- ಚೀನಾದ ಈ ಹೇಳಿಕೆಯನ್ನು ಭಂಗಗೊಳಿಸಲು ದೇಶದ ಪ್ರಯೊಬ್ಬ ನಾಗರೀಕರು ಪ್ರಯತ್ನಿಸಿ ಚೀನಾಗೆ ಕಪಾಳಮೋಕ್ಷ ಮಾಡಬೇಕು !
- ಭಾರತದಲ್ಲಿ ಚೀನಾದ ಸರಕುಗಳ ಬೇಡಿಕೆ ಕುಸಿಯುತ್ತಿದ್ದಂತೆ ಚೀನಾಗೆ ಆರ್ಥಿಕ ಹೊಡೆತ ಬೀಳಲಿದೆ. ಎಂಬುದನ್ನು ಗಮನದಲ್ಲಿಟ್ಟುಕೊಂಡೇ ಚೀನಾ ಇಂತಹ ಹೇಳಿಕೆಗಳನ್ನು ನೀಡುತ್ತಿದೆ !
ಬೀಜಿಂಗ್ (ಚೀನಾ) – ಸಾಮಾನ್ಯ ಭಾರತೀಯರನ್ನು ಚೀನಾ ವಿರುದ್ಧ ಪ್ರಚೋದಿಸುವ ಮತ್ತು ಚೀನಾಕ್ಕೆ ಕಳಂಕ ತರುವ ಉದ್ದೇಶಪೂರ್ವಕ ಪ್ರಯತ್ನ ನಡೆಯುತ್ತಿದೆ. ಚೀನಾ ಉತ್ಪನ್ನಗಳು ಸಾಮಾನ್ಯ ಭಾರತೀಯರ ಜೀವನದ ಅವಿಭಾಜ್ಯ ಅಂಗವಾಗಿ ಮಾರ್ಪಟ್ಟಿವೆ ಮತ್ತು ಅದನ್ನು ತೆಗೆದುಹಾಕಲು ಕಷ್ಟವಿದೆ. ಚೀನಾದ ಸರಕುಗಳನ್ನು ಬಹಿಷ್ಕರಿಸುವ ಕರೆ ಸಂಪೂರ್ಣ ವಿಫಲವಾಗಲಿದೆ, ಎಂದು ಚೀನಾದ ಸರಕಾರಿ ದಿನಪತ್ರಿಕೆ ‘ಗ್ಲೋಬಲ್ ಟೈಮ್ಸ್’ನ ಲೇಖನವೊಂದರಲ್ಲಿ ಹೇಳಿದೆ. ಪ್ರಸ್ತುತ ಭಾರತದಲ್ಲಿ ಚೀನಾದೊಂದಿಗಿನ ವಿವಾದಗಳು ಮತ್ತು ಚೀನಾದಿಂದ ಕರೋನಾ ಏಕಾಏಕಿ ಸೋಂಕಿನಿಂದಾಗಿ ಚೀನಾದ ವಸ್ತುಗಳನ್ನು ಬಹಿಷ್ಕರಿಸುವ ಹಾಗೂ ಸ್ವದೇಶಿ ವಸ್ತುಗಳನ್ನು ಉಪಯೋಗಿಸುವ ಅಭಿಯಾನವನ್ನು ಪ್ರಾರಂಭಿಸಿದೆ. ಅದಕ್ಕೆ ‘ಶಾಂಘೈ ಇನ್ಸ್ಟಿಟ್ಯೂಟ್ ಫಾರ್ ಇಂಟರ್ ನ್ಯಾಷನಲ್ ಸ್ಟಡೀಜ್’ನ ಝಾಓ ಜೆನಚೆಂಗ ಇವರು ಈ ಲೇಖನವನ್ನು ಬರೆದಿದ್ದಾರೆ.
೧. ಈ ಲೇಖನದಲ್ಲಿ ಲಡಾಖ್‌ನ ಶಿಕ್ಷಣ ತಜ್ಞ ಸೋನಮ್ ವಾಂಗ್‌ಚೂಕ್ ಅವರನ್ನೂ ಉಲ್ಲೇಖಿಸಿದ್ದಾರೆ. ಅವರು ಚೀನಾದ ಸರಕುಗಳನ್ನು ಬಹಿಷ್ಕರಿಸುವಂತೆ ಕೋರಿ ‘ಯೂಟ್ಯೂಬ್’ನಲ್ಲಿ ವೀಡಿಯೊ ಅಪ್‌ಲೋಡ್ ಮಾಡಿ ಚೀನಾದ ಸರಕುಗಳ ಮೇಲೆ ಬಹಿಷ್ಕಾರ ಹಾಕುವಂತೆ ಆಗ್ರಹಿಸಿದ್ದರು. ‘ಸೋನಮ ವಾಂಗಚೂಕ್ ನಂತಹ ವ್ಯಕ್ತಿ ಸಾಮಾನ್ಯ ಭಾರತೀಯರಿಗೆ ಚೀನಾದ ಸರಕುಗಳ ಮೇಲೆ ಬಹಿಷ್ಕಾರ ಹಾಕಲು ಪ್ರಚೋಧಿಸುತ್ತಿದ್ದಾರೆ’, ಎಂದು ಈ ಲೇಖನದಲ್ಲಿ ಹೇಳಿದೆ.
೨. ಗಡಿಯಲ್ಲಿ ಭಾರತ ಮತ್ತು ಚೀನಾ ನಡುವಿನ ಉದ್ವಿಗ್ನತೆ ಗಂಭೀರವಾಗಿಲ್ಲ ಮತ್ತು ಎರಡೂ ದೇಶಗಳು ಇದರ ಬಗ್ಗೆ ಚರ್ಚಿಸುತ್ತಿವೆ; ಆದರೆ ಕೆಲವು ಭಾರತೀಯ ಮಾಧ್ಯಮಗಳು ಮತ್ತು ಕೆಲವು ಭಾರತೀಯರು ಚೀನಾವನ್ನು ಕಳಂಕಿತಗೊಳಿಸಲು ಪ್ರಯತ್ನಿಸುತ್ತಿದ್ದಾರೆ, ಎಂದು ಲೇಖನದಲ್ಲಿ ತಿಳಿಸಿದೆ. (ಹೀಗೆ ಹೇಳುವುದರ ಮೂಲಕ ಚೀನಾ ಗಡಿ ವಿವಾದಕ್ಕೆ ಮಂದಗೊಳಿಸುವ ಪ್ರಯತ್ನ ಮಾಡುತ್ತಿದೆ ಹಾಗೂ ಇನ್ನೊಂದು ಕಡೆ ಯುದ್ಧಾಭ್ಯಾಸ ಮಾಡಿ, ಗಡಿಯಲ್ಲಿ ದೊಡ್ಡಪ್ರಮಾಣದಲ್ಲಿ ಸೈನ್ಯವನ್ನು ನೇಮಿಸಿ ಯುದ್ಧದ ಸಿದ್ಧತೆಯನ್ನು ಮಾಡುತ್ತಿದೆ, ಇದು ತಿಳಿಯದಷ್ಟು ಭಾರತ ಮೂರ್ಖವಲ್ಲ ! – ಸಂಪಾದಕರು).
೩. ಈ ಹಿಂದೆ ‘ಗ್ಲೋಬಲ್ ಟೈಮ್’ ಒಂದು ಟ್ವೀಟ್‌ಅನ್ನು ಮಾಡಿತ್ತು. ಅದರಲ್ಲಿ ಅದು, ಭಾರತದಲ್ಲಿ, ರಣತಂತ್ರವನ್ನು ರೂಪಿಸುವ ಮತ್ತು ಧೋರಣೆಯನ್ನು ನಿರ್ಧರಿಸುವ ಅಧಿಕಾರವನ್ನು ಒಂದು ಸಣ್ಣ ಸಮೂಹದ ಕಡೆ ಇದೆ. ಆ ಗುಂಪು ಚೀನಾ ವಿರೋಧದ ನಕಾರಾತ್ಮಕ ವಿಚಾರಗಳಿಂದ ತುಂಬಿದೆ. ಚೀನಾದ ಪ್ರಗತಿ, ಅದೇರೀತಿ ಬೀಜಿಂಗ್ ಮತ್ತು ನವದೆಹಲಿ ನಡುವಿನ ಬಿರುಕು ಹೆಚ್ಚಾಗುತ್ತಿರುವುದರಿಂದ ಚೀನಾದ ಬಗ್ಗೆ ಭಾರತದ ಭ್ರಮೆ ಹೆಚ್ಚುತ್ತಿದೆ, ಎಂದಿದೆ.