ದೇಶದ ಕಟ್ಟರವಾದಿಗಳ ಮೇಲೆ ನಿಗಾ ಇಟ್ಟು ಅವರ ವಿಚಾರಸರಣಿಯಲ್ಲಿ ಬದಲಾವಣೆ ಮಾಡಲು ಕೇಂದ್ರ ಸರಕಾರದಿಂದ ಭದ್ರತಾ ಪಡೆಗಳಿಗೆ ಆದೇಶ

ಜಿಹಾದ್‌ಗಾಗಿ ಸಾಯಲು ಸಿದ್ಧರಾಗಿರುವವರಿಗೆ ಉಪದೇಶವನ್ನು ನೀಡಿ ಮುಖ್ಯ ವಿಚಾರಸರಣಿಗೆ ತರಲು ಪ್ರಯತ್ನಿಸುವುದು ಹಾಸ್ಯಾಸ್ಪದವಾಗಿದೆ ! ಜಗತ್ತಿನಲ್ಲಿ ಇಂತಹ ಪ್ರಯೋಗದ ವಿಚಾರ ಸಹ ಯಾರೂ ಮಾಡಿಲ್ಲ; ಏಕೆಂದರೆ ಅದು ಯಶಸ್ವಿಯಾಗಲು ಸಾಧ್ಯವೇ ಇಲ್ಲ ಎಂದು ಜಗತ್ತಿಗೆ ತಿಳಿದಿದೆ !

ನವ ದೆಹಲಿ – ಕೇಂದ್ರ ಸರಕಾರವು ದೇಶದ ಭದ್ರತಾ ಪಡೆಗಳಿಗೆ, ಇಸ್ಲಾಮಿಕ್ ಕಟ್ಟರವಾದಿ ಜನರನ್ನು ಹಾಗೂ ಅವರ ಸುತ್ತಮುತ್ತಲಿನವರನ್ನು ಗುರುತಿಸಲು ಪ್ರಾರಂಭಿಸಿರಿ. ಅದೇರೀತಿ ಅಂತಹವರಿಗೆ ತಿಳುವಳಿಕೆ ನೀಡಿ ಅವರಿಗೆ ಉಪದೇಶವನ್ನು ನೀಡಿ ಅವರನ್ನು ಮುಖ್ಯವಾಹಿನಿಗೆ ತರಲು ಪ್ರಯತ್ನಿಸಿ ಎಂದು ಆದೇಶ ನೀಡಿದೆ.


ಇಸ್ಲಾಮಿಕ್ ಬೋಧಕ ಡಾ. ಝಾಕಿರ್ ನಾಯಕ್ ಪಲಾಯನ ಗೈದು ಮಲೇಷ್ಯಾದಲ್ಲಿ ಆಶ್ರಯ ಪಡೆದಿದ್ದಾನೆ. ಆತ ತನ್ನ ವಿಚಾರಗಳಿಂದ ಮಲೇಷ್ಯಾದ ಮಾಜಿ ಪ್ರಧಾನಿ ಮಹಾತಿರ್ ಅವರ ಸರಕಾರವನ್ನು ಜಿಹಾದಿ ಮಾನಸಿಕತಾವಾದಿಯನ್ನಾಗಿಸಲು ಪ್ರಯತ್ನಿಸಿದರು. ಅದೇ ರೀತಿಯ ಪ್ರಯತ್ನವನ್ನು ಕಟ್ಟರವಾದಿಗಳು ಭಾರತದಲ್ಲಿ ಮಾಡುತ್ತಿದ್ದಾರೆಯೇ? ಇದನ್ನು ಕಂಡುಹಿಡಿಯಲು ಮೇಲಿನ ಆದೇಶವನ್ನು ಭದ್ರತಾ ಪಡೆಗಳಿಗೆ ನೀಡಲಾಗಿದೆ. ಅದೇರೀತಿ ಡಾ. ಝಾಕಿರ್ ಅವರ ಚಟುವಟಿಕೆಗಳ ಮೇಲೂ ನಿಗಾ ಇಡಲಾಗುತ್ತಿದೆ.