‘ಇಡೀ ದೇಶದಲ್ಲಿ ಎಂ.ಐ.ಎಂ.ನ ಧ್ವಜ ಹಾರಿಸುವುದನ್ನು ಜಗತ್ತು ನೋಡಲಿದೆ !’(ಅಂತೆ) – ಅಕಬರುದ್ದೀನ್ ಒವೈಸಿ

ಹಗಲುಗನಸು ಕಾಣುವುದನ್ನು ಬಿಟ್ಟು ಓವೈಸಿ ಬಂಧುಗಳು ಧರೆಗಿಳಿಯವುದು ಒಳ್ಳೆಯದು !

ಭಾಗ್ಯನಗರ (ತೆಲಂಗಾಣ) – ಬಿಹಾರ ಚುನಾವಣೆಯಲ್ಲಿ ಎಂ.ಐ.ಎಂ.ಗೆ ಸಿಕ್ಕಿದ ಯಶಸ್ಸು ಭಾರತೀಯ ರಾಜಕೀಯದಲ್ಲಿ ಹೊಸ ತಿರುವನ್ನು ಸೂಚಿಸುತ್ತದೆ. ಎಂ.ಐ.ಎಂ. ಭಾರತದಾದ್ಯಂತ ಧ್ವಜ ಹಾರಿಸುತ್ತಿದೆ ಎಂದು ಎಂ.ಐ.ಎಂ. ಶಾಸಕ ಮತ್ತು ಪಕ್ಷದ ಮುಖ್ಯಸ್ಥ, ಸಂಸದ ಅಸದುದ್ದೀನ್ ಒವೈಸಿಯವರ ಸಹೋದರ ಅಕಬರುದ್ದೀನ್ ಒವೈಸಿ ಹೇಳಿದ್ದಾರೆ.

ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಎಂ.ಐ.ಎಂ. ೨೦ ಸ್ಥಾನಗಳಿಗೆ ಸ್ಪರ್ಧಿಸಿ ೫ ಸ್ಥಾನಗಳಲ್ಲಿ ಜಯ ಸಾಧಿಸಿದೆ. ಈ ಯಶಸ್ಸಿನ ಕುರಿತು ಅವರು ಮೇಲಿನ ಹೇಳಿಕೆ ನೀಡಿದ್ದಾರೆ. ಈ ಹಿಂದೆ ಸಂಸದ ಅಸದುದ್ದೀನ್ ಒವೈಸಿ, ‘ಈಗ ಬಂಗಾಳದಲ್ಲಿಯೂ ಚುನಾವಣೆಯಲ್ಲಿ ಸ್ಪರ್ಧಿಸುವುವ ಬಗ್ಗೆ ವಿಚಾರ ಮಾಡಲಾಗುವುದು’ ಎಂದು ಹೇಳಿದ್ದರು.