|
ಇಂತಹ ವಿವಾಹವನ್ನು ‘ಪ್ರೀತಿ’ ಎಂದು ಹೇಳುವ ಜಾತ್ಯತೀತವಾದಿಗಳು ಈಗ ಮೌನವೇಕೆ ? ಅವರು ಚರ್ಚ್‌ಗೆ ಏಕೆ ವಿರೋಧಿಸುತ್ತಿಲ್ಲ ಅಥವಾ ಚರ್ಚ್‌ನ ವಿರೋಧ ಯೋಗ್ಯವಾಗಿದೆ; ಆದರೆ ಹಿಂದೂಗಳು ಇದನ್ನು ‘ಲವ್ ಜಿಹಾದ್’ ಎಂದು ವಿರೋಧಿಸಿದರೆ ಅದು ತಪ್ಪು ಎಂದು ಅವರಿಗೆ ಅನಿಸುತ್ತದೆ ?
ಕೊಚ್ಚಿ (ಕೇರಳ) – ಸ್ಥಳೀಯ ಸಾಯರೋ ಮಲಬಾರ್ ಚರ್ಚ್‌ನ ಕದವಂಥರಾ ಸೇಂಟ್ ಜೋಸೆಫ್ ಚರ್ಚ್‌ನಲ್ಲಿ ನವೆಂಬರ್ ೯ ರಂದು ಮುಸ್ಲಿಂ ಯುವಕ ಮತ್ತು ಕ್ರಿಶ್ಚಿಯನ್ ಯುವತಿಯ ವಿವಾಹವಾಗಿತ್ತು. ಈ ವಿವಾಹದ ಛಾಯಾಚಿತ್ರಗಳನ್ನು ಪತ್ರಿಕೆಗಳಲ್ಲಿ ಪ್ರಕಟಿಸಲಾಗಿತ್ತು. ಇದರಿಂದ ನಡೆದ ವಿವಾದದಿಂದ ಮದುವೆಯನ್ನು ಮಾಡಿಸಿದ ಮಾರ್ ಮ್ಯಾಥ್ಯೂ ವಾನಿಕಿಜಿಕ್ಕಲ್ ಮತ್ತು ಹಾಜರಿದ್ದ ಮತ್ತೊಬ್ಬ ಪಾದ್ರಿಯು ಕ್ಷಮೆಯಾಚಿಸಿರುವ ಘಟನೆ ನಡೆದಿದೆ. ಈ ವಿವಾಹವು ಅಂತರಧರ್ಮೀಯವಾಗಿದ್ದರಿಂದ ಇದಕ್ಕೆ ವಿರೋಧ ವ್ಯಕ್ತವಾಗಿದೆ. ಸಾಯರೋ ಮಲಬಾರ್ ಚರ್ಚ್‌ನ ನಿಯಮಗಳ ಪ್ರಕಾರ ಇಂತಹ ಮದುವೆ ನಡೆಯಲು ಸಾಧ್ಯವಿಲ್ಲ. ಕಾರ್ಡಿನಲ್ ಮಾರ್ ಜಾರ್ಜ್ ಎಲೆನಚೆರಿ ಈ ಘಟನೆಯ ಬಗ್ಗೆ ತನಿಖೆಗೆ ಆದೇಶಿಸಿದ್ದಾರೆ. ಅವರು ಎರ್ನಾಕುಲಂ-ಅಂಗಮಾಲಿ ಡಯಾಸಸಿನ ಆರ್ಚ್‌ಬಿಷಪ್ ಮಾರ್ ಆಂಟೊನಿ ಕಾರಿಲೈ ಅವರಿಂದ ವರದಿಯನ್ನು ಕೋರಿದ್ದಾರೆ.
Kerala: Marriage between Christian woman and Muslim man upsets faithfuls, attending bishop says sorry https://t.co/q4E7sKCjqc
— OpIndia.com (@OpIndia_com) November 23, 2020
ಕೇರಳದಲ್ಲಿ ‘ಲವ್ ಜಿಹಾದ್’ ಹಿಂದೆ ಇಸ್ಲಾಮಿಕ್ ಸ್ಟೇಟ್ ! – ಕ್ಯಾಥೊಲಿಕ್ ಪಾದ್ರಿಗಳ ಸಂಘಟನೆ
ಕೇರಳದ ಕ್ಯಾಥೊಲಿಕ್ ಪಾದ್ರಿಗಳ ಸಂಘಟನೆಯ ಪ್ರಕಾರ, ಇಂತಹ ಘಟನೆಗಳ ಹಿಂದೆ ‘ಲವ್ ಜಿಹಾದ್’ ಸಮಸ್ಯೆ ಇದೆ. ಇದರಲ್ಲಿ ಇಸ್ಲಾಮಿಕ್ ಸ್ಟೇಟ್‌ನ ಕೈವಾಡವಿದೆ. ಲವ್ ಜಿಹಾದ್ ಮೂಲಕ ಮಹಿಳೆಯರನ್ನು ಬಲವಂತವಾಗಿ ಮತಾಂತರಿಸಲಾಗುತ್ತಿದೆ. ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದಂತಹ ಜಿಹಾದಿ ಸಂಘಟನೆಗಳು ಈ ಬಗ್ಗೆ ಮೌನವಾಗಿರುವಂತೆ ಬೆದರಿಕೆ ಹಾಕಿವೆ; ಏಕೆಂದರೆ ಇದು ಸಿಎಎ ಕಾಯ್ದೆಯ ವಿರುದ್ಧ ಅವರ ಚಳುವಳಿಯ ಮೇಲೆ ಒತ್ತಡ ಹೇರುತ್ತದೆ ಎಂದು ಸಂಘಟನೆಗೆ ಅನಿಸುತ್ತದೆ.
ಲವ್ ಜಿಹಾದ್ ತಡೆಯುವ ಬಗ್ಗೆ ಪೊಲೀಸರು ಮತ್ತು ಆಡಳಿತದವರು ಗಂಭೀರವಾಗಿಲ್ಲ ! – ಕೇರಳ ಚರ್ಚ್
ಕೇರಳ ಚರ್ಚ್ ಪ್ರಕಾರ, ಕೆಲವು ತಿಂಗಳ ಹಿಂದೆ ಕೇರಳದ ೨೧ ಜನರು ಇಸ್ಲಾಮಿಕ್ ಸ್ಟೇಟ್‌ಗೆ ಸೇರಿದರು, ಅವರಲ್ಲಿ ಅರ್ಧದಷ್ಟು ಜನರು ಮತಾಂತರಗೊಂಡ ಕ್ರೈಸ್ತರಾಗಿದ್ದರು. ಕೇರಳದಲ್ಲಿ ‘ಲವ್ ಜಿಹಾದ್’ ನಿಲ್ಲಿಸುವ ಬಗ್ಗೆ ಪೊಲೀಸರು ಮತ್ತು ಆಡಳಿತವು ಗಂಭೀರವಾಗಿಲ್ಲ.