ನುಸರತ್ ಜಹಾನ್ ಅವರಿಗೆ ಏನು ಅನಿಸುತ್ತದೆ ಅದು ಸತ್ಯವಾಗಿದ್ದರೆ, ಒಳ್ಳೆಯದಾಗುತ್ತಿತ್ತು; ಆದರೆ ವಸ್ತುಸ್ಥಿತಿ ಹಾಗಿಲ್ಲ, ಅವರು ಅದರ ಅಧ್ಯಯನ ಮಾಡಬೇಕು !
ಕೋಲಕಾತಾ (ಬಂಗಾಲ) – ಪ್ರೀತಿ ಅತ್ಯಂತ ವೈಯಕ್ತಿಕ ವಿಷಯವಾಗಿದೆ. ‘ಲವ್’ ಮತ್ತು ‘ಜಿಹಾದ್’ ಎರಡು ಒಟ್ಟಿಗೆ ಸೇರಿಸಲು ಸಾಧ್ಯವಿಲ್ಲ. ಚುನಾವಣೆಯ ಮೊದಲು ಜನರು ಇಂತಹ ವಿಷಯಗಳೊಂದಿಗೆ ಬರುತ್ತಾರೆ. ನೀವು ಯಾರೊಂದಿಗೆ ಇರಬೇಕೆಂಬುದು ವೈಯಕ್ತಿಕ ಆಯ್ಕೆಯಾಗಿದೆ. ಪ್ರೀತಿ ಮಾಡಿ ಮತ್ತು ಪರಸ್ಪರ ಪ್ರೀತಿಸುತ್ತಲೇ ಇರಿ. ಧರ್ಮವನ್ನು ರಾಜಕೀಯದ ಅಸ್ತ್ರವಾಗಿ ಬಳಸಬೇಡಿ ಎಂದು ತೃಣಮೂಲ ಕಾಂಗ್ರೆಸ್ ಸಂಸದೆ ಮತ್ತು ನಟಿ ನುಸರತ್ ಜಹಾನ್ ಹೇಳಿದ್ದಾರೆ.
(ಸೌಜನ್ಯ : Hindustan Times)
೨೦೨೧ ರಲ್ಲಿ ಬಂಗಾಲದಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ, ಬಂಗಾಲದಲ್ಲಿ ‘ಲವ್ ಜಿಹಾದ್’ನ ವಿವಾದವು ಭುಗಿಲೆದ್ದಿದ್ದರಿಂದ ಜಹಾನ್ ಅದರ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು. ಪಕ್ಷದ ಕಛೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡುತ್ತಿದ್ದರು. ನುಸರತ್ ಜಹಾನ್ ಹಿಂದೂ ಯುವಕನನ್ನು ಮದುವೆಯಾಗಿದ್ದಾರೆ. ಈ ಹಿಂದೆ ಬಿಜೆಪಿ ‘ನಾವು ಅಧಿಕಾರಕ್ಕೆ ಬಂದರೆ ‘ಲವ್ ಜಿಹಾದ್’ ವಿರುದ್ಧ ಕಾನೂನು ಜಾರಿಗೆ ತರುತ್ತೇವೆ’ ಎಂದು ಘೋಷಿದ್ದರು.