ವಾಶಿಂಗ್ಟನ್ (ಅಮೇರಿಕಾ) – ಜಗತ್ತಿನ ೨೦೦ ಕ್ಕೂ ಹೆಚ್ಚು ದೇಶಗಳಲ್ಲಿ ಕೊರೋನಾದ ಸಂಕ್ರಮಣವಾಗಿದೆ. ಇದರಲ್ಲಿ ಹೆಚ್ಚಿನ ದೇಶದಲ್ಲಿ ಕೊರೋನಾದ ಮೊದಲನೇ ಅಲೆ ಬಂದಿರುವಗಲೇ ಈಗ ೮೧ ದೇಶದಲ್ಲಿ ಎರಡನೇಯ ಅಲೆ ಬರುವಂತಹ ಸ್ಥಿತಿ ನಿರ್ಮಾಣವಾಗಿದೆ, ಎಂದು ಜಾಗತಿಕ ಆರೋಗ್ಯ ಸಂಸ್ಥೆಯು ಎಚ್ಚರಿಕೆ ನೀಡಿದೆ. ‘ದಕ್ಷಿಣ ಏಶಿಯಾ, ಮಧ್ಯ-ಪೂರ್ವ ಏಶಿಯಾ ಹಾಗೂ ಆಫ್ರಿಕಾ ದೇಶಗಳಲ್ಲಿಯ ಪರಿಸ್ಥಿತಿಯು ಇನ್ನೂ ಚಿಂತಾಜನಕ ಆಗಲಿದೆ’, ಎಂದೂ ಈ ಸಂಸ್ಥೆಯು ಹೇಳಿದೆ.
ಆಫ್ರಿಕಾ ದೇಶಗಳಲ್ಲಿ ೩ ತಿಂಗಳಿನಲ್ಲಿ ೧ ಲಕ್ಷಕ್ಕಿಂತಲೂ ಹೆಚ್ಚು ಕೊರೋನಾ ಪೀಡಿತರು ಪತ್ತೆಯಾಗಿತ್ತು; ಆದರೆ ಕಳೆದ ೧೯ ದಿನಗಳಲ್ಲಿ ಈ ಸಂಖ್ಯೆ ದ್ವಿಗುಣಗೊಂಡಿದೆ. ಇನ್ನೊಂದು ಕಡೆ ೩೬ ದೇಶಗಳಲ್ಲಿ ಕೊರೋನಾ ಪೀಡಿತರ ಸಂಖ್ಯೆಯಲ್ಲಿ ಇಳಿಕೆಯಾಗಿದೆ ಎಂದು ಜಾಗತಿಕ ಆರೋಗ್ಯ ಸಂಸ್ಥೆಯು ಹೇಳಿದೆ. ಇದರಲ್ಲಿ ೪ ಲಕ್ಷ ೬೭ ಸಾವಿರ ಜನರು ಮೃತಪಟ್ಟಿದ್ದರೆ ೪೭ ಲಕ್ಷಕ್ಕೂ ಹೆಚ್ಚು ಜನರು ಕೊರೋನಾದಿಂದ ಗುಣಮುಖರಾಗಿದ್ದಾರೆ.