ಯಾವ ದಿನ ಕುರಿ ಇಲ್ಲದೆ ಬಕ್ರಿದ್ ಆಚರಿಸಲಾಗುವುದೋ, ಆಗಲೇ ನಾವು ಪಟಾಕಿ ಇಲ್ಲದೆ ದೀಪಾವಳಿಯನ್ನು ಆಚರಿಸುವೆವು ! – ಬಿಜೆಪಿ ಸಂಸದ ಸಾಕ್ಷಿ ಮಹಾರಾಜರು

  • ಪಟಾಕಿಗಳಿಂದ ಶಬ್ದ ಮತ್ತು ವಾಯುಮಾಲಿನ್ಯ ಆಗುತ್ತವೆ, ಅದೇರೀತಿ ಬಕ್ರಿದ್‌ನ ಸಮಯದಲ್ಲಿ ಕುರಿಗಳ ಬಲಿಯಿಂದಲೂ ಮಾಲಿನ್ಯವಾಗುತ್ತದೆ; ಆದರೆ ಎಲ್ಲೆಡೆ ಸಮಾನತೆಯನ್ನು ಆಗ್ರಹಿಸುವವರು ಇಂತಹ ಸಮಯದಲ್ಲಿ ಮೌನವಾಗಿರುತ್ತಾರೆ !

  • ಮಾಲಿನ್ಯದ ಹೆಸರಿನಲ್ಲಿ ಹಿಂದೂಗಳ ಹಬ್ಬಗಳನ್ನು ವಿರೋಧಿಸುವವರು, ಇತರ ಧರ್ಮಗಳ ಮಾಲಿನ್ಯದ ಸಮಯದಲ್ಲಿ ಯಾವ ಬಿಲದಲ್ಲಿ ಅಡಗಿಕೊಳ್ಳುತ್ತಾರೆ ?

ಉನ್ನಾವ್ (ಉತ್ತರ ಪ್ರದೇಶ) – ಯಾವ ದಿನ ಕುರಿ ಇಲ್ಲದೆ ಬಕ್ರಿದ್ ಆಚರಿಸುವರೋ, ಆ ದಿನವೇ ಪಟಾಕಿ ಸಿಡಿಸದೆ ದೀಪಾವಳಿಯನ್ನು ಸಹ ಆಚರಿಸಲಾಗುವುದು. ಮಾಲಿನ್ಯದ ಹೆಸರಿನಡಿಯಲ್ಲಿ ಪಟಾಕಿಯ ಬಗ್ಗೆ ಹೆಚ್ಚು ಉಪದೇಶ ನೀಡದಿರಿ, ಇಂತಹ ಶಬ್ದಗಳಲ್ಲಿ ಇಲ್ಲಿಯ ಬಿಜೆಪಿ ಸಂಸದ ಸಾಕ್ಷಿ ಮಹಾರಾಜರು ತಮ್ಮ ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.

ದೀಪಾವಳಿಯಂದು ಪಟಾಕಿಗಳನ್ನು ನಿಷೇಧಿಸಿದ ನಂತರ ಅವರು ಈ ಪೋಸ್ಟ್ ಮಾಡಿದ್ದಾರೆ. ಸಾಕ್ಷಿ ಮಹಾರಾಜರಿಗೆ ಕರೋನಾದ ಸೋಂಕು ತಗಲಿರುವುದರಿಂದ ಅವರು ಮನೆಯಲ್ಲಿ ಪ್ರತ್ಯೇಕಿಕರಣ ವಾಗಿದ್ದಾರೆ.