ಭಾರತದ ತಪ್ಪಾದ ನಕಾಶೆಯನ್ನು ಪುನರ್ ಪ್ರಸಾರ ಮಾಡಿದ ವಿಶ್ವ ಆರೋಗ್ಯ ಸಂಸ್ಥೆ

ವಿಶ್ವ ಆರೋಗ್ಯ ಸಂಸ್ಥೆಯು ಭಾರತೀಯ ಮಾನಚಿಹ್ನೆ (ನಕಾಶೆ)ಯನ್ನು ಮತ್ತೊಮ್ಮೆ ಅಯೋಗ್ಯ ಪದ್ಧತಿಯಲ್ಲಿ ತೋರಿಸಿದೆ. ಭಾರತವು ಮೂರನೆಯ ಸಲ ಈ ಸಂಸ್ಥೆಗೆ ಎಚ್ಚರಿಕೆಯನ್ನು ನೀಡಿದೆ. ಭಾರತವು ಸಂಘಟನೆಯ ಅಧ್ಯಕ್ಷ ಡಾ. ಟ್ರೆಡಾಸ್ ಇವರಿಗೆ ಪತ್ರವನ್ನು ಬರೆದು ತಪ್ಪನ್ನು ಸುಧಾರಣೆ ಮಾಡಲು ತಿಳಿಸಿದೆ.

ಮುಸ್ಲಿಂ ಹುಡುಗಿಯನ್ನು ಮದುವೆಯಾದ ಹಿಂದೂ ಯುವಕನ ಹತ್ಯೆ

ಆರು ತಿಂಗಳ ಹಿಂದೆ ಶಹನಾಜ್‌ಳನ್ನು ಮದುವೆಯಾದ ೨೭ ವರ್ಷದ ಹಿಂದೂ ಯುವಕ ರಾಧೆ ಚೌಹಾನ್ ಎಂಬವನ ಶವ ಇಲ್ಲಿ ಸಾರ್ವಜನಿಕ ಶೌಚಾಲಯದ ಬಳಿ ಪತ್ತೆಯಾಗಿದೆ. ಆತನ ಶಿರಚ್ಛೇದ ಮಾಡಿ ಹತ್ಯೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಕ್ರಿಶ್ಚಿಯನ್ ಮಿಷನರಿಗಳು ದೊಡ್ಡ ದೇವಾಲಯಗಳ ಬಳಿ ಮತಾಂತರವನ್ನು ಪ್ರೋತ್ಸಾಹಿಸುತ್ತಾರೆ ! – ಚಂದ್ರಬಾಬು ನಾಯ್ಡು, ಅಧ್ಯಕ್ಷರು, ತೆಲುಗು ದೇಶಮ್ ಪಕ್ಷ

‘ಕ್ರಿಶ್ಚಿಯನ್ ಮಿಷನರಿಗಳು ರಾಜ್ಯದ ದೊಡ್ಡ ದೇವಾಲಯಗಳ ಬಳಿ ಮತಾಂತರವನ್ನು ಪ್ರೋತ್ಸಾಹಿಸುತ್ತಿದ್ದಾರೆ’ ಎಂದು ತೆಲುಗು ದೇಶಮ್ ಪಕ್ಷದ ಅಧ್ಯಕ್ಷ ಚಂದ್ರಬಾಬು ನಾಯ್ಡು ಹೇಳಿದ್ದಾರೆ. ಇದರಿಂದ ತೆಲುಗು ದೇಶಂ ಪಕ್ಷದ ೧೩ ಜಿಲ್ಲೆಗಳ ಕ್ರಿಶ್ಚಿಯನ್ ನಾಯಕರು ವಿಜಯವಾಡಾದಲ್ಲಿ ಒಟ್ಟಾಗಿ ಪಕ್ಷಕ್ಕೆ ರಾಜೀನಾಮೆ ನೀಡಿದರು.

ಮೊಘಲರು ಹಿಂದೂ ದೇವಾಲಯಗಳನ್ನು ದುರಸ್ತಿ ಮಾಡುತ್ತಿದ್ದರು ಎಂದು ಎನ್.ಸಿ.ಇ.ಆರ್.ಟಿ.ಯ ೧೨ ನೇ ತರಗತಿಯ ಇತಿಹಾಸ ಪುಸ್ತಕದಲ್ಲಿ ಉಲ್ಲೇಖ !

ಕೇಂದ್ರ ಸರಕಾರಕ್ಕೆ ಒಳಪಡುವ ಎನ್.ಸಿ.ಇ.ಆರ್.ಟಿ.ಯ (‘ನ್ಯಾಶನಲ್ ಕೌಂಸಿಲ್ ಆಫ್ ಎಜ್ಯುಕೇಶನಲ್ ರಿಸರ್ಚ್ ಆಂಡ್ ಟ್ರೇನಿಂಗ್’ನ) ೧೨ ನೇ ತರಗತಿಯ ‘ಥೀಮ್ಸ್ ಆಫ್ ಇಂಡಿಯನ್ ಹಿಸ್ಟ್ರೀ ಪಾರ್ಟ್-ಟು’ ಈ ಇತಿಹಾಸದ ಪುಸ್ತಕದ ಪುಟ ಸಂಖ್ಯ ೨೩೪ರಲ್ಲಿ ಯುದ್ಧದ ಸಮಯದಲ್ಲಿ ಮೊಘಲ್ ಸೈನ್ಯದಿಂದ ನೆಲಸಮಗೊಂಡ ದೇವಾಲಯಗಳ ದುರಸ್ತಿಗೆ ಶಹಜಹಾನ್ ಮತ್ತು ಔರಂಗಜೇಬ್ ಹಣಕಾಸಿನ ನೆರವು ನೀಡಿದ್ದರು ಎಂದು ಉಲ್ಲೇಖಿಸಲಾಗಿದೆ.

‘ನಾಥುರಾಮ್ ಗೋಡ್ಸೆ ದೇಶದ ಮೊದಲ ಭಯೋತ್ಪಾದಕ !(ಅಂತೆ) – ಕಾಂಗ್ರೆಸ್ ಮುಖಂಡ ದಿಗ್ವಿಜಯ ಸಿಂಗ್

‘ಕಾಂಗ್ರೆಸ್ ದೇಶಭಕ್ತರನ್ನು ಅವಮಾನಿಸಲು ಮಾತ್ರ ಕಲಿತಿದೆ. ಅವರ ನಾಯಕರು ‘ಕೇಸರಿ ಭಯೋತ್ಪಾದನೆ’ ಎಂಬ ಪದಗಳನ್ನು ಬಳಸಿದ್ದಾರೆ, ಇದಕ್ಕಿಂತ ನಾಚಿಕೆಗೇಡಿನ ಸಂಗತಿ ಏನಿದೆ ?’ ಎಂದು ಬಿಜೆಪಿಯ ಸಂಸದೆ ಸಾಧ್ವಿ ಪ್ರಜ್ಞಾ ಸಿಂಗ್ ಕಾಂಗ್ರೆಸ್ ನಾಯಕ ದಿಗ್ವಿಜಯ್ ಸಿಂಗ್ ಅವರಿಗೆ ತಿರುಗೇಟು ನೀಡಿದರು.

‘ಗೊಡ್ಸೆ ಜ್ಞಾನಶಾಲೆ’ ಗ್ರಂಥಾಲಯವನ್ನು ಮುಚ್ಚಿದ ಪೊಲೀಸರು !

ಅಖಿಲ ಭಾರತ ಹಿಂದೂ ಮಹಾಸಭಾದಿಂದ ತೆರೆಯಲ್ಪಟ್ಟಿರುವ ‘ಗೊಡ್ಸೆ ಜ್ಞಾನಶಾಲೆ’ ಹೆಸರಿನ ಗ್ರಂಥಾಲಯವನ್ನು ಜಿಲ್ಲಾಡಳಿತವು ಎರಡು ದಿನಗಳಲ್ಲೇ ಮುಚ್ಚಿದೆ. ಎರಡು ದಿನಗಳ ಹಿಂದೆ ಮಧ್ಯಪ್ರದೇಶದ ಅಖಿಲ ಭಾರತ ಹಿಂದೂ ಮಹಾಸಭಾದ ಗ್ವಾಲಿಯರ್‌ನಲ್ಲಿರುವ ಕಚೇರಿಯಲ್ಲಿ ‘ಗೋಡ್ಸೆ ಜ್ಞಾನಶಾಲೆ’ ಎಂಬ ಗ್ರಂಥಾಲಯವನ್ನು ಪ್ರಾರಂಭಿಸಲಾಗಿತ್ತು.

ಸೀತಮಾತೆಯನ್ನು ಅವಮಾನಿಸಿದ್ದಕ್ಕಾಗಿ ತೃಣಮೂಲ ಕಾಂಗ್ರೆಸ್ ಸಂಸದನ ಶಿರಚ್ಛೇದ ಮಾಡುವವರಿಗೆ ೫ ಕೋಟಿ ರೂಪಾಯಿ ನೀಡುವೆವು !

ಸೀತಮಾತೆಯನ್ನು ಅವಮಾನಿಸಿದ ಬಂಗಾಳದ ತೃಣಮೂಲ ಕಾಂಗ್ರೆಸ್ ಸಂಸದ ಕಲ್ಯಾಣ ಬ್ಯಾನರ್ಜಿ ವಿರುದ್ಧ ಬಿಜೆಪಿ ನೀಡಿದ ದೂರಿನ ಮೇರೆಗೆ ಅಪರಾಧ ದಾಖಲಾಗಿದೆ. ಈ ಹಿನ್ನೆಲೆಯಲ್ಲಿ ತಪಸ್ವಿ ಶಿಬಿರದ ಮಹಂತ ಪರಮಹಂಸ ದಾಸ್ ಅವರು ‘ಬ್ಯಾನರ್ಜಿ’ಯ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದಿದ್ದರೆ, ಆತನ ಶಿರಚ್ಛೇದ ಮಾಡುವವರಿಗೆ ೫ ಕೋಟಿ ರೂಪಾಯಿ ಉಡುಗೊರೆಯಾಗಿ ನೀಡಲಾಗುವುದು’, ಎಂದು ಘೋಷಣೆ ಮಾಡಿದ್ದಾರೆ.

ಭಾರತದ ಕೊರೋನಾ ಲಸಿಕೆಯ ಮೇಲೆ ವಿಶ್ವಾಸ ಇಲ್ಲದಿದ್ದರೆ, ಮುಸಲ್ಮಾನರು ಪಾಕಿಸ್ತಾನಕ್ಕೆ ಹೋಗಲಿ ! – ಸಂಗೀತ ಸೋಮ್, ಶಾಸಕ, ಬಿಜೆಪಿ, ಉತ್ತರ ಪ್ರದೇಶ

ಯಾವ ಮುಸಲ್ಮಾನರಿಗೆ ದೇಶದಲ್ಲಿ ನಿರ್ಮಿಸಲಾದ ಕೊರೋನಾ ಲಸಿಕೆಯ ಮೇಲೆ ವಿಶ್ವಾಸವಿಲ್ಲವೋ ಅವರು ಪಾಕಿಸ್ತಾನಕ್ಕೆ ಹೋಗಲಿ, ಎಂದು ಬಿಜೆಪಿ ಶಾಸಕ ಸಂಗೀತ ಸೋಮ್ ಹೇಳಿದ್ದಾರೆ. ಅವರು ‘ಟೈಮ್ಸ್ ನೌ’ ಈ ಸುದ್ಧಿವಾಹಿನಿಯೊಂದಿಗೆ ಮಾತನಾಡುತ್ತಿದ್ದರು.

೧೦೦೦ ಪ್ರೇಯಸಿಯನ್ನು ಹೊಂದಿರುವ ಟರ್ಕಿಯ ಮುಸಲ್ಮಾನ ಪಂಥದ ಮುಖ್ಯಸ್ಥನಿಗೆ ಲೈಂಗಿಕ ಶೋಷಣೆಯ ಪ್ರಕರಣಕ್ಕೆ ಸಂಬಂಧಿಸಿದಂತೆ ೧ ಸಾವಿರದ ೭೫ ವರ್ಷಗಳ ಸೆರೆಮನೆ ಶಿಕ್ಷೆ !

ಸ್ಥಳೀಯ ನ್ಯಾಯಾಲಯವು ಲೈಂಗಿಕ ಕಿರುಕುಳ, ಅಪ್ರಾಪ್ತ ಹುಡುಗಿಯ ಮೇಲೆ ಲೈಂಗಿಕ ದೌರ್ಜನ್ಯ, ವಂಚನೆ, ರಾಜಕೀಯ ಮತ್ತು ಸೈನ್ಯ ಗೂಢಚಾರ ಇತ್ಯಾದಿ ೧೦ ಪ್ರಕರಣಗಳ ಆರೋಪದ ಮೇಲೆ ಮುಸ್ಲಿಂ ಪಂಥದ ಮುಖಂಡ ಅದ್ನಾನ್ ಒಕತಾರಾನನ್ನು ೧೦೭೫ ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ.

ಆಪತ್ಕಾಲೀನ ಮಕರಸಂಕ್ರಾಂತಿಯನ್ನು ಹೇಗೆ ಆಚರಿಸಬೇಕು ?

ನಮ್ಮಲ್ಲಿರುವ ‘ಸತ್ತ್ವಗುಣವನ್ನು ವೃದ್ಧಿಸುವುದು ಯಾವುದೇ ಹಬ್ಬ ಅಥವಾ ಉತ್ಸವವನ್ನು ಆಚರಿಸುವ ಉದ್ದೇಶವಾಗಿರುತ್ತದೆ. ಹಾಗಾಗಿ ಆಪತ್ಕಾಲೀನ ಪರಿಸ್ಥಿತಿಯಿಂದ ರೂಢಿಗನುಸಾರ ಹಬ್ಬ-ಉತ್ಸವಗಳನ್ನು ಆಚರಿಸಲು ಮಿತಿ ಉಂಟಾಗಿದ್ದರೂ ಆಯಾ ಸಮಯದಲ್ಲಿ ಹೆಚ್ಚು ಹೆಚ್ಚು ಈಶ್ವರನ ನಾಮಸ್ಮರಣೆ, ಉಪಾಸನೆ, ನಾಮಜಪ ಇತ್ಯಾದಿಗಳನ್ನು ಮಾಡಿ ಸತ್ತ್ವಗುಣಗಳನ್ನು ಹೆಚ್ಚಿಸಲು ಪ್ರಯತ್ನಿಸಬೇಕು.