ಇಂತಹ ಬೇಡಿಕೆಗಳನ್ನು ಏಕೆ ಮಾಡಬೇಕಾಗುತ್ತದೆ ? ಆಡಳಿತಕ್ಕೆ ಇದು ಗಮನಕ್ಕೆ ಬರುವುದಿಲ್ಲವೇ ?
ಖಾನಾಪುರ (ಕರ್ನಾಟಕ) – ಖಾನಾಪುರ ನಗರದ ಒಂದು ವೃತ್ತಕ್ಕೆ ‘ಟಿಪ್ಪು ಸುಲ್ತಾನ್ ವೃತ್ತ’ ಎಂದು ಮರುನಾಮಕರಣ ಮಾಡಲಾಗಿದೆ. ಈ ಹೆಸರನ್ನು ಬಿಜೆಪಿ ಮತ್ತು ಹಿಂದುತ್ವನಿಷ್ಠ ಸಂಘಟನೆಗಳು ವಿರೋಧಿಸಿವೆ. ಕರ್ನಾಟಕ ಸರಕಾರವು ಟಿಪ್ಪು ಸುಲ್ತಾನದ ಜಯಂತಿಯನ್ನು ರದ್ದುಗೊಳಿಸಿದ್ದು ಆತನಿಗೆ ಸಂಬಂಧಿಸಿದ ಇತಿಹಾಸವನ್ನು ಸಹ ಪಠ್ಯಕ್ರಮದಿಂದ ತೆಗೆದುಹಾಕಲಾಗಿದೆ. ಆದ್ದರಿಂದ ಈ ಹೆಸರನ್ನು ತಕ್ಷಣವೇ ರದ್ದುಪಡಿಸಿ ಆ ವೃತ್ತಕ್ಕೆ ‘ಮಾಜಿ ರಾಷ್ಟ್ರಪತಿ ಎ.ಪಿ.ಜೆ. ಅಬ್ದುಲ್ ಕಲಾಮ್ ವೃತ್ತ’, ಎಂದು ಮರುನಾಮಕರಣ ಮಾಡಬೇಕು ಎಂದು ಭಾಜಪದ ಯುವ ನಾಯಕ ಪಂಡಿತ ಓಗಲೆಯವರ ನೇತೃತ್ವದಡಿಯಲ್ಲಿ ನವೆಂಬರ್ ೧೯ ರಂದು ಬಿಜೆಪಿ, ವಿಶ್ವ ಹಿಂದೂ ಪರಿಷತ್, ಭಜರಂಗದಳದವರು ಕಾಮಗಾರಿ ಇಲಾಖೆಯ ಬಗ್ಗೆ ಧರಣಿ ನಡೆಸಿ ಮನವಿಯನ್ನು ನೀಡಿದೆ. (ಲಕ್ಷಗಟ್ಟಲೆ ಹಿಂದೂಗಳನ್ನು ಮತಾಂತರರಿಸಿದ ಟಿಪ್ಪು ಸುಲ್ತಾನನು ದಕ್ಷಿಣ ಭಾರತದಲ್ಲಿಯ ೭ ಸಾವಿರಕ್ಕೂ ಹೆಚ್ಚು ಹಿಂದೂಗಳ ದೇವಸ್ಥಾನಗಳನ್ನು ಕೆಡವಿದ್ದನು. ಟಿಪ್ಪುವಿನ ದೌರ್ಜನ್ಯದ ಆಡಳಿತದಲ್ಲಿ ಹಿಂದೂ ಯುವತಿಯರನ್ನು ಅಮಾನುಷವಾಗಿ ಹಿಂಸಿಸಿ ಅವರ ಮೇಲೆ ಅತ್ಯಾಚಾರ ಮಾಡಲಾಯಿತು. ಇಂತಹ ಅತ್ಯಾಚಾರಿ ಟಿಪ್ಪುವಿನ ಹೆಸರನ್ನು ವೃತ್ತಕ್ಕೆ ಏಕೆ ನೀಡಬೇಕು ? ಬಿಜೆಪಿ ಸರಕಾರವು ಈ ಬಗ್ಗೆ ಗಮನ ಹರಿಸಿ ತಕ್ಷಣವೇ ಇದರ ಹೆಸರನ್ನು ಹೇಗೆ ಬದಲಾಯಿಸಬಹುದು ಎಂದು ನೋಡಬೇಕು, ಇದುವೇ ಹಿಂದೂಗಳಿಗೆ ಅಪೇಕ್ಷಿತವಾಗಿದೆ ! – ಸಂಪಾದಕ)