ಚೀನಾ ಗಡಿಯನ್ನು ಅತಿಕ್ರಮಣ ಮಾಡಿ ವಿವಾದಗಳನ್ನು ನಿರ್ಮಾಣ ಮಾಡುತ್ತದೆ ನಂತರ ನಾವು ಅವರೊಂದಿಗೆ ಕುಳಿತು ಚರ್ಚಿಸುತ್ತೇವೆ, ಇದು ದೇಶಕ್ಕೆ ಒಗ್ಗುವಂತಹದ್ದಲ್ಲ ! ಇದು ಮಾನವಶಕ್ತಿ, ಹಣ ಮತ್ತು ಸಮಯವನ್ನು ವ್ಯರ್ಥ ಮಾಡಿದಂತಾಗಿದೆ ! ಚೀನಾವು ಭಾರತದ ಭೂಪ್ರದೇಶವನ್ನು ವಕ್ರದೃಷ್ಟಿಯಿಂದ ನೋಡಲು ಧೈರ್ಯ ಮಾಡದಂತೆ ತನ್ನ ವರ್ಚಸ್ಸನ್ನು ಬೆಳೆಸಿಕೊಳ್ಳುವುದು ಅಗತ್ಯವಿದೆ !
ಲೇಹ್ (ಲಡಾಖ್) – ಚೀನಾವು ಪೂರ್ವ ಲಡಾಕ್‌ನ ನಿಯಂತ್ರಣ ರೇಖೆ ಬಳಿ, ‘ಗಾಲವಾನ್ ವ್ಯಾಲಿ’, ‘ಪಿಪಿ -೧೫’ ಮತ್ತು ‘ಹಾಟ್ ಸ್ಪ್ರಿಂಗ್ಸ್’ ಹಾಗೂ ‘ಪಾಂಗೊಂಗ್ ಸರೋವರ’ ಈ ನಾಲ್ಕು ಪ್ರದೇಶಗಳಲ್ಲಿ ತನ್ನ ಸೈನ್ಯವನ್ನು ನಿಲ್ಲಿಸಿ ಉದ್ವಿಗ್ನತೆಯನ್ನು ಸೃಷ್ಟಿಸಿದೆ. ಭಾರತ ಕೂಡ ಅದಕ್ಕೆ ತಕ್ಕಂತೆ ತನ್ನ ಸೈನ್ಯವನ್ನು ನೇಮಿಸಿತು.
ಈ ೪ ಸ್ಥಳಗಳ ಪೈಕಿ ೩ ಪ್ರದೇಶಗಳಿಂದ ಎರಡೂ ದೇಶಗಳು ತಮ್ಮತಮ್ಮ ಸೇನಾಪಡೆಗಳು ಸ್ವಲ್ಪ ಅಂತರದಲ್ಲಿ ಹಿಂದೆ ಸರಿದಿದೆ. ಪ್ಯಾಂಗೊಂಗ್ ಸರೋವರದ ಉತ್ತರ ಭಾಗದಲ್ಲಿ ಪರಿಸ್ಥಿತಿ ಮಾತ್ರ ‘ಇದ್ದಂತೆಯೇ’ ಇದ್ದು ಎರಡೂ ದೇಶಗಳ ಸೈನಿಕರು ಇನ್ನೂ ಮುಖಾಮುಖಿಯಾಗಿ ನಿಂತಿದ್ದಾರೆ. ಪಂಗೊಂಗ್ ಸರೋವರದ ಈ ಭಾಗವೇ ಸಂಘರ್ಷದ ಮುಖ್ಯ ಕೇಂದ್ರಬಿಂದುವಾಗಿದೆ. ಈ ವಿವಾದವನ್ನು ಬಗೆಹರಿಸಲು ಜೂನ್ ೬ ರಂದು ಲೆಫ್ಟಿನೆಂಟ್ ಜನರಲ್ ಮಟ್ಟದಲ್ಲಿ ಮೊದಲ ಸಭೆ ನಡೆದಿತ್ತು.