|
ಇಸ್ತಾಂಬುಲ್ (ಟರ್ಕಿ) – ಸ್ಥಳೀಯ ನ್ಯಾಯಾಲಯವು ಲೈಂಗಿಕ ಕಿರುಕುಳ, ಅಪ್ರಾಪ್ತ ಹುಡುಗಿಯ ಮೇಲೆ ಲೈಂಗಿಕ ದೌರ್ಜನ್ಯ, ವಂಚನೆ, ರಾಜಕೀಯ ಮತ್ತು ಸೈನ್ಯ ಗೂಢಚಾರ ಇತ್ಯಾದಿ ೧೦ ಪ್ರಕರಣಗಳ ಆರೋಪದ ಮೇಲೆ ಮುಸ್ಲಿಂ ಪಂಥದ ಮುಖಂಡ ಅದ್ನಾನ್ ಒಕತಾರಾನನ್ನು ೧೦೭೫ ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ. ಅದೇರೀತಿ ಆತನ ಇಬ್ಬರು ಕಾರ್ಯಕರ್ತರಾದ ಟರಕಾನ್ ಮತ್ತು ಒಕತಾರಾಗೆ ಶಿಕ್ಷೆ ವಿಧಿಸಿದ್ದಾರೆ. ಇದರಲ್ಲಿ ಟರಕಾನಗೆ ೨೧೧ ವರ್ಷ ಮತ್ತು ಒಕತಾರಾಗೆ ೧೮೬ ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ. (ಅಸಂಬದ್ಧ ಶಿಕ್ಷೆ ! ಒಬ್ಬ ವ್ಯಕ್ತಿ ಇಷ್ಟು ವರ್ಷಗಳ ಕಾಲ ಬದುಕಬಹುದೇ ? – ಸಂಪಾದಕ) ಅದ್ನಾನ್ ಅಂತರಜಾಲದಲ್ಲಿ ತನ್ನದೇ ಆದ ಒಂದು ಧಾರ್ಮಿಕ ವಾಹಿನಿಯನ್ನು ನಡೆಸುತ್ತಿದ್ದ. ತನ್ನ ಕಾರ್ಯಕ್ರಮಗಳಲ್ಲಿ ಮನುಷ್ಯನ ಜನ್ಮದ ರಹಸ್ಯ ಮತ್ತು ಸಾಂಪ್ರದಾಯಿಕ ಚಿಂತನೆಯ ಬಗ್ಗೆ ಬೋಧಿಸಿದಾಗಲೆಲ್ಲಾ, ಅವನ ಸುತ್ತಲೂ ಅನೇಕ ಅರೆನಗ್ನ ಯುವತಿಯರು ನರ್ತಿಸುತ್ತಿರುವುದನ್ನು ಕಂಡುಬರುತ್ತಿತ್ತು.
Turkish TV Preacher Jailed For 1,000 Years Over Sex Crimes https://t.co/5mOAvroxaR
— Kashmir Observer (@kashmirobserver) January 12, 2021
೧. ಅದ್ನಾನ್ ಯಾವ ಮಹಿಳೆಯ ಮೇಲೆ ಲೈಂಗಿಕ ದೌರ್ಜನ್ಯ ಮಾಡುತ್ತಿದ್ದನೋ ಆಕೆಗೆ ಗರ್ಭನಿರೋಧಕ ಮಾತ್ರೆಗಳನ್ನು ತೆಗೆದುಕೊಳ್ಳಲು ಒತ್ತಾಯಿಸುತ್ತಿದ್ದ, ಎಂದು ಮಹಿಳೆಯೊಬ್ಬರು ನ್ಯಾಯಾಲಯದಲ್ಲಿ ಹೇಳಿಕೆ ನೀಡಿದ್ದಾರೆ. ಅದ್ನಾನ್ ಮನೆಯಿಂದ ೬೯ ಗರ್ಭನಿರೋಧಕ ಮಾತ್ರೆಗಳನ್ನು ವಶಪಡಿಸಿಕೊಳ್ಳಲಾಗಿದೆ.
೨. ತನ್ನ ಬಳಿ ೧ ಸಾವಿರ ಪ್ರಿಯತಮೆಯರು ಇದ್ದಾರೆ ಎಂದು ಅದ್ನಾನ್ ಹೇಳಿಕೊಂಡಿದ್ದ. ‘ನನಗೆ ಮಹಿಳೆಯರ ಬಗ್ಗೆ ತುಂಬಾ ಪ್ರೀತಿ ಇದೆ. ಪ್ರೀತಿ ಮಾನವ ಗುಣಧರ್ಮವಾಗಿದ್ದು ಪ್ರೀತಿ ಮಾಡುವುದು ಇದು ಮುಸ್ಲಿಮ್ ವ್ಯಕ್ಯಿಯ ವೈಶಿಷ್ಟ್ಯವಾಗಿದೆ’, ಎಂದು ಅದ್ನಾನ್ ನ್ಯಾಯಾಲಯಕ್ಕೆ ತಿಳಿಸಿದ್ದ.