೫೦೦ ವರ್ಷಗಳ ನಂತರ ಶ್ರೀ ರಾಮ ಜನ್ಮಭೂಮಿಯಲ್ಲಿ ದೀಪೋತ್ಸವ !

ರಾಮ್ ಕಿ ಪೌಡಿಯಲ್ಲಿ ೫ ಲಕ್ಷ ೫೧ ಸಾವಿರ ದೀಪಗಳನ್ನು ಹಚ್ಚಲಾಗುವುದು !

ಅಯೋಧ್ಯೆ (ಉತ್ತರ ಪ್ರದೇಶ) – ಇಲ್ಲಿ ದೀಪಾವಳಿಯ ನಿಮಿತ್ತ ಶ್ರೀ ರಾಮ್ ಜನ್ಮಭೂಮಿಯಲ್ಲಿ ೫೦೦ ವರ್ಷಗಳ ನಂತರ ಲಕ್ಷಾಂತರ ದೀಪಗಳನ್ನು ಬೆಳಗಿಸಲಾಗುತ್ತಿದೆ. ಈ ದೀಪೋತ್ಸವವನ್ನು ನವೆಂಬರ್ ೧೧ ರಿಂದ ನವೆಂಬರ್ ೧೩ ರವರೆಗೆ ಆಚರಿಸಲಾಗುತ್ತಿದೆ. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ನವೆಂಬರ್ ೧೩ ರಂದು ಉಪಸ್ಥಿತರಿರುತ್ತಾರೆ. ಈ ದೀಪೋತ್ಸವಕ್ಕೆ ಪ್ರಧಾನಿ ಮೋದಿ ಆನ್‌ಲೈನ್‌ ಉಪಸ್ಥಿತರಿರುವರು. ಭಕ್ತರು ಸಹ ಕಾರ್ಯಕ್ರಮವನ್ನು ವೀಕ್ಷಿಸಲು ಅವಕಾಶವನ್ನು ಮಾಡಿಕೊಡಲಾಗಿದೆ. ಇದಕ್ಕಾಗಿ ಸರಕಾರವು ಪೋರ್ಟಲ್ ರಚಿಸಿದೆ. ಇದನ್ನು ನವೆಂಬರ್ ೧೩ ರಂದು ಉದ್ಘಾಟಿಸಲಾಗುವುದು.

ದೀಪೋತ್ಸವದಲ್ಲಿ ರಾಮ್ ಕಿ ಪೌಡಿಯೊಂದಿಗೆ ಮಠಗಳು, ದೇವಾಲಯಗಳು ಮತ್ತು ಮನೆಗಳಲ್ಲಿ ದೀಪಗಳನ್ನು ಬೆಳಗಿಸಲಾಗುತ್ತಿದೆ. ರಾಮ್ ಕಿ ಪೌಡಿಯಲ್ಲಿಯೇ ಸುಮಾರು ಐದಾರು ಲಕ್ಷ ದೀಪಗಳನ್ನು ಬೆಳಗಿಸಲಾಗುವುದು. ಕಳೆದ ದೀಪಾವಳಿಯಲ್ಲಿ ಅಯೋಧ್ಯೆಯ ವಿವಿಧ ಘಾಟ್‌ಗಳಲ್ಲಿ ಮತ್ತು ಅಖಾಡಾದ ಪರಿಸರದಲ್ಲಿ ೪ ಲಕ್ಷ ೧೦ ಸಾವಿರ ದೀಪಗಳನ್ನು ಬೆಳಗಿಸಲಾಗಿತ್ತು ಎಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಮಾಹಿತಿ ನೀಡಿದರು.