ಬಾಂಗ್ಲಾದೇಶದಲ್ಲಿ ಮತಾಂಧ ಪೊಲೀಸರ ಹಲ್ಲೆಯಿಂದ ಮೃತಪಟ್ಟ ಹಿಂದೂ ರೈತ

‘ಆಕಸ್ಮಿಕ ಸಾವು’ ಎಂದು ಹೇಳಲು ಪ್ರಯತ್ನಿಸಿದ ಪೊಲೀಸರು

  • ಮುಸಲ್ಮಾನ ಬಹುಸಂಖ್ಯಾತ ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲಿನ ದೌರ್ಜನ್ಯವನ್ನು ತಡೆಯಲು ಒಂದೇಒಂದು ಜಾತ್ಯತೀತ, ಪ್ರಗತಿ(ಅಧೋಗತಿ)ಪರ ಅಥವಾ ಮಾನವ ಹಕ್ಕುಗಳ ಸಂಘಟನೆ ಮುಂದೆ ಬರುವುದಿಲ್ಲ, ಎಂಬುದನ್ನು ಗಮನದಲ್ಲಿಟ್ಟುಕೊಳ್ಳಿ !
  • ಭಾರತದಲ್ಲಿರುವ ಜಗತ್ತಿನಾದ್ಯಂತ ಇಸ್ಲಾಮಿಕ್ ರಾಷ್ಟ್ರಗಳ ಸಂಘಟನೆಗಳು, ಮುಸಲ್ಮಾನರ ಬಗ್ಗೆ ಯಾವುದೇ ರೀತಿಯ ಅನ್ಯಾಯ ಆಗದೇ ಇರುವಾಗಲೂ ಅದರ ಬಗ್ಗೆ ಮಾತನಾಡುತ್ತಿರುತ್ತಾರೆ.
    ಈಗ ಭಾರತ ಸರ್ಕಾರವು ಬಾಂಗ್ಲಾದೇಶದಲ್ಲಿ ನಿಜವಾಗಿ ಆಗುತ್ತಿರುವ ಹಿಂದೂಗಳ ಮೇಲಿನ ಅತ್ಯಾಚಾರದ ವಿರುದ್ಧ ಧ್ವನಿ ಎತ್ತಬೇಕು’, ಎಂದು ಹಿಂದೂಗಳಿಗೆ ಅನಿಸುತ್ತದೆ. !

ಢಾಕಾ (ಬಾಂಗ್ಲಾದೇಶ) – ಗೋಪಾಲಗಂಜ್‌ನ ಕೋಟಲಿಪಾರಾದಲ್ಲಿ ನಿಖಿಲ್ ಕರ್ಮಾಕರ್ ಎಂಬ ಓರ್ವ ರೈತನನ್ನು ಪೊಲೀಸರು ಥಳಿಸಿದ ಪರಿಣಾಮ ಆತನ ಬೆನ್ನುಮೂಳೆಯು ೩ ಸ್ಥಳಗಳಲ್ಲಿ ಮುರಿಯಿತು. ಸರ್ಕಾರಿ ಆಸ್ಪತ್ರೆಯಲ್ಲಿ ಆತನ ಮೇಲೆ ಚಿಕಿತ್ಸೆ ನಡೆಯುತ್ತಿರುವಾಗ ಮೃತಪಟ್ಟಿದ್ದಾನೆ. ಈ ಘಟನೆ ಜೂನ್ ೨ ರಂದು ನಡೆದಿದೆ.

೧. ನಿಖಿಲ್ ಕರ್ಮಾಕರ್ ತಮ್ಮ ಸ್ನೇಹಿತರೊಂದಿಗೆ ರಾಮ್‌ಶಿಲ್ ಬಜಾರ್‌ನಲ್ಲಿ ಇಸ್ಪೀಟ್ ಆಡುತ್ತಿರುವಾಗ ಕೋಟಲಿಪರ ಪೊಲೀಸರು ಆ ಸ್ಥಳಕ್ಕೆ ತಲುಪಿದರು. ಪೊಲೀಸರು ಬಂದ ಕೂಡಲೇ ಆತನ ಸ್ನೇಹಿತ ಓಡಿಹೋದ; ಆದರೆ ನಿಖಿಲ್ ಕರ್ಮಾಕರ್ ಅವರನ್ನು ಸಹಾಯಕ ಉಪನಿರೀಕ್ಷಕ ಶಮೀಮ ಉದ್ದೀನ್ ಹಿಡಿದರು. ನಂತರ ಶಮೀಮ ಇವರು ನಿಖಿಲ್‌ಅನ್ನು ಥಳಿಸಿದರು. ಅದರಿಂದ ಆತನ ಬೆನ್ನು ಮೂಳೆ ೩ ಕಡೆಗಳಲ್ಲಿ ಮುರಿಯಿತು.

೨. ಈ ಬಗ್ಗೆ ನಾನು ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಪೊಲೀಸ್ ಉಪನಿರೀಕ್ಷಕ ಶಮೀಮ್ ಉದ್ದೀನ್ ಹೇಳಿದ್ದಾರೆ. ಜೊತೆಗೆ ನಿಮಗೆ ನನ್ನ ಬಗ್ಗೆ ಯಾವುದೇ ಪ್ರಶ್ನೆಗಳು ಇದ್ದಲ್ಲಿ, ನೀವು ಅಪರ ಅಧಿಕಾರಿಯನ್ನು ವಿಚಾರಿಸಬಹುದು ಎಂದು ಹೇಳಿದರು.

೩. ಕೋಟಲೀಪಾರಾ ಪೊಲೀಸ ಠಾಣೆಯ ಅಪರ ಅಧಿಕಾರಿಯವರು ಮಾತನಾಡುತ್ತ, ‘ನನಗೆ ತಿಳಿದ ಮಾಹಿತಿಯ ಪ್ರಕಾರ ನಿಖಿಲ್ ಮರದಿಂದ ಬಿದ್ದಿದ್ದರಿಂದ ಗಂಭೀರವಾಗಿ ಗಾಯಗೊಂಡನು ಹಾಗೂ ಚಿಕಿತ್ಸೆ ಪಡೆಯುತ್ತಿರುವಾಗಲೇ ಆತ ಮೃತಪಟ್ಟನು’ ಎಂದು ಹೇಳಿದರು.

೪. ಗೋಪಾಲಗಂಜ್ ಪೊಲೀಸ ಅಧೀಕ್ಷಕರಾದ ಮೊಹಮ್ಮದ್ ಸೈದೂರ್ ರಹಮಾನ್ ಖಾನ್ ಮಾತನಾಡುತ್ತಾ, ‘ನನ್ನ ಮಾಹಿತಿಯ ಪ್ರಕಾರ ನಿಖಿಲ್ ಸಾವು ಆಕಸ್ಮಿಕವಾಗಿದೆ. ನಮ್ಮಲ್ಲಿ ಪೊಲೀಸರ ದೌರ್ಜನ್ಯದ ಬಗ್ಗೆ ಯಾವುದೇ ದೂರುಗಳು ಬಂದಿಲ್ಲ; ಆದರೆ ದೂರು ಬಂದರೆ ನಾವು ಖಂಡಿತವಾಗಿಯೂ ಘಟನೆಯ ಬಗ್ಗೆ ತನಿಖೆ ನಡೆಸುತ್ತೇವೆ’ ಎಂದು ಹೇಳಿದರು. (ಬಾಂಗ್ಲಾದೇಶದ ಪೊಲೀಸರು ಈ ರೀತಿ ನೆಪವನ್ನು ಹೇಳುವ ಮೂಲಕ ತಮ್ಮನ್ನು ಬಚಾವ್ ಮಾಡಿಕೊಳ್ಳುತ್ತಾರೆ ಇದು ಇದರಿಂದ ಕಾಣಿಸುತ್ತದೆ. ಬಾಂಗ್ಲಾದೇಶದಲ್ಲಿ ಸರ್ಕಾರ, ಪೊಲೀಸರು ಮತ್ತು ಆಡಳಿತವು ಹಿಂದೂಗಳನ್ನು ದುರ್ಲಕ್ಷಿಸುತ್ತಾರೆ. ಆದ್ದರಿಂದಲೇ ಅವರ ರಕ್ಷಣೆಯ ಜವಾಬ್ದಾರಿಯನ್ನು ಈಗ ಭಾರತ ಸರ್ಕಾರ ತೆಗೆದುಕೊಳ್ಳುವುದು ಅಗತ್ಯವಿದೆ -ಸಂಪಾದಕರು)

೫. ನಿಖಿಲ್‌ರವರ ನೆರೆಹೊರೆಯವರು ಮಾತನಾಡುತ್ತಾ, ‘ನಿಖಿಲ್ ಒಬ್ಬ ಸಜ್ಜನ ವ್ಯಕ್ತಿಯಾಗಿದ್ದ. ಪೊಲೀಸರೇ ಈ ರೀತಿಯ ಅಪರಾಧದಲ್ಲಿ ಸಿಲುಕಿಸಿದರೆ ನ್ಯಾಯಕ್ಕಾಗಿ ನಾವು ಎಲ್ಲಿ ಹೋಗಬೇಕು ?’, ಎಂದಿದ್ದಾರೆ.