ಜೆ.ಎನ್.ಯು. ಅನ್ನು ‘ಸ್ವಾಮಿ ವಿವೇಕಾನಂದ ವಿಶ್ವವಿದ್ಯಾಲಯ’ ಎಂದು ಮರುನಾಮಕರಣ ಮಾಡಿ !

ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಅವರ ಕೇಂದ್ರ ಸರ್ಕಾರಕ್ಕೆ ಬೇಡಿಕೆ

ಇಂತಹ ಬೇಡಿಕೆಗಳನ್ನು ಏಕೆ ಮಾಡಬೇಕಾಗುತ್ತದೆ ? ಕೇಂದ್ರ ಸರಕಾರ ನೇರವಾಗಿ ಹೆಸರನ್ನು ಬದಲಾಯಿಸಿ ಅದನ್ನು ಘೋಷಿಸಬೇಕು ! ಹಿಂದೂದ್ವೇಶಿ ನೆಹರೂ ಅವರ ಹೆಸರಿನ ಎಲ್ಲ ಸಂಸ್ಥೆಗಳ ಹೆಸರನ್ನು ಬದಲಾಯಿಸಿ ಅವುಗಳಿಗೆ ಹಿಂದೂ ಸಂತರ ಹೆಸರನ್ನು ನೀಡಬೇಕು. ಇದಕ್ಕಾಗಿ ಕೇಂದ್ರ ಸರಕಾರ ಪ್ರಯತ್ನ ಮಾಡಬೇಕು ಎಂದು ಹಿಂದೂಗಳಿಗೆ ಅನಿಸುತ್ತದೆ !

ನವ ದೆಹಲಿ – ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮತ್ತು ಕರ್ನಾಟಕದ ಮಾಜಿ ಸಚಿವ ಸಿ.ಟಿ. ರವಿ ಇವರು ದೆಹಲಿಯ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ(ಜೆ.ಎನ್.ಯು.) ಹೆಸರನ್ನು ಬದಲಾಯಿಸಿ ‘ಸ್ವಾಮಿ ವಿವೇಕಾನಂದ ವಿಶ್ವವಿದ್ಯಾಲಯ’ ಎಂದು ಮರುನಾಮಕರಣ ಮಾಡಬೇಕೆಂದು ಒತ್ತಾಯಿಸಿದ್ದಾರೆ. ಕೆಲವು ದಿನಗಳ ಹಿಂದೆ ಪ್ರಧಾನಿ ಮೋದಿ ಅವರು ಈ ವಿಶ್ವವಿದ್ಯಾಲಯದಲ್ಲಿ ಸ್ಥಾಪಿಸಲಾದ ಸ್ವಾಮಿ ವಿವೇಕಾನಂದರ ಪ್ರತಿಮೆಯನ್ನು ಅನಾವರಣಗೊಳಿಸಿದ್ದರು.

ಸಿ.ಟಿ. ರವಿಯವರು ತಮ್ಮ ಮಾತನ್ನು ಮುಂದುವರೆಸುತ್ತಾ, ಸ್ವಾಮಿ ವಿವೇಕಾನಂದರ ಹೆಸರನ್ನು ಇಡುವುದರಿಂದ ಅವರಂತಹ ಸಂತರ ಮತ್ತು ಮಹಾಪುರುಷರ ಜೀವನದಿಂದ ದೇಶದ ಯುವ ಪೀಳಿಗೆಗೆ ಸ್ಫೂರ್ತಿ ಸಿಗುತ್ತದೆ ಎಂದು ಹೇಳಿದರು.