ಕರ್ನಾಟಕದಲ್ಲಿ ಕ್ಷುಲ್ಲಕ ಕಾರಣದಿಂದ ಮತಾಂಧರಿಂದ ಜ್ಯೋತಿಷಿಯ ಹತ್ಯೆ

  • ಕರ್ನಾಟಕದಲ್ಲಿ ಭಾಜಪದ ಸರಕಾರ ಇರುವಾಗ ಇಂತಹ ಘಟನೆಗಳು ಸಂಭವಿಸುವುದು ಹಿಂದೂಗಳಿಗೆ ಅಪೇಕ್ಷಿತವಿಲ್ಲ !

  • ಒಂದುವೇಳೆ ಹಂತಕನು ಹಿಂದೂ ಆಗಿದ್ದು ಹಾಗೂ ಸಾವನ್ನಪ್ಪಿದವ ಅಲ್ಪಸಂಖ್ಯಾತ ಸಮಾಜದವನಾಗಿದ್ದರೆ, ಇದನ್ನು ಆಕಾಶ ಪಾತಾಳ ಒಂದು ಮಾಡಿ ಸಂಪೂರ್ಣ ಹಿಂದೂ ಸಮಾಜವನ್ನೇ ‘ಅಸಹಿಷ್ಣು’ ಎಂದು ನಿರ್ಧರಿಸಿಬಿಡುತ್ತಿದ್ದರು, ಭಾರತಾದ್ಯಂತ ‘ಇನ್ಟಾಲರನ್ಸ್ ಮೆರವಣಿಗೆ’ ತೆಗೆಯಲಾಗುತ್ತಿತ್ತು, ಅದೇರೀತಿ ಪಾಶ್ಯಾತ್ಯ ದೇಶದಂತೆ ವಾರ್ತಾಪತ್ರಿಕೆಗಳಲ್ಲಿ ಹಿಂದೂಗಳ ವಿರುದ್ಧ ಪುಟಗಟ್ಟಲೆ ಬರೆಯಲಾಗುತ್ತಿತ್ತು.

ಬೆಂಗಳೂರು – ಕಲಬುರ್ಗಿ ಜಿಲ್ಲೆಯ ಹಲಕರ್ಟಿ ಗ್ರಾಮದ ಅಂಬಿಗರ ಚೌಡಯ್ಯ ವೃತ್ತದಲ್ಲಿರುವ ಹೋಟೆಲಿನಲ್ಲಿ ನವೆಂಬರ ೬ ರಂದು ಮಧ್ಯಾಹ್ನ ಜ್ಯೋತಿಷಿ ಸುರೇಶ ಇವರು ಭಜ್ಜಿ ತಿನ್ನುತ್ತಿದ್ದರು. ಅಲ್ಲಿಗೆ ಬಂದಿದ್ದ ಜನರು ಅವರ ಭಜ್ಜಿಯ ತಟ್ಟೆಗೆ ಕೈ ಹಾಕಿದರು ಇದರಿಂದ ವಾದ ಉಂಟಾಗಿ. ಅಲ್ಲಿಂದ ಸುರೇಶ ಇವರನ್ನು ಹೊಟೆಲ್ ನಿಂದ ಹೊರಗೆ ತಂದು ಅವರ ಮೇಲೆ ಹಿಗ್ಗಾಮುಗ್ಗಾ ಹಲ್ಲೆ ಮಾಡಿದರು. ಅದರಲ್ಲಿ ಸುರೇಶ ಇವರು ಸ್ಥಳದಲ್ಲೇ ಪ್ರಾಣಬಿಟ್ಟರು. ಆರೋಪಿಗಳಾದ ಸಯ್ಯದ ಮಿಶಾ ಪಟೇಲ್, ಸಯ್ಯದ ಅಜರ ಇಕ್ಬಾಲ್ ಪಟೇಲ್, ಸಯ್ಯದ ಮಜರ ಇಕ್ಬಾಲ್ ಪಟೇಲ್, ಮಹಮ್ಮದ ಸೊಹೈಲ್ ಹುಸೇನ ಸಾಬ ನದಾಫ್, ಮಹಮ್ಮದ ಮುಸ್ತಫಾ ಹಾಜಿ ಭಾಯಿ ಬಾಗವಾನ, ಮಹಮ್ಮದ ಜುಬೆರ್ ಮೊಹಿದ್ದೀನ್ ಸಾಬ ಬಾಗವಾನ, ಮಡೆಬ್ ಅಲಿ ಹಾಜಿಸಾಬ್ ಖುರೇಷಿ ಹಾಗೂ ಮಹಮ್ಮದ ಶಾಹರೂಖ ಲಾಲ ತಾಳಿಕೋಟಿಯವರನ್ನು ಬಂಧಿಸಿದ್ದಾರೆ. ಅದರಲ್ಲಿ ಓರ್ವ ಆರೋಪಿ ಅಂಗವಿಕಲನಾಗಿದ್ದಾನೆ.