ಭಾರತವು ಜೋ ಬಾಯಡೆನ್ ಮತ್ತು ಕಮಲಾ ಹ್ಯಾರಿಸ್ ಅವರನ್ನು ಹೆಚ್ಚು ಪ್ರಶಂಸಿಸಬಾರದು ! – ಡಾ. ಸುಬ್ರಹ್ಮಣ್ಯಂ ಸ್ವಾಮಿ

  • ಉತ್ತಮ ಸ್ನೇಹಿತನಾಗಿದ್ದಕ್ಕಾಗಿ ಟ್ರಂಪ್‌ಗೆ ಧನ್ಯವಾದಗಳು ತಿಳಿಸಿ

  • ಕಮಲಾ ಹ್ಯಾರಿಸ್ ಹಿಂದೂ ರಾಷ್ಟ್ರೀಯವಾದಿ ವಿರೋಧಿ ವ್ಯಕ್ತಿ

ನವ ದೆಹಲಿ – ಪ್ರಸಾರ ಮಾಧ್ಯಮದಲ್ಲಿನ ಸುದ್ದಿಗನುಸಾರ ಜೋ ಬಾಯಡೆನ್ ಮತ್ತು ಕಮಲಾ ಹ್ಯಾರಿಸ್ ಅವರ ಸರಕಾರವನ್ನು ಭಾರತಕ್ಕೆ ಆಹ್ವಾನಿಸಲಾಗುವುದು ಎಂದು ತಿಳಿಸಿವೆ. ಇಬ್ಬರನ್ನೂ ಕೇಂದ್ರ ಸರಕಾರವು ಹೆಚ್ಚು ಪ್ರಶಂಸಿಸಬಾರದು. ಭಾರತಕ್ಕೆ ಸಂಬಂಧಪಟ್ಟ ಪ್ರಕರಣಗಳಲ್ಲಿ ಜೋ ಬಾಯಡೆನ್ ಇವರು ಕಮಲಾ ಹ್ಯಾರಿಸ್ ಮೂಲಕ ಪ್ರವೇಶಿಸುವರು ಮತ್ತು ಕಮಲಾ ಹ್ಯಾರಿಸ್ ಹಿಂದೂ ರಾಷ್ಟ್ರೀಯತೆಯ ವಿರುದ್ಧ ಅಂದರೆ ಬಿಜೆಪಿಯ ವಿರುದ್ಧವಾಗಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಪ್ರಧಾನಿ ಮೋದಿ ಆತ್ಮನಿರ್ಭರ ಆಗಬೇಕು, ಎಂದು ಬಿಜೆಪಿಯ ಹಿರಿಯ ಮುಖಂಡ ಮತ್ತು ಸಂಸದ ಡಾ. ಸುಬ್ರಹ್ಮಣ್ಯಂ ಸ್ವಾಮಿಯವರು ಟ್ವೀಟ್ ಮಾಡಿದ್ದಾರೆ.

ಇದರಿಂದ ಅವರು ಅಮೆರಿಕದ ಅಧ್ಯಕ್ಷರಾಗಿ ಜೋ ಬಾಯಡೆನ್ ಮತ್ತು ಉಪಾಧ್ಯಕ್ಷರಾಗಿ ಕಮಲಾ ಹ್ಯಾರಿಸ್ ಆಯ್ಕೆಯಾದ ನಂತರ ಭಾರತದೊಂದಿಗೆ ಅವರ ಸಂಬಂಧ ಹೇಗಿರುತ್ತದೆ ಎಂಬುದರ ಮೇಲೆ ಭಾರತ ಸರಕಾರದ ವರ್ತನೆ ಹೇಗೆ ಇರಬೇಕು ಎಂಬುದರ ಕುರಿತು ಅವರು ಸಲಹೆ ನೀಡಿದ್ದಾರೆ.

೧. ಡಾ. ಸ್ವಾಮಿ ಈ ಹಿಂದೆಯೂ ಒಂದು ಟ್ವೀಟ್ ಮಾಡಿದ್ದರು. ಅದರಲ್ಲಿ ಅವರು ಪ್ರಧಾನಿ ನರೇಂದ್ರ ಮೋದಿಯವರು ಅಮೇರಿಕಾದ ರಾಷ್ಟ್ರಾಧ್ಯಕ್ಷ ಡೊನಾಲ್ಡ ಟ್ರಂಪ್ ಇವರಿಗೆ ಟ್ವೀಟ್ ಮಾಡಿ ಅವರು ಭಾರತದೊಂದಿಗೆ ಒಳ್ಳೆಯ ಸ್ನೇಹಿತವನ್ನಾಗಿದ್ದರಿಂದ ಧನ್ಯವಾದ ಹೇಳಲೇಬೇಕು ಎಂದಿದ್ದಾರೆ. ಅದೇರೀತಿ ಅವರನ್ನು ಗಣರಾಜ್ಯೋತ್ಸವದ ಸಂದರ್ಭದಲ್ಲಿ ವಿಶೇಷ ಅತಿಥಿಯಾಗಿ ಆಹ್ವಾನಿಸಬೇಕು ಎಂದೂ ಹೇಳಿದ್ದಾರೆ
೨. ಅವರು ತಮ್ಮ ಮಾತನ್ನು ಮುಂದುವರೆಸುತ್ತಾ, ನಾನು ಭಾಜಪ ಸರಕಾರಕ್ಕೆ ಸಂವಿಧಾನಾತ್ಮಕ ದಾರಿ ತೋರಿಸಿದ್ದೇನೆ ನಾನು ಕುದುರೆಗೆ ನೀರು ತರಬಲ್ಲೆ; ಆದರೆ ಅದಕ್ಕೆ ನೀರು ಕುಡಿಸಲು ಸಾಧ್ಯವಿಲ್ಲ ಎಂದು ಹೇಳಿದರು.