ದೆಹಲಿಯ ಪೊಲೀಸ್ ಇಲಾಖೆ ಕೇಂದ್ರದ ಬಿಜೆಪಿ ಸರಕಾರದ ನಿಯಂತ್ರಣದಲ್ಲಿರುವಾಗ ಇಂತಹ ಘಟನೆಗಳು ಸಂಭವಿಸುವುದು ಅಪೇಕ್ಷಿತವಲ್ಲ !
ನವ ದೆಹಲಿ : ಬಿಜೆಪಿ ಮುಖಂಡ ಮತ್ತು ಮಾಹಿತಿ ಅಧಿಕಾರದ ಕಾರ್ಯಕರ್ತ ಜುಲ್ಫಿಕರ ಕುರೈಷಿಯನ್ನು ಇಲ್ಲಿನ ಸುಂದರನಗರ ಪ್ರದೇಶದ ಮಸೀದಿಯ ಹೊರಗೆ ಅಜ್ಞಾತರು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ. ಅವರು ಬೆಳಿಗ್ಗೆ ನಮಾಜಗಾಗಿ ಹೋಗುತ್ತಿದ್ದಾಗ ಅವರ ಮೇಲೆ ಗುಂಡಿನ ದಾಳಿ ಮಾಡಲಾಗಿದೆ. ಈ ಸಮಯದಲ್ಲಿ ಹಲ್ಲೆಕೋರರು ಜುಲ್ಫಿಕರ ಕುರೈಷಿಯ ಮಗನ ಮೇಲೆ ಚಾಕುವಿನಿಂದ ಹಲ್ಲೆ ಮಾಡಿದ್ದಾರೆ. ಅದರಲ್ಲಿ ಅವರು ಗಾಯಗೊಂಡರು. ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರ ಸ್ಥಿತಿ ಗಂಭೀರವಾಗಿದೆ. ಹತ್ಯೆಯ ಹಿಂದಿನ ಕಾರಣ ಇನ್ನೂ ಕಂಡುಹಿಡಿಯಲಾಗಲಿಲ್ಲ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.