ಕಾನೂನು ಸುವ್ಯವಸ್ಥೆ ನೆಪವೊಡ್ಡಿ ಪೊಲೀಸರಿಂದ ಕ್ರಮ !
|
ಗ್ವಾಲಿಯರ್ – ಅಖಿಲ ಭಾರತ ಹಿಂದೂ ಮಹಾಸಭಾದಿಂದ ತೆರೆಯಲ್ಪಟ್ಟಿರುವ ‘ಗೊಡ್ಸೆ ಜ್ಞಾನಶಾಲೆ’ ಹೆಸರಿನ ಗ್ರಂಥಾಲಯವನ್ನು ಜಿಲ್ಲಾಡಳಿತವು ಎರಡು ದಿನಗಳಲ್ಲೇ ಮುಚ್ಚಿದೆ. ಎರಡು ದಿನಗಳ ಹಿಂದೆ ಮಧ್ಯಪ್ರದೇಶದ ಅಖಿಲ ಭಾರತ ಹಿಂದೂ ಮಹಾಸಭಾದ ಗ್ವಾಲಿಯರ್‌ನಲ್ಲಿರುವ ಕಚೇರಿಯಲ್ಲಿ ‘ಗೋಡ್ಸೆ ಜ್ಞಾನಶಾಲೆ’ ಎಂಬ ಗ್ರಂಥಾಲಯವನ್ನು ಪ್ರಾರಂಭಿಸಲಾಗಿತ್ತು. ಆಡಳಿತವು ಗ್ರಂಥಾಲಯದ ವಸ್ತುಗಳನ್ನು ಮುಟ್ಟುಗೋಲು ಹಾಕಿಕೊಂಡಿದೆ. ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಕ್ರಮ ಕೈಗೊಳ್ಳಲಾಗಿದೆ ಎಂದು ಆಡಳಿತ ಹೇಳಿದೆ.
Nathuram Godse library in #MadhyaPradesh's Gwalior shuts 2 days after opening.https://t.co/5Tmf41wGfJ
— Zee News English (@ZeeNewsEnglish) January 13, 2021
(ಸೌಜನ್ಯ : Search Soon)
ಗ್ವಾಲಿಯರ್ ಪೊಲೀಸ್ ಅಧೀಕ್ಷಕ ಅಮಿತ್ ಸಂಘಿ ಮಾತನಾಡಿ, “ಹಿಂದೂ ಮಹಾಸಭಾ ಸದಸ್ಯರೊಂದಿಗೆ ಸಭೆ ನಡೆಸಲಾಯಿತು ಮತ್ತು ಜ್ಞಾನ ಶಾಲೆಯನ್ನು ಮುಚ್ಚಲಾಯಿತು. ‘ಗೋಡ್ಸೆ ಜ್ಞಾನಶಾಲೆ’ ಹೆಸರಿನಲ್ಲಿ ಸಾಮಾಜಿಕ ಮಾಧ್ಯಮಗಳಲ್ಲಿ ಗಂಭೀರ ಸಂದೇಶಗಳು ಹರಡುತ್ತಿದ್ದವು. ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಜಿಲ್ಲಾಧಿಕಾರಿಯು ಈ ಪ್ರದೇಶದಲ್ಲಿ ಸೆಕ್ಷನ್ ೧೪೪ ಜಾರಿಗೊಳಿಸಿದ ಮರುದಿನ ಗ್ರಂಥಾಲಯವನ್ನು ಮುಚ್ಚಲಾಯಿತು. ಈ ವಾಚನಾಲಯದ ಮೂಲಕ ಯುವಕರ ತನಕ ನಾಥುರಾಮ್ ಗೋಡ್ಸೆ ಅವರ ವಿಚಾರಗಳನ್ನು ತಲುಪಿಸುವ ಧ್ಯೇಯವಿತ್ತು.