ಶೋಪಿಯಾಂ ನಲ್ಲಿ ಮೂವರು ಭಯೋತ್ಪಾದಕರ ಹತ್ಯೆ

ಶೊಪಿಯಾಂ (ಜಮ್ಮು-ಕಾಶ್ಮೀರ) – ಇಲ್ಲಿಯ ತುರ್ಕವಾನಗಾಮ ಪ್ರದೇಶದಲ್ಲಿ ಜೂನ್ ೧೬ ರಂದು ಬೆಳಗಿನ ಜಾವ ೫ ಗಂಟೆಗೆ ೪೪ ರಾಷ್ಟ್ರೀಯ ರೈಫಲ್ಸ್ ಸೈನಿಕರು ಹಾಗೂ ಭಯೋತ್ಪಾದಕರಲ್ಲಿ ನಡೆದ ಗುಂಡಿನ ಚಕಮಕಿಯಲ್ಲಿ ೩ ಭಯೋತ್ಪಾದಕರ ಹತ್ಯೆ ಮಾಡಲಾಯಿತು. ಹತ್ಯೆಯಾದವರಲ್ಲಿ ಜುಬೈದ್ ಅಹಮದ್ ವಾನಿ ಅಲೀಯಾಸ್ ರಹಮಾನ, ಮುನಿಬುಲ್ ಹಕ್ ಹಾಗೂ ಕಾಮರಾನ ಜಹೂರ್ ಮನ್ಹಾಸ್ ಇವರ ಸಮಾವೇಶ ಇದೆ. ಸದ್ಯ ಇಲ್ಲಿ ಶೋಧಕಾರ್ಯ ಮುಂದುವರಿದಿದೆ. ಕಾಶ್ಮೀರದಲ್ಲಿ ಈ ವರ್ಷ ಇಲ್ಲಿಯವರೆಗೆ ೧೦೯ ಭಯೋತ್ಪಾದಕರ ಹತ್ಯೆ ಮಾಡಲಾಗಿದೆ.