ಒಂದೆಡೆ ಸ್ವಾವಲಂಬಿಯಾಗಲು ಭಾರತವು ಪ್ರಯತ್ನಿಸುತ್ತಿರುವಾಗ, ಇನ್ನೊಂದೆಡೆ ಸರಕಾರಿ ಗುತ್ತಿಗೆಯನ್ನು ವಿದೇಶಿ ಅದರಲ್ಲೂ ಶತ್ರುರಾಷ್ಟ್ರವಾಗಿರುವ ಚೀನಾದ ಸಂಸ್ಥೆಗೆ ಸಿಗುವುದು ನಾಚಿಕೆಯ ವಿಷಯವಾಗಿದೆ !
ನವ ದೆಹಲಿ : ಒಂದೆಡೆ ದೇಶದಲ್ಲಿ ಸ್ವದೇಶಿಯನ್ನು ಅವಲಂಬಿಸುವಂತೆ ಹೇಳಲಾಗುತ್ತಿದ್ದರೆ, ಇನ್ನೊಂದೆಡೆ ಕೇಂದ್ರ ಸರಕಾರದಿಂದ ನಿರ್ಮಾಣವಾಗುತ್ತಿರುವ ದೆಹಲಿ-ಮಿರತ್ ರೈಲು ಮಾರ್ಗದ ಗುತ್ತಿಗೆಯನ್ನು ಶಾಂಘೈ ಟನಲ್ ಇಂಜಿನಿಯರಿಂಗ್ ಕಂಪನಿ ಲಿಮಿಟೆಡ್ ಈ ಚೀನಾದ ಸಂಸ್ಥೆಗೆ ಹರಾಜಿನ ಮೂಲಕ ನೀಡಲಾಗಿದೆ. ಈ ಗುತ್ತಿಗೆಯು ಸುಮಾರು ೧ ಸಾವಿರದ ೨೦೦ ಕೋಟಿ ರೂಪಾಯಿಯದ್ದಾಗಿದೆ. ಈ ಗುತ್ತಿಗೆಯ ಬಗ್ಗೆ ಕಾಂಗ್ರೆಸ್ ಪಕ್ಷವು ಸರಕಾರವನ್ನು ಟೀಕಿಸಿದರೆ, ರಾ.ಸ್ವ.ಸಂಘಕ್ಕೆ ಸಂಬಂಧಿಸಿದ ಸ್ವದೇಶಿ ಜಾಗರಣ ಮಂಚ್ ಈ ಗುತ್ತಿಗೆಯನ್ನು ಕೂಡಲೇ ರದ್ದು ಪಡಿಸಬೇಕು ಎಂದು ಒತ್ತಾಯಿಸಿದೆ.