|
ಶ್ರೀನಗರ (ಜಮ್ಮು – ಕಾಶ್ಮೀರ) – ಯುವಕರಿಗೆ ಉದ್ಯೋಗ ಸಿಗದಿದ್ದರೆ, ಅವರಿಗೆ ಶಸ್ತ್ರಾಸ್ತ್ರ ಕೈಗೆತ್ತಿಕೊಳ್ಳುವುದೊಂದೇ ದಾರಿ(ಪರ್ಯಾಯ), ಎಂದು ಪೀಪಲ್ಸ್ ಡೆಮಾಕ್ರಟಿಕ್ ಪಕ್ಷದ ಮುಖಂಡೆ ಮತ್ತು ಜಮ್ಮು – ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿಯವರು ಹೇಳಿದ್ದಾರೆ.
ಮೆಹಬೂಬಾ ಮುಫ್ತಿ ಅವರು ತಮ್ಮ ಮಾತನ್ನು ಮುಂದುವರೆಸುತ್ತಾ,
೧. ೩೭೦ ನೇ ವಿಧಿ(ಕಲಂ) ಯನ್ನು ತೆಗೆದ ನಂತರ ಬಿಜೆಪಿ ಸರಕಾರವು ಜಮ್ಮುವಿನ ಪರಿಸ್ಥಿತಿಯನ್ನು ಇನ್ನಷ್ಟು ಹದಗೆಡಿಸಿದೆ. ಜಮ್ಮು – ಕಾಶ್ಮೀರ ಮತ್ತು ಲಡಾಖ್‌ನ ಜನರನ್ನು ತಮ್ಮ ಭೂಮಿ ಮತ್ತು ಉದ್ಯೋಗದ ಅಧಿಕಾರದಿಂದ ವಂಚಿತರಾಗಿಸಿದ್ದಾರೆ. (ಎಷ್ಟೇ ಸುಳ್ಳುಗಳನ್ನು ಹೇಳಿದರೂ, ನಿಜ ಏನು ಎಂದು ಭಾರತೀಯ ಜನತೆಗೆ ತಿಳಿದಿದೆ. – ಸಂಪಾದಕ)
೨. ಭಾರತಕ್ಕೆ ಚೀನಾದೊಂದಿಗೆ ಮಾತುಕತೆ ನಡೆಸಲು ಸಾಧ್ಯವಿದೆ, ಹಾಗಾದರೆ, ಅದು ಪಾಕಿಸ್ತಾನದೊಂದಿಗೆ ಮಾತುಕತೆ ನಡೆಸಲು ಏಕೆ ಸಾಧ್ಯವಿಲ್ಲ ? (ಪಾಕಿಸ್ತಾನ ಚರ್ಚೆಗೆ ಮೀರಿದ ದೇಶವಾಗಿದೆ. ಆದ್ದರಿಂದ ಅದಕ್ಕೆ ಚರ್ಚೆಯಲ್ಲ, ಶಸ್ತ್ರಾಸ್ತ್ರಗಳ ಭಾಷೆ ತಿಳಿಯುತ್ತದೆ, ಎಂದು ಮೆಹಬೂಬಾ ಮುಫ್ತಿ ನೆನಪಿನಲ್ಲಿಡಬೇಕು ! ಪಾಕಿಸ್ತಾನವನ್ನು ಎತ್ತಿಕಟ್ಟುವ ಮೆಹಬೂಬಾರ ವಿರುದ್ಧ ದೇಶದ್ರೋಹದ ಆರೋಪವನ್ನು ನೊಂದಾಯಿಸಬೇಕು ! – ಸಂಪಾದಕ)
೩. ಬಿಹಾರ ವಿಧಾನಸಭಾ ಚುನಾವಣೆಗೆ ಸಂಬಂಧಿಸಿದಂತೆ ಅವರು, ‘ನಾನು ತೇಜಸ್ವಿ ಯಾದವರನ್ನು ಅಭಿನಂದಿಸಲು ಬಯಸುತ್ತೇನೆ ಏಕೆಂದರೆ ಅವರು ಚಿಕ್ಕವರಾಗಿದ್ದರೂ, ಅವರು ಬಿಹಾರದಲ್ಲಿ ಆಹಾರ, ಬಟ್ಟೆ, ಉದ್ಯೋಗ, ಆಶ್ರಯ ಇತ್ಯಾದಿಗಳ ಬಗ್ಗೆ ನಿಲುವು ತೆಗೆದುಕೊಂಡಿದ್ದಾರೆ’ ಎಂದು ಹೇಳಿದರು. ಕಲಂ ೩೭೦, ೩೫ ಎ, ಭೂ ಖರೀದಿಯ ವಿಷಯವನ್ನು ನಡೆಸಲು ಬಿಡಲಿಲ್ಲ, ಎಂದರು
೪. ಅಮೆರಿಕದಲ್ಲಿ ಟ್ರಂಪ್‌ರಿಗೆ ಏನಾಯಿತು ಅದೇ ಬಿಜೆಪಿ ಮತ್ತು ಮೋದಿಯವರ ಬಗ್ಗೆಯೂ ಸಂಭವಿಸಲಿದೆ ಎಂದೂ ಹೇಳಿದರು.