ಕರ್ನಾಟಕ ಸರಕಾರ ಆನ್‌ಲೈನ್ ಆಟಗಳ ಮೇಲೆ ನಿಷೇಧ ಹೇರಲಿದೆ

ಆನ್‌ಲೈನ್ ಆಟ ಇದು ಜೂಜಾಟವಾಗಿದ್ದರಿಂದ ನಿಷೇಧಿಸಲಾಗುವುದು

ಇಂತಹ ನಿರ್ಧಾರವನ್ನು ಕೇವಲ ಕರ್ನಾಟಕ ಸರಕಾರಕ್ಕಿಂತ ನೇರ ಕೇಂದ್ರ ಸರಕಾರ ತೆಗೆದುಕೊಂಡು ದೇಶಾದ್ಯಂತ ಆನ್‌ಲೈನ್ ಆಟಗಳನ್ನು ನಿಷೇಧಿಸುವ ಮೂಲಕ ಸಾರ್ವಜನಿಕರನ್ನು ಜೂಜಾಟದಿಂದ ರಕ್ಷಿಸಬೇಕು !

ಬೆಂಗಳೂರು – ರಾಜ್ಯವು ಶೀಘ್ರದಲ್ಲೇ ಅಂತರ್ಜಾಲದಲ್ಲಿ ಆನ್‌ಲೈನ್ ಆಟಗಳನ್ನು ನಿಷೇಧಿಸಲಿದೆ ಎಂದು ಕರ್ನಾಟಕ ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಸರಕಾರದ ಈ ನಿರ್ಧಾರವನ್ನು ಕಾಂಗ್ರೆಸ್ ಮುಖಂಡ ದಿನೇಶ ಗುಂಡುರಾವ್ ಸ್ವಾಗತಿಸಿದ್ದಾರೆ.

(ಸೌಜನ್ಯ : B TV)

ಇಂತಹ ಆಟಗಳಿಂದ ಜನರ ಹಣ ಖರ್ಚಾಗುತ್ತದೆ. ಇದು ಒಂದು ರೀತಿಯ ಜೂಜಾಟವಾಗಿದೆ. ಇದರಲ್ಲಿ ಮಕ್ಕಳು ಮತ್ತು ವಯಸ್ಕರರು ಸಹ ದೊಡ್ಡ ಸಂಖ್ಯೆಯಲ್ಲಿ ಭಾಗವಹಿಸುತ್ತಿದ್ದಾರೆ. ಈ ಬಗ್ಗೆ ಮಕ್ಕಳ ಪೋಷಕರು ಮತ್ತು ಇತರರು ದೂರು ನೀಡಿದ ನಂತರ ಇಂತಹ ನಿಷೇಧ ಹೇರಲು ಸರಕಾರ ಚಿಂತನೆ ನಡೆಸುತ್ತಿದೆ, ಎಂದು ಬೊಮ್ಮಾಯಿಯವರು ಹೇಳಿದರು.