ಜಿಹಾದಿ ಭಯೋತ್ಪಾದಕರು ಕಾಶ್ಮೀರಿ ಹಿಂದೂ ಅಜಯ ಪಂಡಿತಾ ಅವರ ಹತ್ಯೆ ಮಾಡಿದ್ದರ ವಿರುದ್ಧ ವಿಶ್ವದಾದ್ಯಂತ ಪ್ರತಿಭಟನೆ

ಕಾಶ್ಮೀರಿ ಹಿಂದೂ ಆಗಿದ್ದ ಅಜಯ ಪಂಡಿತಾ ಅವರನ್ನು ಜಿಹಾದಿ ಉಗ್ರರು ಕ್ರೂರವಾಗಿ ಗುಂಡಿಕ್ಕಿ ಕೊಂದಿದ್ದಾರೆ. ಈ ಹತ್ಯೆಯ ವಿರುದ್ಧ ಜಗತ್ತಿನಾದ್ಯಂತ ಹಿಂದೂಗಳು ಪ್ರತಿಭಟನೆಯನ್ನು ನಡೆಸಿದರು ಮತ್ತು ಅಜಯ ಪಂಡಿತಾಗೆ ನ್ಯಾಯ ಸಿಗಬೇಕೆಂದು ಒತ್ತಾಯಿಸಿದರು. ಜಗತ್ತಿನ ೧೦೦ ನಗರಗಳಲ್ಲಿ ಪ್ರತಿಭಟನೆ ಆಯೋಜಿಸಲಾಗಿತ್ತು.

ಹಿಂದೂ ವಿಧಿಜ್ಞ ಪರಿಷತ್ತು ಆಯೋಜಿಸಿದ ೩ ದಿನಗಳ ‘ಆನ್‌ಲೈನ್’ ರಾಷ್ಟ್ರೀಯ ನ್ಯಾಯವಾದಿ ಅಧಿವೇಶನ’ ಪ್ರಾರಂಭ !

ಒಂದು ಮೊಕದ್ದಮೆಯನ್ನು ೧೦ ನಿಮಿಷಗಳಲ್ಲಿ ಪೂರ್ಣಗೊಳಿಸಬಹುದಾದರೂ, ಅದು ಪೂರ್ಣಗೊಳ್ಳಲು ೧೦-೧೦ ದಿನಗಳನ್ನು ತೆಗೆದುಕೊಳ್ಳಲಾಗುತ್ತದೆ. ಮತ್ತೊಂದೆಡೆ ನಿಜವಾಗಿಯೂ ಸಮಯ ನೀಡಬೇಕಾದ ಪ್ರಕರಣಗಳನ್ನು ೨ ನಿಮಿಷಗಳಲ್ಲಿ ಇತ್ಯರ್ಥಪಡಿಸಲಾಗುತ್ತದೆ. ನನ್ನ ೩೩ ವರ್ಷಗಳ ಅನುಭವದಿಂದ ನಮ್ಮ ನ್ಯಾಯ ವ್ಯವಸ್ಥೆಯನ್ನು ಸುಧಾರಿಸುವ ಅವಶ್ಯಕತೆಯಿದೆ ಎಂಬುದು ಗಮನಕ್ಕೆ ಬಂದಿದೆ.

ಬಾಂಗ್ಲಾದೇಶದಲ್ಲಿ ಹಿಂದೂಗಳ ವಂಶವಿಚ್ಛೇದಕ್ಕೆ ಸಂಚು ! – ವಿಶ್ವ ಹಿಂದೂ ಮಹಾಸಂಘ

ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲಿನ ದೌರ್ಜನ್ಯ ಸತತವಾಗಿ ಹೆಚ್ಚಾಗುತ್ತಿದೆ. ಬಾಂಗ್ಲಾದೇಶದಲ್ಲಿ ಮಾನವಹಕ್ಕುಗಳ ಸ್ಥಿತಿ ದಿನದಿಂದ ದಿನಕ್ಕೆ ಹದಗೆಡುತ್ತಿದೆ. ಅಲ್ಲಿನ ಅಲ್ಪಸಂಖ್ಯಾತ ಹಿಂದೂಗಳಿಗೆ ನ್ಯಾಯ ಸಿಗುವುದು ಅಸಾಧ್ಯವಾಗಿದೆ. ಹಿಂದೂಗಳ ಮೇಲೆ ಹಲ್ಲೆ ಮಾಡುವ ಮತಾಂಧ ಅಪರಾಧಿಗಳನ್ನು ಸಹ ಬಂಧಿಸಲಾಗುತ್ತಿಲ್ಲ.

ಮಥುರಾದಲ್ಲಿ ೨೦೦೦ ವರ್ಷಗಳಷ್ಟು ಹಳೆಯದಾದ ಅಗ್ನಿದೇವತೆಯ ವಿಗ್ರಹ ಪತ್ತೆ

ಇಲ್ಲಿಯ ಡಿಗ ಗೇಟ್ ಪ್ರದೇಶದಲ್ಲಿ ನೀರು ಸರಬರಾಜು ಇಲಾಖೆಯಿಂದ ಚರಂಡಿಗಾಗಿ ಭೂಮಿಯನ್ನು ಅಗೆಯುವಾಗ ೨೦೦೦ ವರ್ಷಗಳಷ್ಟು ಹಳೆಯ ಅಗ್ನಿದೇವತೆಯ ವಿಗ್ರಹ ಪತ್ತೆಯಾಗಿದೆ; ಆದರೆ ಪುರಾತತ್ವ ಇಲಾಖೆ ಅದನ್ನು ವಶಕ್ಕೆ ತೆಗೆದುಕೊಳ್ಳಲು ನಿರಾಕರಿಸಿದ್ದರಿಂದ ಅದನ್ನು ವಸ್ತುಸಂಗ್ರಹಾಲಯಕ್ಕೆ ಹಸ್ತಾಂತರಿಸಲಾಗುವುದು.

ಲಷ್ಕರ್-ಎ-ತೋಯಬಾ ಮತ್ತು ಹಿಜಬುಲ್ ಮುಜಾಹಿದ್ದೀನ್ ಸ್ವಾತಂತ್ರ್ಯ ದಿನದಂದು ಆತ್ಮಾಹುತಿ ದಾಳಿಗೆ ನಡೆಸಿದ್ದರು ಸಿದ್ಧತೆ

ಪಠಾಣಕೋಟನಿಂದ ಬಂಧಿಸಲ್ಪಟ್ಟ ಲಷ್ಕರ್-ಎ-ತೋಯಬಾದ ಅಮೀರ್ ಹುಸೇನ್ ವಾನಿ ಮತ್ತು ವಾಸಿಮ ಹಸನ್ ವಾನಿಯ ವಿಚಾರಣೆ ನಡೆಸುತ್ತಿದ್ದಾರೆ. ಅವರು ನೀಡಿದ ಮಾಹಿತಿಯ ಪ್ರಕಾರ ಲಷ್ಕರ್-ಎ-ತೋಯಬಾ ಮತ್ತು ಹಿಜ್ಬುಲ್ ಮುಜಾಹಿದ್ದೀನ್ ಆಗಸ್ಟ್ ೧೫ ರಂದು ಆತ್ಮಾಹುತಿ ದಾಳಿ ನಡೆಸಲು ಸಿದ್ಧತೆ ನಡೆಸಿದ್ದಾರೆ.

‘ಪ್ಲೇಸಸ್ ಆಫ್ ವರ್ಶಿಪ್’ ಗೆ ವಿರೋಧಿಸುವ ಹಿಂದೂಗಳ ಅರ್ಜಿ ವಿರುದ್ಧ ‘ಜಮಿಯತ್ ಉಲೆಮಾ-ಎ-ಹಿಂದ್’ನಿಂದ ಅರ್ಜಿ ಸಲ್ಲಿಕೆ

ಕಾಶಿ ಮತ್ತು ಮಥುರಾ ದೇವಸ್ಥಾನ ಪ್ರಕರಣದಲ್ಲಿ ‘ಪ್ಲೇಸಸ್ ಆಫ್ ವರ್ಶಿಪ್’ನ ೧೯೯೧ ರ ಕಾಯ್ದೆಯ ವಿರುದ್ಧ ‘ವಿಶ್ವ ಭದ್ರ ಪುರೋಹಿತ ಮಹಾಸಂಘ’ವು ಸಲ್ಲಿಸಿದ್ದ ಅರ್ಜಿಯ ವಿರುದ್ಧ ‘ಜಮಿಯತ್ ಉಲೆಮಾ-ಎ-ಹಿಂದ್’ ಸರ್ವೋಚ್ಚ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದೆ. ‘ಜಮಿಯತ್’ ತನ್ನ ಅರ್ಜಿಯಲ್ಲಿ, ‘ನ್ಯಾಯಾಲಯವು ಮಹಾಸಂಘದ ಅರ್ಜಿಯಿಂದ ನೋಟಿಸ್ ನೀಡಬಾರದು. ಈ ಪ್ರಕರಣದಿಂದ ದೇಶದ ಜಾತ್ಯತೀತಕ್ಕೆ ಧಕ್ಕೆಯಾಗಬಹುದು’ ಎಂದು ಹೇಳಿದೆ.

ಭಾರತೀಯ ಸಮಾಜದ ಭಾವನೆಗಳನ್ನು ನೋಯಿಸುವ ಟಿ.ವಿ. ಧಾರಾವಾಹಿಗಳನ್ನು ನಿಯಂತ್ರಿಸಲು ಕಠಿಣ ಕಾನೂನುಗಳನ್ನು ರೂಪಿಸಿ ! – ಸಂಸ್ಕಾರ ಭಾರತಿ

ರಾಷ್ಟ್ರೀಯ ಸ್ವಯಂಸೇವಕ ಸಂಘದ ಅಂಗಸಂಸ್ಥೆಯಾದ ‘ಸಂಸ್ಕೃತ ಭಾರತಿ’ಯ ಅಖಿಲ ಭಾರತ ಪ್ರತಿನಿಧಿ ಕಾರ್ಯನಿರ್ವಾಹಕ ಸಭೆಯು ದೂರದರ್ಶನದಲ್ಲಿನ ಧಾರಾವಾಹಿಯಿಂದ ದ್ವೇಷಪೂರಿತ ಹಿಂಸಾಚಾರ, ಲೈಂಗಿಕತೆ, ನಗ್ನತೆ ಮತ್ತು ಭಾರತೀಯ ಸೈನಿಕರ ಬಗ್ಗೆ ಅವಮಾನಕರ ‘ವಿಡಿಯೋ’ ಮಾಲಿಕೆ (ವೆಬ್ ಸಿರಿಸ್)ಗಳನ್ನು ಪ್ರಸಾರ ಮಾಡುವ ಬಗ್ಗೆ ತೀವ್ರವಾಗಿ ಖಂಡಿಸಿದೆ.

ಪೂಂಚ್ (ಜಮ್ಮು-ಕಾಶ್ಮೀರ) ದಲ್ಲಿ ಪಾಕಿಸ್ತಾನದ ಗುಂಡಿನ ದಾಳಿಯಲ್ಲಿ ಒಬ್ಬ ಸೈನಿಕ ಹುತಾತ್ಮ

ಪೂಂಚ್‌ನ ಕಿರ್ಣಿ ಸೆಕ್ಟರ್‌ನ ಶಾಹಪುರ್ ಬಳಿ ಪಾಕ್ ಸೈನಿಕರು ಕದನವಿರಾಮ ಉಲ್ಲಂಘಿಸುತ್ತ ಮಾಡಿದ ಗುಂಡಿನ ದಾಳಿಯಲ್ಲಿ ಓರ್ವ ಸೈನಿಕ ಹುತಾತ್ಮರಾದರೆ ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಗುಂಡಿನ ದಾಳಿ ಮತ್ತು ಮೊರ್ಟಾರನ್ನು ಉಪಯೋಗಿಸುತ್ತ ಪಾಕಿಸ್ತಾನವು ಭಾರತೀಯ ಸೈನಿಕರ ಚೌಕಿಗಳನ್ನು ನಾಶ ಮಾಡಲು ಪ್ರಯತ್ನಿಸಿತು;

ಗುವಾಹಟಿ (ಅಸ್ಸಾಂ) ನಲ್ಲಿ ಕ್ಷುಲ್ಲಕ ಕಾರಣದಿಂದಾಗಿ ಮತಾಂಧರಿಂದ ಹಿಂದೂ ಯುವಕನ ಕತ್ತು ಸೀಳಿ ಹತ್ಯೆ

ಗುವಾಹಟಿ (ಅಸ್ಸಾಂ) ಯಲ್ಲಿ ಹಿಂದೂ ಯುವಕ ರಿತುಪರ್ಣ ಪೆಗು ಎಂಬವರ ಕತ್ತು ಸೀಳಿ ಹತ್ಯೆ ಮಾಡಿದ ಪ್ರಕರಣದಲ್ಲಿ ಪೊಲೀಸರು ದುಲಾಲ್ ಅಲಿ, ಇಬ್ರಾಹಿಂ ಅಲಿ, ಇಬ್ರಾಹಿಂ ಇವನ ತಾಯಿ ಮನೋವರ್ ಖಾತುನ್, ಹುಸೇನ್ ಅಲಿ ಮತ್ತು ಅರಮಾನ್ ಅಲಿ ಈ ಮತಾಂಧರನ್ನು ಬಂಧಿಸಿದ್ದಾರೆ. ಒಂದು ಖುರ್ಚಿಯ ಮೇಲಿನ ವಾಗ್ವಾದದಿಂದಾಗಿ ಈ ಕೊಲೆ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ‘ಶಿವಾಜಿ ರಾಜ್ಯಾಭಿಷೇಕ ದಿನದ ನಿಮಿತ್ತ ‘ಆನ್‌ಲೈನ್ದಲ್ಲಿ ವಿಶೇಷ ಸಂವಾದ !

ವೈಯಕ್ತಿಕ ಜೀವನದಲ್ಲಿ ಛತ್ರಪತಿ ಶಿವಾಜಿ ಮಹಾರಾಜರು ಧರ್ಮಪಾರಾಯಣ ರಾಗಿದ್ದರು, ಅದೇರೀತಿ ಅವರ ರಾಜ ಧರ್ಮವು ಸನಾತನ ಹಿಂದೂ ಧರ್ಮದ ಮೌಲ್ಯಗಳನ್ನು ಆಧರಿಸಿಯೇ ಇತ್ತು. ಅವರು ‘ಸೆಕ್ಯುಲರ್‌ವಾದಿ ಅಲ್ಲ, ಬದಲಾಗಿ ಹಿಂದೂ ಧರ್ಮರಕ್ಷಕರಾಗಿದ್ದರು. ಶಿವಾಜಿ ಮಹಾರಾಜರ ರಾಜ್ಯಾಭಿಷೇಕ ಸಮಾರಂಭವನ್ನು ವೈದಿಕ ಪದ್ದತಿಯಿಂದ ಮಾಡಲಾಯಿತು.