ಜಿಹಾದಿ ಭಯೋತ್ಪಾದಕರು ಕಾಶ್ಮೀರಿ ಹಿಂದೂ ಅಜಯ ಪಂಡಿತಾ ಅವರ ಹತ್ಯೆ ಮಾಡಿದ್ದರ ವಿರುದ್ಧ ವಿಶ್ವದಾದ್ಯಂತ ಪ್ರತಿಭಟನೆ

  • ‘#HinduUnitedAgainstTerror’ ಈ ಟ್ವಿಟರ್ ಟ್ರೆಂಡ್ ಮೂಲಕ ಜಗತ್ತಿನಾದಾದ್ಯಂತ ಧ್ವನಿ ಎತ್ತಿದ ಹಿಂದೂಗಳೂ

  • ಆಂದೋಲನದ ನೇತೃತ್ವ ವಹಿಸಿದ್ದ ಬಿಜೆಪಿ ಮುಖಂಡ ಕಪಿಲ್ ಮಿಶ್ರಾ

ಹಿಂದೂಗಳ ಮೇಲೆ ನಡೆಯುತ್ತಿರುವ ದೌರ್ಜನ್ಯಗಳ ವಿರುದ್ಧ ಜಗತ್ತಿನಾದ್ಯಂತದ ಹಿಂದೂಗಳು ಜಾಗೃತವಾಗುತ್ತಿದ್ದಾರೆ ಎಂಬುದಕ್ಕೆ ಇದೊಂದು ಉದಾಹರಣೆಯಾಗಿದೆ. ಅಜಯ ಪಂಡಿತಾ ಇವರ ಹತ್ಯೆ ಮಾಡಿದ ಜಿಹಾದಿಗಳಿಗೆ ಸರಕಾರ ತಕ್ಕ ಪಾಠ ಕಲಿಸಬೇಕು ಎಂಬುದು ಹಿಂದೂಗಳ ಅಪೇಕ್ಷೆಯಾಗಿದೆ. ಅದೇರೀತಿ ಭಾರತದಲ್ಲಿ ಮಾತ್ರವಲ್ಲದೆ ಜಗತ್ತಿನಾದ್ಯಂತ ಹಿಂದೂಗಳನ್ನು ಯಾರೂ ವಕ್ರದೃಷ್ಟಿಯಿಂದ ನೋಡದಷ್ಟು ಪ್ರಭಾವವನ್ನು ಸರ್ಕಾರವು ಹಿಂದೂದ್ವೇಷಿಯರಲ್ಲಿ ನಿರ್ಮಿಸುವುದು ಅಗತ್ಯವಿದೆ !

ನವ ದೆಹಲಿ: ಕಾಶ್ಮೀರಿ ಹಿಂದೂ ಆಗಿದ್ದ ಅಜಯ ಪಂಡಿತಾ ಅವರನ್ನು ಜಿಹಾದಿ ಉಗ್ರರು ಕ್ರೂರವಾಗಿ ಗುಂಡಿಕ್ಕಿ ಕೊಂದಿದ್ದಾರೆ. ಈ ಹತ್ಯೆಯ ವಿರುದ್ಧ ಜಗತ್ತಿನಾದ್ಯಂತ ಹಿಂದೂಗಳು ಪ್ರತಿಭಟನೆಯನ್ನು ನಡೆಸಿದರು ಮತ್ತು ಅಜಯ ಪಂಡಿತಾಗೆ ನ್ಯಾಯ ಸಿಗಬೇಕೆಂದು ಒತ್ತಾಯಿಸಿದರು. ಜಗತ್ತಿನ ೧೦೦ ನಗರಗಳಲ್ಲಿ ಪ್ರತಿಭಟನೆ ಆಯೋಜಿಸಲಾಗಿತ್ತು. ಬಿಜೆಪಿ ಮುಖಂಡ ಕಪಿಲ್ ಮಿಶ್ರಾ ಅವರು ಈ ಆಂದೋಲನವನ್ನು ಆಯೋಜಿಸಿದ್ದರು. ಹತ್ಯೆಯನ್ನು ವಿರೋಧಿಸಿ ‘#HinduUnitedAgainstTerror’ ಎಂಬ ‘ಹ್ಯಾಶ್‌ಟ್ಯಾಗ್’ (ಒಂದೇ ವಿಷಯದ ಬಗ್ಗೆ ನಡೆಸಿದ ಚರ್ಚೆ) ಟ್ವಿಟರ್‌ನಲ್ಲಿ ‘ಟ್ರೆಂಡ್’ ಆಗಿತ್ತು. ಜಾಗತಿಕ ಮಟ್ಟದಲ್ಲಿ ಈ ಹ್ಯಾಶ್‌ಟ್ಯಾಗ್ ಜಗತ್ತಿನಲ್ಲಿ ಎರಡನೇ ಸ್ಥಾನದಲ್ಲಿತ್ತು.

ನ್ಯೂಜಿಲೆಂಡ್‌ನ ಆಕಲಂಡ್ ನಗರದಲ್ಲಿ ಪ್ರತಿಭಟನೆ

ಅಜಯ ಪಂಡಿತಾ ಅವರ ಹತ್ಯೆಯನ್ನು ವಿರೋಧಿಸಿ ನಗರದಲ್ಲಿ ನೂರಾರು ಹಿಂದೂಗಳು ಒಟ್ಟಾದರು ಮತ್ತು ಅವರು ಹತ್ಯೆಯನ್ನು ಖಂಡಿಸಿದರು. ಈ ಸಮಯದಲ್ಲಿ ಹಿಂದೂಗಳು ಕಾಶ್ಮೀರದ ಹಿಂದೂಗಳ ಮೇಲೆ ನಡೆಯುತ್ತಿರುವ ದೌರ್ಜನ್ಯದ ವಿರುದ್ಧ ಪ್ರತಿಭಟಿಸಿದರು, ಅದೇರೀತಿ ಕಾಶ್ಮೀರಿ ಹಿಂದೂಗಳನ್ನು ಕೆಲವು ಷರತ್ತುಗಳ ಮೇರೆಗೆ ಕಾಶ್ಮೀರದಲ್ಲಿ ಪುನರ್ವಸತಿ ಕಲ್ಪಿಸಬೇಕೆಂದು ಒತ್ತಾಯಿಸಿದರು.

‘#HinduUnitedAgainstTerror’ ಈ ಐತಿಹಾಸಿಕ ಟ್ರೆಂಡ್ ಬಗ್ಗೆ ಸಂಬಂಧಿಸಿದ ವೈಶಿಷ್ಟ್ಯಪೂರ್ಣ ಮಾಹಿತಿ !

ಟ್ವಿಟರ್‌ನಲ್ಲಿ ಜಾಗತಿಕ ಟ್ರೆಂಡ್‌ಗಳಲ್ಲಿ (Worldwide trends) ಕೇವಲ ೨ ಗಂಟೆಗಳಲ್ಲಿ ದ್ವಿತೀಯ ಸ್ಥಾನದಲ್ಲಿದ್ದರೆ, ೪ ಗಂಟೆಗಳಲ್ಲಿ ಮೊದಲ ೫ ಸ್ಥಾನದಲ್ಲಿತ್ತು !

೫ ಲಕ್ಷಕ್ಕೂ ಹೆಚ್ಚು ಜನರಿಂದ ಟ್ವೀಟ್ !

ಜಾಗತಿಕ ಮಟ್ಟದಲ್ಲಿ ಅತೀ ಹೆಚ್ಚು ಚರ್ಚಿಸಲಾದ ಟ್ರೆಂಡ್‌ನಲ್ಲಿ (Todays hottest twitter trends worldwide) ನೋಂದಣಿ !

ಭಾರತದಲ್ಲಿ ೪ ಗಂಟೆಗಳ ಕಾಲ ಮೊದಲ ಸ್ಥಾನದಲ್ಲಿ ಹಾಗೂ ೯ ಗಂಟೆಗಳ ಕಾಲ ಮೊದಲ ೫ ನೇ ಸ್ಥಾನದಲ್ಲಿತ್ತು !