ತಪಸ್ವಿ ಶಿಬಿರದ ಮಹಂತ್ ಪರಮಹಂಸ ದಾಸರ ಘೋಷಣೆ !
ಅಯೋಧ್ಯೆ (ಉತ್ತರ ಪ್ರದೇಶ) – ಸೀತಮಾತೆಯನ್ನು ಅವಮಾನಿಸಿದ ಬಂಗಾಳದ ತೃಣಮೂಲ ಕಾಂಗ್ರೆಸ್ ಸಂಸದ ಕಲ್ಯಾಣ ಬ್ಯಾನರ್ಜಿ ವಿರುದ್ಧ ಬಿಜೆಪಿ ನೀಡಿದ ದೂರಿನ ಮೇರೆಗೆ ಅಪರಾಧ ದಾಖಲಾಗಿದೆ. ಈ ಹಿನ್ನೆಲೆಯಲ್ಲಿ ತಪಸ್ವಿ ಶಿಬಿರದ ಮಹಂತ ಪರಮಹಂಸ ದಾಸ್ ಅವರು ‘ಬ್ಯಾನರ್ಜಿ’ಯ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದಿದ್ದರೆ, ಆತನ ಶಿರಚ್ಛೇದ ಮಾಡುವವರಿಗೆ ೫ ಕೋಟಿ ರೂಪಾಯಿ ಉಡುಗೊರೆಯಾಗಿ ನೀಡಲಾಗುವುದು’, ಎಂದು ಘೋಷಣೆ ಮಾಡಿದ್ದಾರೆ. ಮಹಂತ ಪರಮಹಂಸ ದಾಸ ಇವರು ಬ್ಯಾನರ್ಜಿಯವರ ಮೇಲೆ ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ. ‘ರಾಜಕೀಯಕ್ಕಾಗಿ ದೇವರನ್ನು ಅವಮಾನಿಸಲಾಗುತ್ತಿದೆ, ಅದನ್ನು ತಕ್ಷಣವೇ ನಿಲ್ಲಿಸಬೇಕು’, ಎಂದು ದಾಸ್ ಹೇಳಿದರು.