ಈ ಸಲದ ದೀಪಾವಳಿಯಲ್ಲಿ ಚೀನಾದ ಸಂಸ್ಥೆಗಳಿಗೆ ೪೦ ಸಾವಿರ ಕೋಟಿ ರೂಪಾಯಿ ನಷ್ಟ

ಚೀನೀ ಉತ್ಪಾದನೆಗಳನ್ನು ಬಹಿಷ್ಕರಿಸಿದ ಕಾರಣ ಈ ದೀಪಾವಳಿಯಲ್ಲಿ ಭಾರತೀಯ ಉತ್ಪನ್ನಗಳ ೭೨,೦೦೦ ಕೋಟಿ ರೂಪಾಯಿಗಳಷ್ಟು ಮಾರಾಟ

ಭಾರತೀಯರು ನಿರ್ಧರಿಸಿದರೆ, ಚೀನಾಕ್ಕೆ ಪಾಠ ಕಲಿಸಬಹುದು. ಈಗ ಭಾರತೀಯರು ಚೀನಾದ ಒಂದೇಒಂದು ವಸ್ತುವನ್ನು ಖರೀದಿಸುವುದಿಲ್ಲ ಅಥವಾ ಮಾರಾಟ ಮಾಡುವುದಿಲ್ಲ ಎಂದು ನಿರ್ಧರಿಸಬೇಕು !

ನವ ದೆಹಲಿ – ಚಿಲ್ಲರೆ ವ್ಯಾಪಾರಿ ಸಂಘಟನೆಯಾದ ‘ಕಾನ್ಫಡರೆಶನ್ ಆಫ್ ಆಲ್ ಇಂಡಿಯಾ ಟ್ರೆಡರ‍್ಸ್’ನ ನೀಡಿದ ಮಾಹಿತಿಯ ಪ್ರಕಾರ ಈ ವರ್ಷ ದೀಪಾವಳಿಯ ಸಂದರ್ಭದಲ್ಲಿ ಭಾರತೀಯ ಚಿಲ್ಲರೆ ವ್ಯಾಪಾರಿಗಳು ೭೨ ಸಾವಿರ ಕೋಟಿ ರೂಪಾಯಿ ಮಾರಾಟ ಮಾಡಿದರೆ, ಚೀನಾದ ಸಂಸ್ಥೆಗಳು ೪೦ ಸಾವಿರ ಕೋಟಿ ರೂಪಾಯಿ ನಷ್ಟ ಅನಭವಿಸಬೇಕಾಯಿತು, ಚೀನಾದ ಸರಕುಗಳನ್ನು ಬಹಿಷ್ಕರಿಸುವ ಕರೆಯಿಂದಾಗಿ ಭಾರತೀಯ ಉತ್ಪನ್ನಗಳು ಭಾರೀ ಪ್ರಮಾಣದಲ್ಲಿ ಮಾರಾಟಕ್ಕೆ ಕಾರಣವಾಯಿತು.

ಈ ಸಂಘಟನೆಯು ನೀಡಿದ ಮಾಹಿತಿಗನುಸಾರ, ದೇಶದ ೩೦ ನಗರಗಳಲ್ಲಿ ಈ ಸಮೀಕ್ಷೆಯನ್ನು ನಡೆಸಲಾಗಿದೆ. ಈ ನಗರಗಳಲ್ಲಿ ದೆಹಲಿ, ಮುಂಬೈ, ಬೆಂಗಳೂರು, ಚೆನ್ನೈ, ನಾಗಪುರ, ಲಕ್ಷ್ಮಣಪುರಿ, ಕರ್ಣಾವತಿ, ಜೈಪುರ, ಜಮ್ಮು ಇತ್ಯಾದಿಗಳು ಸೇರಿವೆ. ಭಾರತೀಯ ಉತ್ಪನ್ನಗಳ ಮಾರಾಟದಲ್ಲಿ ಮುಖ್ಯವಾಗಿ ವಿದ್ಯುತ್ ಉಪಕರಣಗಳು, ಅಡುಗೆ ಪಾತ್ರೆಗಳು, ಸಿಹಿತಿಂಡಿಗಳು, ಅಲಂಕಾರಿಕ ವಸ್ತುಗಳು, ಚಪ್ಪಲಿ, ಗಡಿಯಾರ ಇತ್ಯಾದಿ ಸೇರಿವೆ. ಚೀನಾದ ಉತ್ಪನ್ನಗಳ ಮೇಲಿನ ಬಹಿಷ್ಕಾರವನ್ನು ಹೆಚ್ಚಿಸುವ ಮೂಲಕ ೨೦೨೧ ರ ಡಿಸೆಂಬರ್ ವೇಳೆಗೆ ಆಮದನ್ನು ಸುಮಾರು ೧ ಲಕ್ಷ ಕೋಟಿ ರೂಪಾಯಿಗೆ ಇಳಿಸುತ್ತೇವೆ ಎಂದು ಕೂಡ ಸಂಸ್ಥೆ ತಿಳಿಸಿದೆ.