‘ಚೀನಾದ ವಸ್ತುಗಳನ್ನು ನಿಷೇಧಿಸಲು’ ಅಂತರರಾಷ್ಟ್ರೀಯ ಆಂದೋಲನಕ್ಕೆ ಭಾರತ ಸಹಿತ ಜಗತ್ತಿನ ೧೪ ದೇಶಗಳಲ್ಲಿನ ೧೪೦ ಮುಖ್ಯ ನಗರಗಳಲ್ಲಿ ಉತ್ಸಾಹದಿಂದ ಸಹಭಾಗ !

ಮೊದಲು ಕೊರೋನಾ ವಿಷಾಣು ಹಾಗೂ ಈಗ ಲಡಾಖನಲ್ಲಿ ಭಾರತೀಯ ೨೦ ಸೈನಿಕರ ಹುತಾತ್ಮಕ್ಕೆ ಕಾರಣವಾದ ಕಪಟಿ ಚೀನಾ ಡ್ರೆಗಾನ್‌ಗೆ ಪಾಠ ಕಲಿಸಲು ಸನಾತನ ಸಂಸ್ಥೆ, ಹಿಂದೂ ಜನಜಾಗೃತಿ ಸಮಿತಿ ಹಾಗೂ ಇತರ ಹಿಂದುತ್ವನಿಷ್ಠ ಸಂಘಟನೆಗಳು ಜಂಟಿಯಾಗಿ ಇಂದು ಅಂತರರಾಷ್ಟ್ರೀಯ ಮಟ್ಟದಲ್ಲಿ ಸಾಂಕೇತಿಕ ಆಂದೋಲನ ಮಾಡಲಾಯಿತು.

ನದಿದಡದಲ್ಲಿ ಮರಳು ತೆಗೆಯುತ್ತಿರುವಾಗ ಪ್ರಾಚೀನ ಶಿವ ಮಂದಿರ ಪತ್ತೆ !

ಜೂನ್ ೧೬ ರಂದು ಇಲ್ಲಿಯ ಪೆರುಮಲಾಪಾಡು ಗ್ರಾಮದ ಹತ್ತಿರದ ಪೆನ್ನಾ ನದಿಯ ದಡದಲ್ಲಿ ಮರಳನ್ನು ತೆಗೆಯುತ್ತಿರುವಾಗ ಪ್ರಾಚೀನ ಶಿವ ಮಂದಿರ ಪತ್ತೆಯಾಗಿದೆ. ಮರಳು ತೆಗೆಯುತ್ತಿರುವಾಗ ಆರಂಭದಲ್ಲಿ ಒಂದು ಕಟ್ಟಡ ಸಿಕ್ಕಿತು. ಇನ್ನಷ್ಟು ಮರಳನ್ನು ತೆಗೆದ ನಂತರ ದೇವಸ್ಥಾನ ಕಾಣಿಸಿತು. ನಂತರ ಅದು ಐತಿಹಾಸಿಕ ಶಿವಮಂದಿರ ಇದೆ ಎಂದು ಹೇಳಲಾಗುತ್ತಿದೆ.

ಹಿಂದೂ ಧರ್ಮ ತೊರೆದು ಕ್ರೈಸ್ತರಾದವರಿಗೆ ಕೇರಳ ಸರಕಾರ ೫ ಕೋಟಿ ರೂಪಾಯಿ ಸಹಾಯ !

ಕೇರಳ ರಾಜ್ಯದ ಹಿಂದುಳಿದ ವರ್ಗದ ಅಭಿವೃದ್ಧಿ ನಿಗಮವು ಹಿಂದೂ ಧರ್ಮದ ಪರಿಶಿಷ್ಟಜಾತಿಯಿಂದ ಕ್ರೈಸ್ತರಾಗಿ ಮತಾಂತರವಾದವರಿಗೆ ೨೦೨೦-೨೦೨೧ ವರ್ಷಕ್ಕೆ ೫ ಕೋಟಿ ರೂಪಾಯಿ ಖರ್ಚು ಮಾಡುವ ನಿಯಮವನ್ನು ಮಾಡಿದೆ, ಈ ಆಶಯದ ಆದೇಶವನ್ನು ಮುಖ್ಯ ಕಾರ್ಯದರ್ಶಿ ವಿಶ್ವನಾಥ ಸಿನ್ಹಾ ಇವರು ಹಿಂದುಳಿದ ವರ್ಗದ ಅಭಿವೃದ್ಧಿ ನಿಗಮದ ಅಧ್ಯಕ್ಷ ಹಾಗೂ ಕಾರ್ಯನಿರ್ವಾಹಕರ ಸೂಚನೆಗನುಸಾರ ಜಾರಿಗೆ ತಂದಿದೆ.

ಸಲ್ಮಾನ ಖಾನ್, ಕರಣ ಜೋಹರ ಸಹಿತ ೮ ಜನರ ವಿರುದ್ಧ ನ್ಯಾಯಾಲಯದಲ್ಲಿ ದೂರು ದಾಖಲು

ಹಿಂದಿ ಚಲನಚಿತ್ರ ಸೃಷ್ಟಿಯ ನಾಯಕನಟ ಸುಶಾಂತ ಸಿಂಗ ರಾಜಪೂತ್ ಇವರ ಆತ್ಮಹತ್ಯೆಯ ಪ್ರಕರಣದಲ್ಲಿ ಬಿಹಾರದ ಮುಝಫ್ಫರಪುರದಲ್ಲಿಯ ನ್ಯಾಯವಾದಿ ಸುಧೀರ ಕುಮಾರ್ ಓಝಾರವರು ನ್ಯಾಯಾಲಯದಲ್ಲಿ ನಿರ್ದೇಶಕ ಕರಣ ಜೋಹರ, ಸಂಜಯ ಲೀಲಾ ಭನ್ಸಾಲಿ, ಎಕ್ತಾ ಕಪೂರ್ ಹಾಗೂ ನಟ ಸಲ್ಮಾನ ಖಾನ್ ಸಹಿತ ೮ ಜನರ ವಿರುದ್ಧ ದೂರನ್ನು ದಾಖಲಿಸಿದ್ದಾರೆ.

‘#TeachLessonToChina’ಈ ಹ್ಯಾಷ್ ಟ್ಯಾಗ್ ರಾಷ್ಟ್ರೀಯ ಟ್ರೆಂಡ್‌ನಲ್ಲಿ ಮೊದಲನೇ ಸ್ಥಾನದಲ್ಲಿದ್ದರೆ ಜಾಗತಿಕ ಟ್ರೆಂಡ್ ನಲ್ಲಿ ೭ ನೇ ಸ್ಥಾನದಲ್ಲಿ !

ಚೀನಾ ಹಾಗೂ ಭಾರತದ ಸೈನಿಕರ ನಡುವೆ ಆಗಿದ್ದ ಕಾಳಗದಲ್ಲಿ ಭಾರತದ ಒಬ್ಬ ಕರ್ನಲ್ ಸಹಿತ ೨೦ ಸೈನಿಕರು ಹುತಾತ್ಮರಾದರು. ಇದಾದ ನಂತರ ದೇಶವ್ಯಾಪಿ ಆಕ್ರೋಶ ವ್ಯಕ್ತವಾಗುತ್ತಿರುವಾಗ ಟ್ವಿಟರ್‌ನಿಂದಲೂ ವಿರೋಧ ವ್ಯಕ್ತವಾಗಿದೆ. ಜೂನ್ ೧೬ ರಂದು ಬೆಳಿಗ್ಗೆ ರಾಷ್ಟ್ರಪ್ರೇಮಿಗಳಿಂದ ‘#TeachLessonToChina’ ಈ ಹ್ಯಾಷ್‌ಟ್ಯಾಗ್‌ನ ಟ್ರೆಂಡ್ ಆರಂಭಿಸಲಾಯಿತು.

ಚೀನಾದ ಕಪಟ ಯುದ್ಧತಂತ್ರಕ್ಕೆ ಚಾಣಕ್ಯನೀತಿಯಿಂದ ಉತ್ತರಿಸಬೇಕು! – ಹಿಂದೂ ಜನಜಾಗೃತಿ ಸಮಿತಿ

ಲಡಾಖ್‌ನ ಗಾಲ್ವಾನ್ ಕಣಿವೆಯಲ್ಲಿ ಚೀನಾ ಮತ್ತು ಭಾರತ ನಡುವೆ ನಡೆದ ಘರ್ಷಣೆಯಲ್ಲಿ ಓರ್ವ ಭಾರತೀಯ ಕರ್ನಲ್ ಮತ್ತು ಇಬ್ಬರು ಸೈನಿಕರು ಹುತಾತ್ಮರಾಗಿದ್ದಾರೆ. ಹಿಂದೂ ಜನಜಾಗೃತಿ ಸಮಿತಿಯು ಚೀನಾದ ಈ ಕುಕೃತ್ಯವನ್ನು ತೀವ್ರವಾಗಿ ಖಂಡಿಸುತ್ತದೆ. ಕೇಂದ್ರ ಸರಕಾರವು ದೇಶದ ಗಡಿಗಳನ್ನು ಭದ್ರಪಡಿಸಲು ಚಾಣಕ್ಯನೀತಿ ಮತ್ತು ಗೆರಿಲ್ಲಾಯುದ್ಧತಂತ್ರದ ಮೂಲಕ ಚೀನಾಗೆ ಕಠೋರವಾದ ಪ್ರತ್ಯುತ್ತರ ನೀಡಬೇಕು

ದೇಶದಲ್ಲಿ ಕೊರೋನಾ ಪೀಡಿತ ರೋಗಿಗಳ ಗುಣಮುಖರಾಗುವ ಪ್ರಮಾಣ ಶೇ. ೫೦ ರಷ್ಟು ! – ಪ್ರಧಾನಮಂತ್ರಿ ನರೇಂದ್ರ ಮೋದಿ

ಭಾರತದಲ್ಲಿ ಕೊರೋನಾ ಪೀಡಿತ ರೋಗಿಗಳ ಗುಣಮುಖರಾಗುವ ಪ್ರಮಾಣ ಶೇ. ೫೦ ರಷ್ಟಿದೆ, ಎಂಬ ಮಾಹಿತಿಯನ್ನು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಮುಖ್ಯಮಂತ್ರಿಗಳೊಂದಿಗೆ ‘ವಿಡಿಯೋ ಕಾನ್ಫರೆನ್ಸ್’ ಮೂಲಕ ಮಾತನಾಡುತ್ತಿರುವಾಗ ನೀಡಿದರು. ‘ಕೊರೋನಾದಿಂದಾಗಿ ಯಾರೆಲ್ಲ ಮೃತಪಟ್ಟಿದ್ದಾರೆ, ಅದು ಖೇದಕರವಾಗಿದೆ’, ಎಂದೂ ಅವರು ಹೇಳಿದ್ದಾರೆ.

ಪಾಕಿಸ್ತಾನದಲ್ಲಿ ಭಾರತೀಯ ರಾಯಭಾರಿ ಕಚೇರಿಯ ಇಬ್ಬರು ಅಧಿಕಾರಿಗಳು ನಾಪತ್ತೆ

ಇಲ್ಲಿ ಜೂನ್ ೧೫ ರಂದು ಭಾರತೀಯ ರಾಯಭಾರಿ ಕಛೇರಿಯ ಇಬ್ಬರು ಸಿಬ್ಬಂದಿಗಳನ್ನು ಪಾಕ್‌ನ ಪೊಲೀಸರು ಒಂದು ಸುಳ್ಳು ಆರೋಪದಡಿಯಲ್ಲಿ ಬಂಧಿಸಿದ್ದರು. ಭಾರತೀಯ ವಿದೇಶಾಂಗ ಸಚಿವಾಲಯದಿಂದ ಬಂದ ಒತ್ತಡದಿಂದಾಗಿ ಈ ಸಿಬ್ಬಂದಿಗಳನ್ನು ತಡರಾತ್ರಿ ಪುನಃ ರಾಯಭಾರಿ ಕಛೇರಿಗೆ ಕರೆತಂದರು; ಆದರೆ ಇಡೀ ದಿನ ಈ ಸಿಬ್ಬಂದಿಯನ್ನು ವಿಚಾರಣೆಯ ನೆಪದಲ್ಲಿ ತೀವ್ರವಾಗಿ ಚಿತ್ರಹಿಂಸೆಯನ್ನು ನೀಡಿದರು.

ಶೋಪಿಯಾಂ ನಲ್ಲಿ ಮೂವರು ಭಯೋತ್ಪಾದಕರ ಹತ್ಯೆ

ಇಲ್ಲಿಯ ತುರ್ಕವಾನಗಾಮ ಪ್ರದೇಶದಲ್ಲಿ ಜೂನ್ ೧೬ ರಂದು ಬೆಳಗಿನ ಜಾವ ೫ ಗಂಟೆಗೆ ೪೪ ರಾಷ್ಟ್ರೀಯ ರೈಫಲ್ಸ್ ಸೈನಿಕರು ಹಾಗೂ ಭಯೋತ್ಪಾದಕರಲ್ಲಿ ನಡೆದ ಗುಂಡಿನ ಚಕಮಕಿಯಲ್ಲಿ ೩ ಭಯೋತ್ಪಾದಕರ ಹತ್ಯೆ ಮಾಡಲಾಯಿತು. ಹತ್ಯೆಯಾದವರಲ್ಲಿ ಜುಬೈದ್ ಅಹಮದ್ ವಾನಿ ಅಲೀಯಾಸ್ ರಹಮಾನ, ಮುನಿಬುಲ್ ಹಕ್ ಹಾಗೂ ಕಾಮರಾನ ಜಹೂರ್ ಮನ್ಹಾಸ್ ಇವರ ಸಮಾವೇಶ ಇದೆ.

ದೆಹಲಿ-ಮಿರತ್ ರೈಲು ಮಾರ್ಗದ ಗುತ್ತಿಗೆಯನ್ನು ಚೀನಾ ಮೂಲದ ಸಂಸ್ಥೆಗೆ ನೀಡಲು ಸ್ವದೇಶಿ ಜಾಗರಣ ಮಂಚ್‌ನಿಂದ ವಿರೋಧ

ಒಂದೆಡೆ ದೇಶದಲ್ಲಿ ಸ್ವದೇಶಿಯನ್ನು ಅವಲಂಬಿಸುವಂತೆ ಹೇಳಲಾಗುತ್ತಿದ್ದರೆ, ಇನ್ನೊಂದೆಡೆ ಕೇಂದ್ರ ಸರಕಾರದಿಂದ ನಿರ್ಮಾಣವಾಗುತ್ತಿರುವ ದೆಹಲಿ-ಮಿರತ್ ರೈಲು ಮಾರ್ಗದ ಗುತ್ತಿಗೆಯನ್ನು ಶಾಂಘೈ ಟನಲ್ ಇಂಜಿನಿಯರಿಂಗ್ ಕಂಪನಿ ಲಿಮಿಟೆಡ್ ಈ ಚೀನಾದ ಸಂಸ್ಥೆಗೆ ಹರಾಜಿನ ಮೂಲಕ ನೀಡಲಾಗಿದೆ. ಈ ಗುತ್ತಿಗೆಯು ಸುಮಾರು ೧ ಸಾವಿರದ ೨೦೦ ಕೋಟಿ ರೂಪಾಯಿಯದ್ದಾಗಿದೆ.