ಸ್ಮೃತಿಕಾರರು ಮಹಿಳೆಯರಿಗೆ ನೀಡಿದ ಗೌರವ ಮತ್ತು ಅವರ ಬಗ್ಗೆ ಹೇಳಿದ ಮಹತ್ವ

ಗುರುದೇವ ಡಾ. ಕಾಟೇಸ್ವಾಮೀಜಿ

ಸ್ಮೃತಿಕಾರರು ಹೇಳುತ್ತಾರೆ…..

೧. ಸ್ತ್ರೀಯ ಹತ್ಯೆಯು ಮಹಾಪಾಪವಾಗಿದೆ. ಯಾವುದೇ ಅವಸ್ಥೆಯಲ್ಲಿ ಸ್ತ್ರೀಯರ ಹತ್ಯೆಯನ್ನು ಮಾಡಬಾರದು.

೨. ಪಾಪಿಯ ಪುತ್ರಿಯು ಪಾಪಿ ಅನಿಸಿಕೊಳ್ಳುವುದಿಲ್ಲ; ಆದರೆ ಪಾಪಿಯ ಮಗನು ಮಾತ್ರ ಪಾಪಿಯಾಗುತ್ತಾನೆ.

೩. ಪಾಪದ ಕ್ಷಾಲನೆಗಾಗಿ ಪುರುಷನಿಗೆ ಯಾವ ಪ್ರಾಯಶ್ಚಿತ್ತವನ್ನು ತೆಗೆದುಕೊಳ್ಳಬೇಕಾಗುತ್ತದೆಯೋ, ಅದರ ಅರ್ಧ ಭಾಗವನ್ನಷ್ಟೇ ಸ್ತ್ರೀಯು ಪ್ರಾಯಶ್ಚಿತ್ತವೆಂದು ತೆಗೆದುಕೊಳ್ಳಬೇಕು.

೪. ಒಂದು ವೇಳೆ, ಕುಟುಂಬವನ್ನು ನಡೆಸುವ ಪುರುಷನು ಏನಾದರೂ ಪಾಪ ಕರ್ಮಗಳನ್ನು ಮಾಡಿದರೆ, ಅದಕ್ಕೆ ಅವನೊಬ್ಬನೇ ಜವಾಬ್ದಾರನಾಗುತ್ತಾನೆ. ಪತ್ನಿಯು ಮಾಡಿದ ಪುಣ್ಯಕ್ಕೆ ಅವಳೊಬ್ಬಳೇ ಪಾಲುದಾರಳಾಗಿರುತ್ತಾಳೆ. ಅದರಲ್ಲಿ ಪತಿಗೆ ಪಾಲಿಲ್ಲ.

೫. ಮೊದಲು ಸ್ತ್ರೀ, ನಂತರ ಪುರುಷ ಈ ರೀತಿ ವ್ಯವಹಾರವಿರಬೇಕು.

೬. ಜನಸಂದಣಿ ರಸ್ತೆಯಲ್ಲಿ ಅಥವಾ ಜನಸಂದಣಿಯಲ್ಲಿ ಸ್ತ್ರೀಯರಿಗೆ ದಾರಿ ಬಿಟ್ಟು ಕೊಡಬೇಕು.

೭. ಸ್ತ್ರೀ-ಧನದ ಮೇಲೆ ಕೇವಲ ಪತ್ನಿಯ ಅಧಿಕಾರವಿರುತ್ತದೆ, ಅದರ ಮೇಲೆ ಪತಿಯ ಅಧಿಕಾರವಿರುವುದಿಲ್ಲ.

ಮನುವನ್ನು ಶೂದ್ರ ತಿರಸ್ಕಾರದಿಂದ ವಿರೋಧಿಸಲಾಗುತ್ತದೆ. ಆ ಎಲ್ಲ ಆಕ್ಷೇಪಗಳ ನಿವಾರಣೆಯು ಈ ಮನುವಚನದಿಂದ ಸಹಜವಾಗಿ ಆಗುತ್ತದೆ ಮತ್ತು ಮನು ಹೇಳುತ್ತಾನೆ, “ಶೂದ್ರರಿಂದಲೂ ಬ್ರಾಹ್ಮಣರು ಮೋಕ್ಷಧರ್ಮವನ್ನು ಕಲಿಯಬೇಕು.”

೯. ಸ್ತ್ರೀಯರಿಗೆ ತೆರಿಗೆ ವಿನಾಯಿತಿ (ಟ್ಯಾಕ್ಸಸ್) ಇತ್ತು. ತಾಯಿಯ ಸ್ಥಾನ, ಅವಳ ಮಾನ, ಅವಳ ಪೂಜ್ಯತ್ವ ಇವೆಲ್ಲವನ್ನೂ ಸ್ಮೃತಿಕಾರರು ಸಮರ್ಥಿಸುತ್ತಾರೆ. ತಾಯಿಯ ಮಹನೀಯತೆ, ವೇದ, ಉಪನಿಷತ್ತುಗಳು ರಾಮಾಯಣ, ಮಹಾಭಾರತ, ಪುರಾಣ ಇವೆಲ್ಲಗಳನ್ನು ಸ್ಮೃತಿಕಾರರು ಮುಕ್ತಕಂಠದಿಂದ ಹೊಗಳುತ್ತಾರೆ. ಮನುವು, “ತಾಯಿಯು ತಂದೆಗಿಂತ ಸಾವಿರಾರು ಪಟ್ಟು ಶ್ರೇಷ್ಠಳಿದ್ದಾಳೆ” ಎನ್ನುತ್ತಾನೆ.

೧೦. ತಾಯಿಯು ಒಂದು ವೇಳೆ ಪಾಪಿಯಾಗಿದ್ದರೂ ಅವಳನ್ನು ಮಗನು ಸಂಭಾಳಿಸಬೇಕು. ಒಂದು ವೇಳೆ ಪತಿಯು ಪತ್ನಿಯನ್ನು ದುರ್ಲಕ್ಷಿಸುತ್ತಿದ್ದರೆ, ಪೋಷಣೆ ಮಾಡದಿದ್ದರೆ, ಅವಳಿಗೆ ಹೊಟ್ಟೆಗಿಲ್ಲದಂತಾದರೆ, ಮನುವು ಸ್ತ್ರೀಯರಿಗೆ ಉಪಜೀವನಕ್ಕಾಗಿ ವ್ಯವಸಾಯ ಮಾಡುವ ಅನುಮತಿಯನ್ನು ನೀಡುತ್ತಾನೆ. ಒಂದು ವೇಳೆ, ಸ್ತ್ರೀಯರ ಮೇಲೆ ಮ್ಲೆಂಚ್ಛರು (ಆರ್ಯರೇತರು) ಬಲಾತ್ಕಾರ ಮಾಡಿದ್ದರೆ ಮತ್ತು ಅವಳು ಗರ್ಭವತಿಯಾಗಿದ್ದರೆ, ಶುದ್ಧಿಕರಣದ ಪ್ರಕ್ರಿಯೆಯಿಂದ, ಪ್ರಾಯಶ್ಚಿತ್ತದಿಂದ ಅಥವಾ ವ್ರತಾಚರಣೆಯಿಂದ ಅವಳಿಗೆ ಪುನಃ ಸಮಾಜದಲ್ಲಿ ಸ್ಥಾನ ನೀಡಬಹುದು.

ವಾಸ್ತವದಲ್ಲಿ ಸ್ತ್ರೀಯರಲ್ಲಿ ಪುರುಷರಿಗಿಂತ ಹೆಚ್ಚು ಗುಣಗಳಿವೆ.

೧. ಪುರುಷರ ಜನ್ಮವು ಸ್ತ್ರೀಯರ ಗರ್ಭದಿಂದಲೇ ಆಗುತ್ತದೆ ಅಲ್ಲವೇ ? ಹಾಗಾದರೆ ಸ್ತ್ರೀಯರ ತಿರಸ್ಕಾರವನ್ನು ಮಾಡುವ ಯಾವ ಪುರುಷನಿಗೆ ಸುಖ ಸಿಗಬಹುದು ?

೨. ಪುರುಷರಿಗೆ ಧರ್ಮಶಾಸ್ತ್ರದ ಬೆಲೆ ಇರುವುದಿಲ್ಲ; ಆದರೆ ಸ್ತ್ರೀಯರು ಮಾತ್ರ ಶಾಸ್ತ್ರವನ್ನು ಕಟ್ಟುನಿಟ್ಟಾಗಿ ಪಾಲಿಸಲು ಪ್ರಯತ್ನಿಸುತ್ತಾರೆ, ಆದ್ದರಿಂದ ಸ್ತ್ರೀಯರು ಪುರುಷರಿಗಿಂತ ಶ್ರೇಷ್ಠರಾಗಿದ್ದಾರೆ. ಪತ್ನಿಯಿಲ್ಲದೇ ಗೃಹಸ್ಥನ ಯಾವುದೇ ಧರ್ಮಕಾರ್ಯ ನಡೆಯದು.

೩. ಸನ್ಯಾಸವು ಹೊಸ ಜನ್ಮವಾಗಿದೆ. ಮಗನು ಸನ್ಯಾಸವನ್ನು ಸ್ವೀಕರಿಸಿದರೆ, ಅವನಿಗೆ ತನ್ನ ತಾಯಿ-ತಂದೆಯವರ ಸಂಬಂಧವು ಕೊನೆಗೊಳ್ಳುತ್ತದೆ. ಈಗ ತಂದೆಯು ಅವನಿಗೆ ನಮಸ್ಕಾರ ಮಾಡುತ್ತಾನೆ; ಆದರೆ ಸನ್ಯಾಸಿ ಮಗನು ಮಾತ್ರ ತಾಯಿಗೆ ನಮಸ್ಕಾರ ಮಾಡಬೇಕು.’

– ಗುರುದೇವ ಡಾ. ಕಾಟೇಸ್ವಾಮೀಜಿ (ಆಧಾರ : ಮಾಸಿಕ ‘ಘನಗರ್ಜಿತ’, ಮಾರ್ಚ್ ೨೦೧೭)