ಬಂಗಾಳ ಅಲ್ ಕೈದಾದ ತಾಣವಾಗಿ ಮಾರ್ಪಟ್ಟಿದೆ; ಅದರ ಪರಿಸ್ಥಿತಿ ಕಾಶ್ಮೀರಕ್ಕಿಂತ ಕೆಟ್ಟದಾಗಿದೆ ! – ಬಿಜೆಪಿ ರಾಜ್ಯಾಧ್ಯಕ್ಷ ದಿಲೀಪ್ ಘೋಷ್

ತೃಣಮೂಲ ಕಾಂಗ್ರೆಸ್ ರಾಜ್ಯದಲ್ಲಿ ಈ ಪರಿಸ್ಥಿತಿ ಉದ್ಭವಿಸಿದೆ ಮತ್ತು ಅವರಿಂದ ಆ ಸ್ಥಿತಿ ಬದಲಾಗುವುದಿಲ್ಲ, ಆದುದರಿಂದ ಕೇಂದ್ರ ಸರಕಾರವೇ ಭಯೋತ್ಪಾದಕರ ಅಡ್ಡೆಗಳನ್ನು ಏಕೆ ನಾಶಪಡಿಸುವುದಿಲ್ಲ ಮತ್ತು ಬಂಗಾಳದ ಪರಿಸ್ಥಿತಿಯನ್ನು ಸುಧಾರಿಸಲು ಬಂಗಾಳ ಸರಕಾರವನ್ನು ಏಕೆ ವಿಸರ್ಜಿಸುತ್ತಿಲ್ಲ ? ಎಂದು ಹಿಂದೂಗಳಿಗೆ ಪ್ರಶ್ನೆ ಬೀಳುತ್ತಿದೆ !

ರಾಜ್ಯ ಅಧ್ಯಕ್ಷ ದಿಲೀಪ್ ಘೋಷ್

ಕೋಲಕಾತಾ (ಬಂಗಾಲ) – ಕೆಲವು ದಿನಗಳ ಹಿಂದೆ ಕೂಚ್‌ಬಿಹಾರ್‌ನಲ್ಲಿ ಅಲ್ ಕೈದಾ ಭಯೋತ್ಪಾದಕರನ್ನು ಗುರುತಿಸಲಾಗಿತ್ತು. ಅವರ ಜಾಲವು ಬಂಗಾಲದಾದ್ಯಂತ ಹರಡಿದೆ. ಈ ರಾಜ್ಯ ಭಯೋತ್ಪಾದಕರ ತಾಣವಾಗಿ ಮಾರ್ಪಟ್ಟಿದೆ. ಕಾಶ್ಮೀರಕ್ಕಿಂತ ಇಲ್ಲಿ ಪರಿಸ್ಥಿತಿ ಕೆಟ್ಟದಾಗಿದೆ ಎಂದು ಬಿಜೆಪಿಯ ಬಂಗಾಳ ರಾಜ್ಯ ಅಧ್ಯಕ್ಷ ದಿಲೀಪ್ ಘೋಷ್ ಆರೋಪಿಸಿದ್ದಾರೆ.