ಕೇರಳ ಸರಕಾರದಿಂದ ಸಾಮಾಜಿಕ ಮಾಧ್ಯಮದಿಂದ ಅವಮಾನ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳುವ ಕಾಯ್ದೆಯ ಕ್ರಮಕ್ಕೆ ತಡೆ

ತಿರುವನಂತಪುರಮ್ (ಕೇರಳ) – ಕೇರಳ ಸರಕಾರವು ಕೇರಳ ಪೊಲೀಸ್ ಕಾಯ್ದೆಯಲ್ಲಿ ಸೆಕ್ಷನ್ ೧೧೮ (ಅ) ಅನ್ನು ಸೇರಿಸುವ ಸುಗ್ರೀವಾಜ್ಞೆಯನ್ನು ಹಿಂಪಡೆಡಿದೆ. ‘ಸಧ್ಯ ಈ ಕಾನೂನು ಜಾರಿಗೆ ಬರುವುದಿಲ್ಲ’ ಎಂದು ಮುಖ್ಯಮಂತ್ರಿ ಪಿನರಾಯಿ ವಿಜಯನ್ ಹೇಳಿದ್ದಾರೆ.

ಈ ಕಾನೂನಿನ ಕುರಿತು ಬಂದ ಅನೇಕ ಸಲಹೆಗಳಿಂದಾಗಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಈ ಕಲಂ ಪ್ರಕಾರ ಸಾಮಾಜಿಕ ಮಾಧ್ಯಮದಲ್ಲಿ ಯಾವುದೇ ವ್ಯಕ್ತಿಯ ವಿರುದ್ಧ ಮಾನಹಾನಿ, ಆತನಿಗೆ ನೀಡಿದ ಬೆದರಿಕೆ ಮತ್ತು ಆತನನ್ನು ಅವಮಾನಗೊಳಿಸುವುದು ಶಿಕ್ಷಾರ್ಹ ಅಪರಾಧವಾಗಿದ್ದು ಅದಕ್ಕೆ ೫ ವರ್ಷಗಳವರೆಗೆ ಜೈಲು ಶಿಕ್ಷೆ ಅಥವಾ ೧೦,೦೦೦ ರೂಪಾಯಿ ದಂಡ ಅಥವಾ ಎರಡನ್ನೂ ವಿಧಿಸುವ ಪ್ರಸ್ತಾವನೆಯಿತ್ತು.