ಚಲನಚಿತ್ರದಲ್ಲಿ ‘ಬಾಂಬ್’ ಬಗ್ಗೆ ಯಾವುದೇ ಸಂದರ್ಭ ಇಲ್ಲದಿದ್ದಾಗ, ಅದಕ್ಕೆ ಉದ್ದೇಶಪೂರ್ವಕವಾಗಿ ‘ಲಕ್ಷ್ಮೀ ಬಾಂಬ್’ ಎಂದು ಹೆಸರಿಸಲು ಪ್ರಯತ್ನ ನಡೆದಿರುವುದು ಬಹಿರಂಗವಾಗಿದೆ ! – ‘ಆಜ್ ತಕ್’ ಸುದ್ದಿ ವಾಹಿನಿಯ ವರದಿ

‘ಲವ್ ಜಿಹಾದ್’ಗೆ ಪ್ರೋತ್ಸಾಹ ನೀಡುವ ‘ಲಕ್ಷ್ಮೀ’ ಚಲನಚಿತ್ರ ಪ್ರದರ್ಶನ

  • ಚಲನಚಿತ್ರದ ಕಥೆಯುದ್ದಕ್ಕೂ ಯಾವುದೇ ಸಂಬಂಧವಿಲ್ಲದಿದ್ದರೂ, ಉದ್ದೇಶಪೂರ್ವಕವಾಗಿ ಹಿಂದೂಗಳ ಧಾರ್ಮಿಕ ಭಾವನೆಗಳನ್ನು ನೋಯಿಸಲು ಚಲನಚಿತ್ರದ ಹೆಸರನ್ನು ಹಿಂದೂ ದೇವತೆಗಳನ್ನು ಅವಮಾನಿಸುವ ಈ ಪ್ರಯತ್ನವನ್ನು ಕೇಂದ್ರ ಸರಕಾರ ಈಗ ತಡೆಯಬೇಕು.
  • ಕೇಂದ್ರ ಸರಕಾರದ ಅಧೀನದಲ್ಲಿರುವ ಕೇಂದ್ರೀಯ ಪರೀಕ್ಷಣಾ ಮಂಡಳಿಯು ಅಂತಹ ಸಮಯದಲ್ಲಿ ನಿದ್ರಿಸುತ್ತಿರುತ್ತದೆಯೇ ? ಎಂಬ ಪ್ರಶ್ನೆ ಈಗ ಉದ್ಭವಿಸುತ್ತದೆ. ಈ ಮಂಡಳಿಯಲ್ಲಿ ಭಾಗಿಯಾಗಿರುವವರ ವಿರುದ್ಧ ಸರಕಾರ ಕ್ರಮ ಕೈಗೊಳ್ಳಬೇಕು. ಹಿಂದೂಗಳ ಬದಲು ಇತರ ಧರ್ಮಗಳ ಭಾವನೆಗಳಿಗೆ ನೋವಾಗಿದ್ದರೆ ಏನಾಗಬಹುದೆಂದು ಸರಕಾರ ಯೋಚಿಸುವುದು ಅಗತ್ಯವಿದೆ !
  • ‘ಲವ್ ಜಿಹಾದ್’ಗೆ ಪ್ರೋತ್ಸಾಹ ನೀಡುತ್ತಿದ್ದರಿಂದ ಹಿಂದೂಗಳು ಈ ಚಲನಚಿತ್ರವನ್ನು ಬಹಿಷ್ಕರಿಸುವುದು ಸೂಕ್ತವಾಗಿದೆ !

ನವ ದೆಹಲಿ – ದಕ್ಷಿಣ ಭಾರತದ ಚಲನಚಿತ್ರ ‘ಕಂಚನಾ’ ದ ಹಿಂದಿ ಆವೃತ್ತಿ ಎಂದು ನವೆಂಬರ್ ೯ ರಂದು ಬಿಡುಗಡೆಯಾದ ‘ಲಕ್ಷ್ಮೀ’ ಈ ಚಲನಚಿತ್ರವನ್ನು ಮೊದಲು ‘ಲಕ್ಷ್ಮಿ ಬಾಂಬ್’ ಎಂದು ಕರೆಯಲಾಗುತ್ತಿತ್ತು. ಇದಕ್ಕೆ ಹಿಂದೂ ಧರ್ಮಾಭಿಮಾನಿಗಳು ವಿರೋಧಿಸಿದಾಗ ಅದನ್ನು ‘ಲಕ್ಷ್ಮಿ’ ಎಂದು ಬದಲಾಯಿಸಲಾಯಿತು. ಈಗ ಚಿತ್ರಮಂದಿರಗಳಲ್ಲಿ ಚಿತ್ರ ನೋಡಿದ ನಂತರ ಚಲನಚಿತ್ರಕ್ಕೆ ‘ಲಕ್ಷ್ಮೀ ಬಾಂಬ್’ ಎಂದು ಹೆಸರಿಡುವಂತಹ ಯಾವುದೇ ಘಟನೆ ಅಥವಾ ಅರ್ಥವಿಲ್ಲ ಎಂದು ಪ್ರೇಕ್ಷಕರು ಹೇಳುತ್ತಿದ್ದಾರೆ, ಈ ಬಗೆಗಿನ ಸುದ್ದಿಯನ್ನು ಹಿಂದಿ ವಾರ್ತಾವಾಹಿನಿ ‘ಆಜ್ ತಕ್’ ಜಾಲತಾಣದಲ್ಲಿ ಪ್ರಕಟವಾಗಿದೆ.

ದೀಪಾವಳಿಯಲ್ಲಿ ಪ್ರದರ್ಶಿಸಲಾಗುವುದರಿಂದ ಅದನ್ನು ಪಟಾಕಿಯ ಹೆಸರಿನಲ್ಲಿ ‘ಲಕ್ಷ್ಮಿ ಬಾಂಬ್’ ಎಂದು ಹೆಸರಿಸಲು ಪ್ರಯತ್ನಿಸಲಾಗಿದೆ ಎಂಬ ವಾದವಿದೆ !

ಈ ವರದಿಯಲ್ಲಿ ಕೇಳಲಾದ ಪ್ರಶ್ನೆಯೆಂದರೆ, ಚಲನಚಿತ್ರದಲ್ಲಿ ಬಾಂಬ್‌ನ ಸಂದರ್ಭ ಏನೂ ಇಲ್ಲದಿರುವಾಗ ಚಲನಚಿತ್ರದ ಹೆಸರಿನಲ್ಲಿ ಬಾಂಬ್ ಅನ್ನು ಏಕೆ ಉಲ್ಲೇಖಿಸಲಾಗಿತ್ತು ? ಈ ಚಲನಚಿತ್ರ ದೀಪಾವಳಿಯಲ್ಲಿ ಬಿಡುಗಡೆಯಾಗಲಿಕ್ಕೆ ಇತ್ತು ಎಂದು ಕೆಲವರು ಸಾಮಾಜಿಕ ಮಾಧ್ಯಮದಲ್ಲಿ ಸ್ಪಷ್ಟಪಡಿಸಿದ್ದಾರೆ. ದೀಪಾವಳಿಯಲ್ಲಿ ‘ಲಕ್ಷ್ಮೀ ಬಾಂಬ್’ ಎಂಬ ಹೆಸರಿನ ಪಟಾಕಿ ಸಿಡಿಸಲಾಗುತ್ತದೆ. ಇದರಿಂದಾಗಿ ಚಲನಚಿತ್ರದ ನಿರ್ಮಾಪಕರು ಇದಕ್ಕೆ ‘ಲಕ್ಷ್ಮೀ ಬಾಂಬ್’ ಎಂದು ಹೆಸರಿಸಲು ಪ್ರಯತ್ನಿಸಿದರು.