ಓವೈಸಿಗೆ ರೋಹಿಂಗ್ಯಾಗಳು ಬೇಕು, ಅಭಿವೃದ್ಧಿ ಅಲ್ಲ ! – ಸಂಸದ ತೇಜಸ್ವಿ ಸೂರ್ಯ, ಅಧ್ಯಕ್ಷರು, ಬಿಜೆಪಿ ಯುವ ಮೋರ್ಚಾ

ಭಾಗ್ಯನಗರ (ತೆಲಂಗಾಣಾ) – ರೋಹಿಂಗ್ಯಾ ಮುಸ್ಲಿಮರನ್ನು ಭಾರತಕ್ಕೆ ಕರೆತರಬೇಕೆಂದು ಎಂ.ಐ.ಎಂ.ನ ನಾಯಕ ಅಸದುದ್ದೀನ್ ಒವೈಸಿ ಮತ್ತು ಅವರ ಸಹೋದರ ಅಕ್ಬರುದ್ದೀನ್ ಒವೈಸಿ ಒತ್ತಾಯಿಸುತ್ತಿದ್ದಾರೆ; ಆದರೆ ಅವರು ಎಂದಿಗೂ ಅಭಿವೃದ್ಧಿಯ ಭಾಷೆಯನ್ನು ಮಾತನಾಡುವುದಿಲ್ಲ ಎಂದು ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಮತ್ತು ಸಂಸದ ತೇಜಸ್ವಿ ಸೂರ್ಯ ಇಲ್ಲಿ ನಡೆದ ಪ್ರಚಾರ ಸಭೆಯಲ್ಲಿ ಟೀಕಿಸಿದರು. ಭಾಗ್ಯನಗರದಲ್ಲಿ ಮಹಾನಗರ ಪಾಲಿಕೆಯ ಚುನಾವಣಾ ಪ್ರಚಾರಕ್ಕಾಗಿ ಈ ಪ್ರಚಾರ ಸಭೆ ಆಯೋಜಿಸಲಾಗಿತ್ತು. ‘ಎಂ.ಐ.ಎಂ.ಗೆ ನೀಡಲಾದ ಮತವು ಭಾರತದ ವಿರುದ್ಧ ಮತ್ತು ಭಾರತ ನಿಂತಿರುವ ಸ್ತಂಭಗಳ ವಿರುದ್ಧವಾಗಿರುತ್ತದೆ’, ಎಂದು ತೇಜಸ್ವೀ ಸೂರ್ಯ ಹೇಳಿದ್ದಾರೆ.

ಮೊಹಮ್ಮದ್ ಅಲಿ ಜಿನ್ನಾ ಅವರಂತೆ ಓವೈಸಿ ಇಸ್ಲಾಂ ಧರ್ಮ, ಪ್ರತ್ಯೇಕತಾವಾದ ಮತ್ತು ಮೂಲಭೂತವಾದದ ಭಾಷೆಯನ್ನು ಮಾತನಾಡುತ್ತಾರೆ ಎಂದು ತೇಜಸ್ವಿ ಸೂರ್ಯ ಹೇಳಿದರು. ದೇಶದ ಎಲ್ಲರೂ ಒವೈಸಿಯ ಪ್ರತ್ಯೇಕತಾವಾದಿ ಮತ್ತು ಧಾರ್ಮಿಕ ರಾಜಕೀಯದ ವಿರುದ್ಧ ನಿಲ್ಲಬೇಕು. ಇಂದು ಭಾಗ್ಯನಗರ ಬದಲಾಯಿಸಿ, ನಾಳೆ ತೆಲಂಗಾಣ ಬದಲಾಗುತ್ತದೆ, ನಾಳೆ ದಕ್ಷಿಣ ಭಾರತ ಮತ್ತು ನಂತರ ಇಡೀ ದೇಶ ಬದಲಾಗುತ್ತದೆ ಎಂದು ಕರೆ ನೀಡಿದ್ದಾರೆ.