ದೇಶವಾದ ಟಾಂಜಾನಿಯಾದ ರಾಷ್ಟ್ರಾಧ್ಯಕ್ಷ ಜಾನ್ ಮಾಗುಫುಲಿ ಘೋಷಿಸಿದರು. ‘ಹಾಗಿದ್ದರೂ, ಜನರು ಜಾಗರೂಕರಾಗಿರಬೇಕು’, ಎಂದೂ ಅವರು ಸ್ಪಷ್ಟ ಪಡಿಸಿದರು.

೧. ಮಾಗುಫುಲಿ ತಮ್ಮ ಮಾತನ್ನು ಮುಂದುವರಿಸುತ್ತ, ‘ನಾಗರಿಕರು ಮಾಡಿದ ಪ್ರಾರ್ಥನೆ, ಅದೇರೀತಿ ಸ್ಥಳೀಯ ಆರೋಗ್ಯ ಅಧಿಕಾರಿಗಳು ಮತ್ತು ಮೊದಲ ಹಂತದ ಸಿಬ್ಬಂದಿಗಳ ಶ್ರಮದಿಂದಾಗಿ, ಕರೋನಾವನ್ನು ನಿವಾರಿಸಲು ಸಾಧ್ಯವಾಯಿತು’ ಎಂದು ಹೇಳಿದರು.

೨. ಮಾಗುಫುಲಿಯವರು ಈ ಹಿಂದೆ ‘ಕರೋನಾದ ನಾಶಕ್ಕಾಗಿ ಪ್ರಾರ್ಥನೆ ಮಾಡಿ’, ಎಂದು ಕರೆ ನೀಡಿದ್ದರು. ‘ಕರೋನಾ ಪವಿತ್ರ ಯೇಸುಕ್ರಿಸ್ತನ ದೇಹದಲ್ಲಿ ಬದುಕಲು ಸಾಧ್ಯವಿಲ್ಲ’, ಎಂದು ಅವರು ಪ್ರತಿಪಾದಿಸಿದ್ದರು. ಪರೀಕ್ಷಾ ಸಲಕರಣೆಗಳ ದೋಷದಿಂದಾಗಿ ದೇಶದಲ್ಲಿ ಕೊರೋನಾ ಪೀಡಿತರ ಸಂಖ್ಯೆ ಹೆಚ್ಚಾಗಿದೆ’, ಎಂದು ಮಾಗುಫುಲಿ ಆರೋಪಿಸಿದ್ದರು.

ಟಾಂಜಾನಿಯಾ ಮಾಹಿತಿಯನ್ನು ಮುಚ್ಚಿಡುತ್ತಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆಗೆ ಸಂದೇಹ

ಏಪ್ರಿಲ್ ೨೯ ರಿಂದ ಟಾಂಜಾನಿಯಾ ಕರೋನದ ಬಗ್ಗೆ ಯಾವುದೇ ಮಾಹಿತಿಯನ್ನು ಸಾರ್ವಜನಿಕ ಮಾಡಿಲ್ಲ. ಏಪ್ರಿಲ್ ೨೯ ರ ಹೊತ್ತಿಗೆ ಟಾಂಜಾನಿಯಾದಲ್ಲಿ ೫೦೯ ರೋಗಿಗಳಿದ್ದು, ೨೧ ಮಂದಿ ಕರೋನಾದಿಂದ ಸಾವನ್ನಪ್ಪಿದ್ದರು. ಸ್ಥಳೀಯವಾಗಿ ಕಾರ್ಯನಿರ್ವಹಿಸುವ ವಿಶ್ವ ಆರೋಗ್ಯ ಸಂಸ್ಥೆಯ ಅಧಿಕಾರಿಗಳು, ‘ಕರೋನಾ ಸೋಂಕನ್ನು ತಡೆಗಟ್ಟಲು ಟಾಂಜಾನಿಯಾವು ಸಾಮಾಜಿಕ ಅಂತರದ ನಿಯಮಗಳನ್ನು ಪಾಲಿಸುತ್ತಿಲ್ಲ, ಅದೇರೀತಿ ಇಲ್ಲಿ ಸಾರ್ವಜನಿಕ ಪ್ರಾರ್ಥನಾಸ್ಥಳಗಳನ್ನೂ ತೆರೆದಿದೆ’ ಎಂದು ಹೇಳಿದರು.
ಮೇ ತಿಂಗಳಲ್ಲಿ ಟಾಂಜಾನಿಯಾದಲ್ಲಿನ ಅಮೇರಿಕಾದ ರಾಯಭಾರಿ ಕಚೇರಿಯು ಅಮೇರಿಕಾದ ನಾಗರಿಕರಿಗೆ ಕೆಲವು ಸೂಚನೆಗಳನ್ನು ನೀಡಿತ್ತು. ಇದರಲ್ಲಿ ಕರೋನಾ ಸೋಂಕಿನ ಅಪಾಯ ಹೆಚ್ಚು ಇದೆ ಎಂದು ಉಲ್ಲೇಖಿಸಲಾಗಿತ್ತು.