ಬಾಂಗ್ಲಾದೇಶದಲ್ಲಿ ಹಿಂದೂಗಳ ವಂಶವಿಚ್ಛೇದಕ್ಕೆ ಸಂಚು ! – ವಿಶ್ವ ಹಿಂದೂ ಮಹಾಸಂಘ

  • ಬಾಂಗ್ಲಾದೇಶದಲ್ಲಿ ಅಸುರಕ್ಷಿತ ಹಿಂದೂಗಳು !

  • ಬಾಂಗ್ಲಾದೇಶದಲ್ಲಿ ಹಿಂದೂಗಳ ರಕ್ಷಣೆಗಾಗಿ ಭಾರತ ಸರಕಾರ ಏನಾದರೂ ಹೆಜ್ಜೆ ಇಡುವುದೇ ?

ನವ ದೆಹಲಿ : ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲಿನ ದೌರ್ಜನ್ಯ ಸತತವಾಗಿ ಹೆಚ್ಚಾಗುತ್ತಿದೆ. ಬಾಂಗ್ಲಾದೇಶದಲ್ಲಿ ಮಾನವಹಕ್ಕುಗಳ ಸ್ಥಿತಿ ದಿನದಿಂದ ದಿನಕ್ಕೆ ಹದಗೆಡುತ್ತಿದೆ. ಅಲ್ಲಿನ ಅಲ್ಪಸಂಖ್ಯಾತ ಹಿಂದೂಗಳಿಗೆ ನ್ಯಾಯ ಸಿಗುವುದು ಅಸಾಧ್ಯವಾಗಿದೆ. ಹಿಂದೂಗಳ ಮೇಲೆ ಹಲ್ಲೆ ಮಾಡುವ ಮತಾಂಧ ಅಪರಾಧಿಗಳನ್ನು ಸಹ ಬಂಧಿಸಲಾಗುತ್ತಿಲ್ಲ. ಇದು ಹೀಗೆ ಮುಂದುವರಿದರೆ ಬಾಂಗ್ಲಾದೇಶದಲ್ಲಿ ಹಿಂದೂಗಳು ನಿರ್ನಾಮವಾಗುವರು. ಇದು ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತ ಹಿಂದೂಗಳನ್ನು ವಂಶವಿಚ್ಛೇದ ಮಾಡುವ ಪಿತೂರಿಯಾಗಿದೆ, ಎಂದು ವಿಶ್ವ ಹಿಂದೂ ಮಹಾಸಂಘದ ಬಾಂಗ್ಲಾದೇಶ ವಿಭಾಗದ ಪ್ರಧಾನ ಕಾರ್ಯದರ್ಶಿ ಹೇಳಿದ್ದಾರೆ. ಬಾಂಗ್ಲಾದೇಶದಲ್ಲಿ ಹಿಂದೂಗಳ ವಿರುದ್ಧ ದೌರ್ಜನ್ಯ ಎಸಗುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಅವರು ಒತ್ತಾಯಿಸಿದ್ದಾರೆ.

ಮೇ ೨೦೨೦ ರಲ್ಲಿ ನಡೆದ ಘಟನೆಗಳು

  • ೪ ಹಿಂದೂಗಳ ಕೊಲೆ
  • ೧೦ ದೇವಸ್ಥಾನಗಳ ನಾಶ ಮತ್ತು ವಿಗ್ರಹಗಳನ್ನು ಧ್ವಂಸ ಮಾಡಿದರು
  • ೪ ಹಿಂದೂ ಯುವತಿಯರ ಅಪಹರಣ
  • ೫ ಹಿಂದೂ ಯುವತಿಯರ ಅತ್ಯಾಚಾರ
  • ೮ ಹಿಂದೂ ಯುವತಿಯರ ಮೇಲೆ ಅತ್ಯಾಚಾರ ಮಾಡಲು ಪ್ರಯತ್ನ
  • ೩ ಹಿಂದೂ ಯುವತಿಯರನ್ನು ಬಲವಂತವಾಗಿ ಮತಾಂತರಗೊಳಿಸುವುದು
  • ಹಿಂದೂ ವ್ಯಾಪಾರಿಗಳ ೧೨ ಅಂಗಡಿಗಳ ಲೂಟಿ
  • ಮತಾಂಧರು ಹಿಂದೂಗಳ ೪೩೫ ಎಕರೆ ಭೂಮಿಯನ್ನು ವಶಪಡಿಸಿಕೊಂಡರು
  • ೪೩ ಹಿಂದೂ ಕುಟುಂಬಗಳಿಗೆ ತಮ್ಮ ಮನೆಯನ್ನು ತೊರೆಯುವಂತೆ ಮಾಡಿದರು
  • ೧೦ ಹಿಂದೂ ಕುಟುಂಬಗಳಿಗೆ ದೇಶವನ್ನು ತೊರೆಯುವಂತೆ ಒತ್ತಾಯಿಸಿದರು