ಪಂಚತಾರಾ ಹೋಟೆಲ್‌ಗಳಿಂದ ಚುನಾವಣೆ ಸ್ಪರ್ಧಿಸಲು ಸಾಧ್ಯವಿಲ್ಲ ! – ಗುಲಾಮ್ ನಬಿ ಆಜಾದ್ ಅವರಿಂದ ಕಾಂಗ್ರೆಸ್ಸಿಗೆ ಕಪಾಳ ಮೋಕ್ಷ

ಕಾಂಗ್ರೆಸ್‌ನ ಒಂದು ಸಣ್ಣ ರೂಪವನ್ನು ಅವರು ತಿಳಿಸಿದ್ದಾರೆ. ವಾಸ್ತವವಾಗಿ ಇಡೀ ಕಾಂಗ್ರೆಸ್ ಜನರಿಂದ ದೂರ ಹೋಗಿದೆ, ಇದು ನೈಜ ಸ್ಥಿತಿಯಾಗಿದೆ.

ಗುಲಾಮ್ ನಬಿ ಆಜಾದ್

ನವ ದೆಹಲಿ : ನಮ್ಮ ನಾಯಕರ ಮುಖ್ಯ ಸಮಸ್ಯೆ ಏನೆಂದರೆ, ಟಿಕೆಟ್ ಪಡೆದ ನಂತರ ಅವರು ಮೊದಲು ಪಂಚತಾರಾ ಹೋಟೆಲ್ ಕಾಯ್ದಿರಿಸುತ್ತಾರೆ. ಅಲ್ಲಿಯೂ ಸಹ ಅವರಿಗೆ ಡಿಲಕ್ಸ್ ಕೊಠಡಿ ಬೇಕಾಗಿರುತ್ತದೆ. ಹವಾನಿಯಂತ್ರಿತ ಚತುಷ್ಚಕ್ರ ವಾಹನಗಳಿಲ್ಲದೆ ಅವರು ಹೊರಬರುವುದಿಲ್ಲ. ಎಲ್ಲಿ ರಸ್ತೆಗಳು ಉತ್ತಮವಾಗಿಲ್ಲ ಆ ಸ್ಥಳಗಳಿಗೆ ಅವರು ಹೋಗುವುದಿಲ್ಲ. ಪಂಚತಾರಾ ಹೋಟೆಲ್‌ಗಳಿಂದ ಚುನಾವಣೆಗಳು ಸ್ಪರ್ಧಿಸಲು ಸಾಧ್ಯವಿಲ್ಲ. ಎಲ್ಲಿಯ ವರೆಗೆ ಈ ಸಂಸ್ಕೃತಿ ಬದಲಾಯಿಸುವುದಿಲ್ಲವೋ, ಅಲ್ಲಿಯವರೆಗೆ ನಾವು ಗೆಲ್ಲುವುದಿಲ್ಲ, ಎಂಬ ಶಬ್ದಗಳ ಮೂಲಕ ಕಾಂಗ್ರೆಸ್ ಮುಖಂಡ ಗುಲಾಮ್ ನಬಿ ಆಜಾದ್ ಅವರು ಪಕ್ಷದ ಕಾರ್ಯವೈಖರಿಯನ್ನು ಟೀಕಿಸಿದ್ದಾರೆ. (ಆಝಾದ್‌ರವರು ಕಾಂಗ್ರೆಸ್ ಈಗ ಚುನಾವಣೆಯಲ್ಲಿ ಗೆಲ್ಲುತ್ತದೆ ಎಂಬ ಭರವಸೆಯನ್ನು ತ್ಯಜಿಸಿ ಅದರ ಅಸ್ತಿತ್ವವನ್ನು ಉಳಿಸಿಕೊಳ್ಳಲು ಪ್ರಯತ್ನಿಸಿದರೆ ಸಾಕು, ಎಂದು ಜನರಿಗೆ ಅನಿಸುತ್ತದೆ ! – ಸಂಪಾದಕ) ಕೆಲವು ದಿನಗಳ ಹಿಂದೆಯೇ ಇನ್ನೋರ್ವ ಹಿರಿಯ ನಾಯಕ ಹಾಗೂ ಮಾಜಿ ಕೇಂದ್ರ ಸಚಿವ ಕಪಿಲ ಸಿಬ್ಬಲ ಇವರೂ ಕೂಡ ಪಕ್ಷದ ಕಾರ್ಯವೈಖರಿಯನ್ನು ಟೀಕಿಸಿದ್ದರು.

ಆಝಾದ ತಮ್ಮ ಮಾತನ್ನು ಮುಂದುವರೆಸುತ್ತಾ, ಅನೇಕರು ನಾಯಕತ್ವವನ್ನು ದೂಷಿಸುತ್ತಿದ್ದಾರೆ; ಆದರೆ ಬ್ಲಾಕ್ ಅಥವಾ ಜಿಲ್ಲಾ ನಾಯಕರು ಸಾರ್ವಜನಿಕರೊಂದಿಗೆ ಸಂಪರ್ಕವನ್ನು ಕಳೆದುಕೊಂಡಿದ್ದಾರೆ. ಯಾವಾಗ ಯಾರಿಗಾದರು ಪದವಿ ಸಿಗುತ್ತದೆಯೋ ಆಗ ಅವರು ಲೆಟರ್ ಪ್ಯಾಡ್, ವಿಸಿಟಿಂಗ್ ಕಾರ್ಡ್‌ಗಳನ್ನು ಮುದ್ರಿಸುತ್ತಾರೆ ಮತ್ತು ಅವರ ಕೆಲಸ ಮುಗಿದಿದೆ ಎಂದು ತಿಳಿದುಕೊಳ್ಳುತ್ತಾರೆ; ಆದರೆ ಇಲ್ಲಿಯೇ ನಿಜವಾದ ಕೆಲಸ ಪ್ರಾರಂಭವಾಗುತ್ತದೆ ಎಂದು ಹೇಳಿದರು.