ಕಾಂಗ್ರೆಸ್‌ನ ಭ್ರಷ್ಟ ನಾಯಕರು !
ಬೆಂಗಳೂರು – ಬೆಂಗಳೂರಿನಲ್ಲಿ ‘ಐ-ಮೋನೆಟರಿ ಅಡ್ವೈಜರಿ’ಯ (ಐ.ಎಂ.ಎ.ಯ) ಬಹುಕೋಟಿ ಹಗರಣಕ್ಕೆ ಸಂಬಂಧಿಸಿದಂತೆ ಸಿಬಿಐ ಕಾಂಗ್ರೆಸ್ ಮಾಜಿ ಸಚಿವ ರೋಶನ್ ಬೇಗ್ ಅವರನ್ನು ಬಂಧಿಸಿದೆ. ಅವರನ್ನು ಸಿಬಿಐ ಕಚೇರಿಗೆ ಕರೆಸಲಾಗಿತ್ತು. ನಂತರ ದೃಢವಾದ ಸಾಕ್ಷ್ಯಗಳ ಆಧಾರದ ಮೇಲೆ ಅವರನ್ನು ಬಂಧಿಸಿ ನ್ಯಾಯಾಂಗ ಬಂಧನದಲ್ಲಿಡಲಾಗಿದೆ. ಕರ್ನಾಟಕದಲ್ಲಿ ಐ.ಎಂ.ಎ. ಹಾಗೂ ಅದರ ಸಮೂಹ ಸಂಸ್ಥೆಗಳಿಂದ ನಡೆಸಲಾಗುತ್ತಿದ್ದ ಠೇವಣಿ ಯೋಜನೆಯಲ್ಲಿ ಇಸ್ಲಾಮಿಕ್ ನಿಯಮಗಳಿಗನುಸಾರ ಹೂಡಿಕೆ ಮಾಡಿದರೆ ಅದರ ಪ್ರತಿಯಾಗಿ ಹೆಚ್ಚಿನ ಮೊಬಲಗನ್ನು ನೀಡುವುದಾಗಿ ಭರವಸೆ ನೀಡಿ ಲಕ್ಷಗಟ್ಟಲೆ ಜನರನ್ನು ಮೋಸ ಮಾಡಿದ್ದರು.
(ಸೌಜನ್ಯ : The News24 Kannada)